Breaking News

ಶಿಕ್ಷಣ ಸಂಸ್ಥೆ ಆರಂಭಿಸುವ ಕನಸು ಇದೆ- ಲಕ್ಷ್ಮೀ ಹೆಬ್ಬಾಳಕರ್

ಬೆಳಗಾವಿ : ರಾಜಕಾರಣ ಕೇವಲ ಚುನಾವಣೆಗೆ ಸೀಮಿತ. ಚುನಾವಣೆ ನಂತರ ರಾಜಕಾರಣವಿಲ್ಲ, ಕೇವಲ ಅಭಿವೃದ್ಧಿ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಹೇಳಿದ್ದಾರೆ.

ಬೆಳಗುಂದಿಯಲ್ಲಿ ಭವ್ಯ ಶ್ರೀ ರವಳನಾಥ ಮಂದಿರದ ವಾಸ್ತುಶಾಂತಿ, ಮೂರ್ತಿಯ ಪ್ರಾಣ ಪ್ರತಿಷ್ಟಾಪನೆ ಹಾಗೂ ಕಳಸಾರೋಹಣ ಸೋಹಳಾದಲ್ಲಿ ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಚುನಾವಣೆ ಸಂದರ್ಭದಲ್ಲಿ ಮಾತ್ರ ನಾನು ರಾಜಕಾರಣ ಮಾಡುತ್ತೇನೆ, ನಂತರ ರಸ್ತೆ, ಗಟಾರ, ಶಾಲೆ, ನೀರು ಸೇರಿದಂತೆ ಪಕ್ಷಾತೀತವಾಗಿ ಕ್ಷೇತ್ರದ ಅಭಿವೃದ್ಧಿಗೆ ನನ್ನ ಆದ್ಯತೆ. ಇಡೀ ಕ್ಷೇತ್ರದಲ್ಲಿ ಯಾವ ರೀತಿಯಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳು ನಡೆಯುತ್ತಿವೆ ಎನ್ನುವುದನ್ನು ನೋಡುತ್ತಿದ್ದೀರಿ. 140 ದೇವಸ್ಥಾನಗಳ ನಿರ್ಮಾಣ ಇಲ್ಲವೇ ಜೀರ್ಣೋದ್ಧಾರ ಮಾಡಲಾಗಿದೆ. ಕ್ಷೇತ್ರವನ್ನು ಮಾದರಿಯಾಗಿ ಅಭಿವೃದ್ಧಿಯತ್ತ ಕೊಂಡೊಯ್ಯಲಾಗುತ್ತಿದೆ ಎಂದು ಸಚಿವರು ಹೇಳಿದರು.
ಈ ಭಾಗದಲ್ಲಿ ಸರಕಾರದಿಂದ ಅತ್ಯುತ್ತಮ ಕಾಲೇಜು, ಅತ್ಯುತ್ತಮ ಶಿಕ್ಷಣ ಸಂಸ್ಥೆ ಆರಂಭಿಸುವ ಕನಸು ಇದೆ. ಆ ಕುರಿತು ಪ್ರಯತ್ನ ಮಾಡುತ್ತಿದ್ದೇನೆ. ಹಿಂದುಸ್ತಾನದಲ್ಲಿ ಜನಿಸಿರುವುದಕ್ಕೆ, ಗ್ರಾಮೀಣ ಕ್ಷೇತ್ರದ ಮನೆ ಮಗಳಾಗಿರುವುದಕ್ಕೆ ನನಗೆ ಹೆಮ್ಮೆ ಇದೆ. ನಿಮ್ಮೆಲ್ಲರ ಆಶಿರ್ವಾದದಿಂದ ಮಂತ್ರಿಯಾಗಿ ರಾಜ್ಯದ ಸೇವೆ ಮಾಡುವ ಅವಕಾಶ ಸಿಕ್ಕಿದೆ. ಬಹಳ ಉತ್ಸಾಹದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೀರಿ. ಎಲ್ಲರಿಗೂ ಸಮೃದ್ಧಿ, ನೆಮ್ಮದಿ ಸಿಗಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಚಿವರು ಹೇಳಿದರು.
ಸುಮಾರು 25 ಲಕ್ಷ ರೂ.ಗಳ ವೆಚ್ಚದಲ್ಲಿ ದೇವಸ್ಥಾನ ಜೀರ್ಣೋದ್ಧಾರ ಗೊಳಿಸಲಾಗಿದೆ.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಶಿವಾಜಿ ಬೋಕಡೆ, ಯುವರಾಜ ಕದಂ, ದಯಾನಂದ ಗಾವಡಾ, ಅಶೋಕ ಗಾವಡಾ, ಜ್ಯೋತಿಬಾ ಪಗರೆ, ಶಿವಾಜಿ ಬೆಟಗೇರಿಕರ್, ಯಲ್ಲಪ್ಪ ಡೇಕೋಳ್ಕರ್, ಪ್ರಹ್ಲಾದ ಚಿರಮುರಕರ್, ರೆಹಮಾನ್ ತಹಶಿಲ್ದಾರ, ರಾಮಚಂದ್ರ ಪಾಟೀಲ, ಆನನದ ಜಾಧವ್, ಎಸ್.ಎಂ.ಬೆಳವಟ್ಕರ್, ಮಹೇಶ ಪಾಟೀಲ, ಗುರುನಾಥ್ ಪಾಟೀಲ, ರಘು ಖಂಡೇಕರ್, ಅಪ್ಪಾಜಿ ಶಿಂಧೆ, ರಾಮದೇವ್ ಮೊರೆ, ಪ್ರತಾಪ್ ಸುತಾರ್, ಸುರೇಶ ಕೀಣೆಕರ್, ಸೋಮ‌ನಗೌಡ‌ ಮುಂತಾದವರು ಉಪಸ್ಥಿತರಿದ್ದರು.

Check Also

ಬೆಳಗಾವಿಗೆ ವಂದೇ ಭಾರತ ರೈಲು ಬರತೈತಿ ಅಂತಾ ಅವರು ಹೇಳಿದ್ದಾರೆ,ಇವರು ತಿಳಿಸಿದ್ದಾರೆ

ಬೆಳಗಾವಿಗೆ ಹೊಸ ವಂದೇ ಭಾರತ ರೈಲು ಬರತೈತಿ ಅಂತಾ ದೆಹಲಿಯವರು ಹೇಳಿದ್ದಾರೆ ಬೆಳಗಾವಿಯವರು ತಿಳಿಸಿದ್ದಾರೆ. ಬೆಂಗಳೂರು ಧಾರವಾಡ ನಡುವೆ ಸದ್ಯ …

Leave a Reply

Your email address will not be published. Required fields are marked *