ವೀರಶೈವ ಲಿಂಗಾಯತರಿಗೆ ಒಬಿಸಿ ಪಟ್ಟಿಗೆ ಸೇರಿಸಲು ಗುರು, ವಿರಕ್ತರ ಒತ್ತಾಯ
ಬೆಳಗಾವಿ
ವೀರಶೈವ ಲಿಂಗಾಯತ ಒಳಪಂಗಡಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರ ಒಬಿಸಿ ಮೀಸಲಾತಿಯನ್ನು ನೀಡಬೇಕೆಂದು ಗುರು, ವಿರಕ್ತ ಶ್ರೀಗಳಾದ ಕಾರಂಜಿಮಠದ ಶ್ರೀ ಗುರುಸಿದ್ದ ಸ್ವಾಮೀಜಿ ಹಾಗೂ ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಒತ್ತಾಯಿಸಿದ್ದಾರೆ.
ಸುಮಾರು ವರ್ಷಗಳಿಂದ ವೀರಶೈವ ಲಿಂಗಾಯತ ಸಮಾಜದ ಎಲ್ಲ ಒಳಪಂಗಡಗಳನ್ನು ಒಬಿಸಿ ಮೀಸಲಾತಿಗೆ ಸೇರಿಸಬೇಕೆಂದು ನಾಡಿನ ವಿವಿಧ ಮಠಾಧೀಶರನ್ನು ಒಳಗೊಂಡು ಹೋರಾಟ ನಡೆಸಿ ಸರಕಾರವನ್ನು ಎಚ್ಚರಿಸಲಾಗಿದೆ.
ಕಳೆದ 1990ರಲ್ಲಿ ಮಂಡಳದ ಆಯೋಗದ ಮೂಲಕ ಒಬಿಸಿ ಪ್ರವರ್ಗ ಸೃಷ್ಟಿಸಿ ಶೇ.28ರಷ್ಟು ಮೀಸಲಾತಿಯನ್ನು ಒದಗಿಸಲಾಗಿತ್ತು. ದೇಶ ಹಾಗೂ ರಾಜ್ಯದಲ್ಲಿ ವೀರಶೈವ ಲಿಂಗಾಯತ ಸಮಾಜದ ಒಳಪಂಗಡಗಳು ಇದ್ದಾವೆ. ಕೇಂದ್ರ ಮತ್ತು ರಾಜ್ಯ ಸರಕಾರ ನಮ್ಮ ಸಮಾಜದ ಎಲ್ಲ ಒಳಪಂಗಡಗಳನ್ನು ಒಬಿಸಿ ಮೀಸಲಾತಿಗೆ ಸೇರಿಸಿ ವೀರಶೈವ ಲಿಂಗಾಯತ ಸಮಾಜಕ್ಕೆ ನ್ಯಾಯ ದೊರಕಿಸಿಕೊಡಲು ವೀರಶೈವ ಲಿಂಗಾಯತ ಶಾಸಕ, ಸಚಿವರುಗಳು ಪಕ್ಷಾತೀತವಾಗಿ ಸರಕಾರವನ್ನು ಒತ್ತಾಯಿಸಬೇಕು ಎಂದು ಗುರು, ವಿರಕ್ತ ಶ್ರೀಗಳು ಜಂಟಿ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.