ಬೆಳಗಾವಿ-ಬೆಳಗಾವಿ ತಾಲೂಕಿನ ಬಳಿಯ ಮುತ್ನಾಳ ಗ್ರಾಮದ ಗ್ರಾಮಸ್ಥರಿಗೆ ಸ್ಮಶಾನ ಭೂಮಿ ಇಲ್ಲದ್ದರಿಂದ ಬಹಳ ತೊಂದರೆಯಾಗಿದೆ. ಜಿಲ್ಲಾಡಳಿತ ಸ್ಮಶಾನಕ್ಕಾಗಿ ಕನಿಷ್ಠ ಒಂದು ಎಕರೆ ಜಮೀನು ಗ್ರಾಮದಲ್ಲಿ ಸ್ಮಶಾನಕ್ಕಾಗಿ ಕೊಡಿಸಬೇಕೆಂದು ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಲಕ್ಷ್ಮೀ ಹೆಬ್ಬಾಳಕರ ಗ್ರಾಮಸ್ಥರೊಂದಿಗೆ ತೆರಳಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಸುರೇಶ ಇಟ್ನಾಳ ಅವರಿಗೆ ಮನವಿ ಸಲ್ಲಿಸಿದರು. ಡಾ. ಇಟ್ನಾಳ ಪ್ರತಿಕ್ರಯಿಸಿ ಸದರಿ ಉದ್ದೇಶಕ್ಕೆ ಭೂಮಿ ಖರೀದಿ ಮಾಡಿ ವಿತರಿಸಲು
ಜಿಲ್ಲಾಧಿಕಾರಿ ಎನ್. ಜಯರಾಮ ಅವರೊಂದಿಗೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು. ಲಕ್ಷ್ಮೀ ಹೆಬ್ಬಾಳಕರ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಮುತ್ನಾಳದಲ್ಲಿ ಸರಕಾರಿ ಜಾಗದ ಲಭ್ಯತೆ ಇಲ್ಲ. ಖಾಸಗಿ ಜಮೀನು ಖರೀದಿಸಿ ಸ್ಮಶಾನ ಮಾಡಬೇಕು.ಅಂದಾಜು ೫೦ ಲಕ್ಷದವರೆಗೆ ಭೂಮಿ ಖರೀದಿಗೆ ಹಣ ಬೇಕಾಗಬಹುದು ಎಂದು ತಿಳಿಸಿದರು.ಯಾವುದೇ ಪ್ರಯತ್ನ ದ ಮೂಲಕ ಮುತ್ನಾಳ ಗ್ರಾಮದವರಿಗೆ ಸ್ಮಶಾನಭೂಮಿ ಕೊಡಿಸಲಾಗುವುದು ಎಂದು ಅವರು ತಿಳಿಸಿದರು.
