ಬೆಳಗಾವಿ: ದೇಶಕ್ಕೆ ಸಮಾನತೆಯನ್ನು ಸಾರಿದ ವಿಶ್ವಗುರು ಬಸವಣ್ಣನವರು ಸ್ಥಾಪಿಸಿದ ಲಿಂಗಾಯತ ಧರ್ಮಕ್ಕೆ ಸಂವಿದಾನಾತ್ಮಕ ಮಾನ್ಯತೆ ನೀಡುವಂತೆ ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ್ ಇವರ ನೇತೃತ್ವದಲ್ಲಿ ಬೆಳಗಾವಿಯ ಲಿಂಗಾಯತ ಸಂಘಟನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿತು.
ನಗರದಲ್ಲಿ ಈ ಕುರಿತು ಮನವಿಯೊಂದನ್ನು ಸಲ್ಲಿಸಿ ವಿಶ್ವಗುರು ಬಸವಣ್ಣವರು ಧೀನ ದಲಿತ ಬಗ್ಗೆ ನೊಂದು ಬೆಂದವರ ಬಗ್ಗೆ ಅವರು ತೊರಿದ ಕಳಕಳಿ ಹೋರಾಟ ಇತಿಹಾಸದಲ್ಲಿಯೇ ಅಪರೂಪವಾಗಿದೆ. ರಾಜ್ಯದಲ್ಲಿ 12 ನೇ ಶತಮಾನದಲ್ಲಿ ಒಡೆದುಹೋದ ಮಾನವ ಕುಲವನ್ನು ಒಂದು ಮಾಡಲು ಬಸವಣ್ಣನವರು ಹಾಗೂ ಅವರ ಸಮಕಾಲಿನ ಶರಣರು ಸಮಗ್ರ ಕ್ರಾಂತಿಯನ್ನು ಮಾಡಿದ್ದರು. ದಲಿತ ಅಸ್ಪ್ರುರ್ಶತೆ ಮಹಿಳೆಯರಿಂದ ಶೋಷಿತ ಕೂಲಿ ಕಾರ್ಮಿಕರಿಂದ ಹಿಂದೂಯೆತರ ಅವೈದಿಕ ಸ್ವತಂತ್ರ ವಿಚಾರಗಳುಳ್ಳ ಸ್ವತಂತ್ರ ಲಿಂಗಾಯತ ಧರ್ಮವನ್ನು ಸ್ಥಾಪಿಸಿದರು. ಶಾಂತಿ, ಪ್ರೀತಿ, ಸಹಬಾಳ್ವೆಯ ಕಾಯಕ ನಿಷ್ಟೆ ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು ನೀಡಿದ ಶರಣರು. ಜಗತ್ತು ಕಂಡ ಕ್ರಾಂತಿಕಾರಿ ಹರಿಕಾರರು ಗೌತಮ ಬುದ್ದರ ನಂತರ ಸಮಾಜದಲ್ಲಿನ ಮೌಢ್ಯತೆ,ಕಂದಾಚಾರ ಮೂಡನಂಬಿಕೆ, ಜಾತೀಯತೆ, ಅಸ್ಪ್ರುಶ್ಯತೆ ಬೇರು ಸಮೇತ ಕಿತ್ತು ವರ್ಗ, ವರ್ಣ, ಲಿಂಗ, ಆಶ್ರಮ ವ್ಯವಸ್ತೆಗಳನ್ನು ಪರಿಪೂರ್ಣವಾದ ಹೊಸ ಧರ್ಮವನ್ನು ಬಸವಣ್ಣನವರು ಸ್ಥಾಪಿಸಿದ್ದಾರೆ . ಎಂದು ಮುಖ್ಯ ಮಂತ್ರಿಗಳಿಗೆ ಮನವರಿಕೆ ಮಾಡಿಕೊಡಲಾಯಿತು
ಕಾನೂನಾತ್ಮಕವಾಗಿ ಹಾಗೂ ಸೈದಾಂತಿಕವಾಗಿ ಲಿಂಗಾಯತ ಧರ್ಮವನ್ನು ಒಂದು ಸ್ವಂತಂತ್ರ ಧರ್ಮವೆಂದು ಆಂಗ್ಲರ ಅನೇಕ ಗ್ಯಾಜೆಟ್‍ಗಳಲ್ಲಿ ಗ್ರಂಥಗಳಲ್ಲಿ ಸಾಬೀತಾಗಿದೆ ರಾಷ್ಟ್ರೀಯ ಜನಗಣತಿ ವರದಿಯಲ್ಲೂ ಲಿಂಗಾಯತ ಧರ್ಮವೂ ಸ್ವತಂತ್ರ ಧರ್ಮವೆಂದು ಸಾಭೀತವಾಗಿದೆ. ಲಿಂಗಾಯತ ಧರ್ಮವೂ ತನ್ನ ಸಂಸ್ಕøತಿಕ ಸೈದಾಂತಿಕ ನೆಲೆಗಳನ್ನು ಉಳಿಸಿಕೊಳ್ಳಲು ಲಿಂಗಾಯತ ಧರ್ಮಕ್ಕೆ ಸಂವಿಧಾನಾತ್ಮಕ ಮಾನ್ಯತೆ ಮತ್ತು ಅಲ್ಪಸಂಖ್ಯಾತ ಸ್ಥಾನ ನೀಡಬೇಕೆಂದು ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಮನವಿಯಲ್ಲಿ ವಿನಂತಿಸಿಕೊಳ್ಳಲಾಗಿದೆ.
ಲಿಂಗಾಯತ ಸೇನೆಯ ಅಧ್ಯಕ್ಷ ಸುರೇಶ ಕಿರಾಯಿ, ಶಶಿಭೂಷಣ ಪಾಟೀಲ ಯರು ಪಾಟೀಲ ಸೇರಿದಮತೆ ವಿವಿಧ ಲಿಂಗಾಯತ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು
Check Also
ರಮೇಶ್ ಕತ್ತಿ, ರಾಜೀನಾಮೆ ಪತ್ರದಲ್ಲಿ ಏನಿದೆ ಗೊತ್ತಾ…?
ಮಾನ್ಯ ಮುಖ್ಯ ಕಾರ್ಯನಿರ್ವಾಹಕರು ದಿ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿ.ಬೆಳಗಾವಿ ವಿಷಯ- ನನ್ನ ಅಧ್ಯಕ್ಷ ಸ್ಥಾನಕ್ಕೆ …