ಬೆಳಗಾವಿ -ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ 4ನೇ ಹಂತದ ಚಳವಳಿಯನ್ನು ಜ. 14 ರಂದು ಕೂಡಲಸಂಗಮದಿಂದ ಬೆಂಗಳೂರಿನ ವರೆಗೆ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಕೂಡಲ ಸಂಗಮ ಪಂಚಮಸಾಲಿ ಪೀಠದ ಶ್ರೀ ಬಸವಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ಶನಿವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಪ್ರತಿ ವರ್ಷ ನಮ್ಮ ಭಕ್ತರು ಅದ್ದೂರಿಯಾಗಿ ಜನ್ಮ ದಿನಾಚಾರಣೆ ಮಾಡುತ್ತಿದ್ದರು. ಆದರೆ ಕೋವಿಡ್-19 ಇರುವುದರಿಂದ ಡಿ.23 ರಂದು ರಾಜ್ಯಾದ್ಯಂತ ರಕ್ತದಾಸೋಹ ಮಾಡಲು ತೀರ್ಮಾನಿಸಿದ್ದಾರೆ. ಸ್ವತಃ ನಾನೇ ಡಿ.22 ರಂದು ಡಾವಣಗೇರಿಯಲ್ಲಿ ರಕ್ತಧಾನ ಮಾಡಿ ಸರಕಾರಕ್ಕೆ ಪಂಚಮಸಾಲಿ ಸಮುದಾಯವನ್ನು 2 ಎ ಮೀಸಲಾತಿ ಮಾಡಲು ಒತ್ತಾಯಿಸಲಾಗುವುದು ಎಂದು ಹೇಳಿದರು.
ಬಸವರಾಜ ರೊಟ್ಟಿ ಮಾತನಾಡಿ, ಡಿ.23 ರಂದು ಶ್ರೀಗಳ ಜನ್ಮದಿನ ಹಾಗೂ ವಿಶ್ವರೈತ ದಿನ ಇರುವುದರಿಂದ ಬೆಳಗಾವಿ ವಿಜಯಾ ಆಸ್ಪತ್ರೆ ಸೇರಿದಂತೆ ರಾಜ್ಯಾದ್ಯಂತ ರಕ್ತಧಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ರುದ್ರಣ್ಣ ಚಂದರಗಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.