ಬೆಳಗಾವಿ:ಸಚಿವೆ ಲಕ್ಷ್ಮೀ ಹೆಬ್ಬಾಳಕರ ಹಾಗೂ ಗೋಕಾಕ್ ಶಾಸಕ ರಮೇಶ್ ಜಾರಕಿಹೊಳಿ ಗಡಿ ಜಿಲ್ಲೆ ಬೆಳಗಾವಿಯ ಪ್ರಭಾವಿ ನಾಯಕರು. ಈ ಹಿಂದೆ ಜಿಲ್ಲಾ ರಾಜಕಾರಣದಲ್ಲಿ ಅತ್ಯಾಪ್ತರಾಗಿದ್ದ ಈ ನಾಯಕರು ಇಂದು ಇಬ್ಬಾಗವಾಗಿದ್ದಾರೆ.
ರಾಜಕೀಯವಾಗಿ ಈ ಇಬ್ಬರ ಮಧ್ಯೆಯೂ ಹಠ ಸಾಧಿಸುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಹೆಬ್ಬಾಳಕರ ಸೋಲಿಸಲು ಪಣ ತೊಟ್ಟಿದ್ದ ರಮೇಶ್‌ಗೆ ನಿರೀಕ್ಷಿತ ಫಲ ದೊರೆತಿಲ್ಲ. ಕಾಂಗ್ರೆಸ್ ಗ್ಯಾರಂಟಿಗಳ ಸುನಾಮಿಗೆ ರಮೇಶ್ ಪ್ರಯತ್ನಗಳೆಲ್ಲ ಕೊಚ್ಚಿಹೋದವು. ಈಗ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತ್ತೊಂದು ಹಠ ಸಾಧಿಸಿದ್ದಾರೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದ ರಮೇಶ್‌ಗೆ ಸರ್ಕಾರ ಸೆವೆನ್ ಮಿನಿಸ್ಟರ್ ಕ್ವಾಟರ್ಸ್ ನಿವಾಸವನ್ನು ಅಲೋಟ್ ಮಾಡಿತ್ತು. ಕೆಲ ದಿನಗಳಲ್ಲಿ ಮಂತ್ರಿಸ್ಥಾನ ಕಳೆದುಕೊಂಡಿದ್ದ ರಮೇಶ್ ಜಾರಕಿಹೊಳಿ ಸರ್ಕಾರಿ ನಿವಾಸ ಬಿಟ್ಟು ಕೊಡಬೇಕಾಯಿತು.
ಈಗ ಸಿದ್ದರಾಮಯ್ಯ ಸರ್ಕಾರದಲ್ಲಿ ಮಂತ್ರಿ ಆಗಿರುವ ಲಕ್ಷ್ಮಿ ಹೆಬ್ಬಾಳಕರಗೆ ಅದೇ ಸವೆನ್ ಮಿನಿಸ್ಟರ್ ಕ್ವಾಟರ್ಸ್ ಸಿಕ್ಕಿದೆ. ಈ ಹಿಂದೆ ರಮೇಶ್ ಜಾರಕಿಹೊಳಿ ಅವರಿಗೆ ಅಲೌಟ್ ಆಗಿದ್ದ ಬ್ಲಾಕ್ ನಂಬರ್ 4 ಈಗ ಲಕ್ಷ್ಮೀ ಹೆಬ್ಬಾಳಕರಗ ಅವರಿಗೆ ಅಲೌಟ್ ಆಗಿರುವುದು ವಿಶೇಷವಾಗಿದೆ.
ರಮೇಶ್ ಜಾರಕಿಹೊಳಿ ಅವರಿಗೆ ಸೆವನ್ ಮಿನಿಸ್ಟರ್ ಕ್ವಾಟರ್ಸ್ ನಲ್ಲಿ ನಿವಾಸ ಅಲೌಡ್ ಆಗಿದ್ದರೂ ಸಹ ಈ ಮನೆಗೆ ಸಾಹುಕಾರ್ ರಮೇಶ್ ಜಾರಕಿಹೊಳಿ ಒಂದು ಬಾರಿಯೂ ಹೋಗಿರಲಿಲ್ಲ.ಆದ್ರೆ ಅದೇ ಮನೆ ಈಗ ಲಕ್ಷ್ಮೀ ನಿವಾಸವಾಗಿದೆ.