Breaking News
Home / Breaking News / ಲೋಕಲ್ ಕಾರ್ಬಾರ್..ಮಟನ್ ಪಾರ್ಟಿ…ಉಳವಿ ಪ್ರವಾಸ…!!!

ಲೋಕಲ್ ಕಾರ್ಬಾರ್..ಮಟನ್ ಪಾರ್ಟಿ…ಉಳವಿ ಪ್ರವಾಸ…!!!

ಬೆಳಗಾವಿ- ಬೆಳಗಾವಿ ತಾಲ್ಲೂಕಿನ ಪುಟ್ಟ ಗ್ರಾಮ,ಈ ಗ್ರಾಮದಲ್ಲಿ ಬರೋದು ಒಂದೇ ವಾರ್ಡು,ಎರಡು ಸ್ಥಾನ.ಒಂದು ಸ್ಥಾನಕ್ಕೆ ಅವಿರೋಧ ಆಯ್ಕೆಯಾಗಿದ್ದು ಇನ್ನೊಂದು ಸ್ಥಾನಕ್ಕೆ ಗ್ರಾಮದ ಇಬ್ಬರು ಬಲಾಡ್ಯರ ನಡುವೆ ಬಿರುಸಿನ ಸ್ಪರ್ದೆ ನಡೆಯುತ್ತಿದೆ.

ಬೆಳಗಾವಿ ತಾಲ್ಲೂಕಿನ ಮುತ್ನಾಳ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ವಿರುಪನಕೊಪ್ಪ ಗ್ರಾಮದಲ್ಲಿ ನಡೆದಿರುವ ಲೋಕಲ್ ವಾರ್ ನಲ್ಲಿ ಗ್ರಾಮದ ಇಬ್ಬರು ಗೌಡ್ರು ಸ್ಪರ್ದೆ ಮಾಡಿದ್ದಾರೆ.ಇಬ್ಬರ ನಡುವೆ ನಡೆಯುತ್ತಿರುವ ಪೈಪೋಟಿ ನೋಡಿದ್ರೆ ಇದೊಂದು ಮಿನಿ ವಿಧಾನಸಭೆ ಸಮರ ಎನ್ನುಂತೆ ಕಾಣುತ್ತಿದೆ.

ಆದ್ರೆ ಈ ವಿರುಪನಕೊಪ್ಪ ಗ್ರಾಮ ನಿನ್ನೆ ರಾತ್ರಿಯಿಂದ ತಲ್ಲಣಗೊಂಡಿದೆ.ಯಾಕಂದ್ರೆ ಚುನಾವಣೆಗೆ ಸ್ಪರ್ದಿಸಿರುವ ಅಭ್ಯರ್ಥಿಯೊಬ್ಬ,ಗ್ರಾಮದ ಯುವಕರಿಗೆ ಪಾರ್ಟಿ ಮಾಡುವಂತೆ ಕುರಿ ಕೊಡಸಿದ್ದ,ಕುರಿ ಮಟನ್ ಪಾರ್ಟಿ ಮಾಡಿದ ಯುವಕರ ಗುಂಪು ಮಾರನೇಯ ದಿನ ಧಾಭಾವೊಂದರಲ್ಲಿ ಪಾರ್ಟಿ ಮಾಡಿದ್ದಾರೆ. ಈ ವಿಷಯ ಕುರಿ ಕೊಡಿಸಿದ ಅಭ್ಯರ್ಥಿಗೆ ಗೊತ್ತಾಗಿ,ನಾನು ನಿಮಗೆ ಕುರಿ ಕೊಡಸಿದ್ದೆ,ಪಾರ್ಟಿ ಮಾಡಿದ್ದೀರಿ,ನನ್ನ ಪಾರ್ಟಿ ತಿಂದ ಮೇಲೆ ಈಗ ಧಾಭಾದಲ್ಲಿ ಮಾಡಿದ ಪಾರ್ಟಿ ಯಾರದ್ದು ? ಅಂತಾ ಕುರಿ ಕೊಡಿಸಿದ ಅಭ್ಯರ್ಥಿ ಯುವಕರ ಮೇಲೆ ಹಲ್ಲೆ ಮಾಡಿದ್ದಾನೆ.ಎಂದು ತಿಳಿದು ಬಂದಿದೆ.

ಪಾರ್ಟಿ ಮಾಡಿದ ಯುವಕರಿಗೆ ಅಭ್ಯರ್ಥಿಯೇ ಥಳಿಸಿದ್ದಾನೆ ಎಂದು ಗೊತ್ತಾಗಿದ್ದು, ಈ ಕುರಿತು ಕಂಪ್ಲೇಂಟ್ ಮಾಡಿದ್ರೆ ಊರು ಬಿಡಿಸುತ್ತೇನೆ ಎಂದು ಬೆದರಿಸಿದ ಕಾರಣ.ಕುರಿ ತಿಂದು ಜೊತೆಗೆ ಏಟು ತಿಂದವರು ಗೌಡನ ಬೆದರಿಕೆಗೆ ಹೆದರಿ. ಸುಮ್ಮನಾಗಿದ್ದು.ಈ ಘಟನೆ ನಡೆದ ಬಳಿಕ ಈಗ ವಿರುಪನಕೊಪ್ಪ ಗ್ರಾಮ ಈಗ ಶಾಂತವಾಗಿದ್ದು ಸದ್ಯಕ್ಕೆ ಪಾರ್ಟಿಗಳಿಗೆ ವಿರಾಮ ಸಿಕ್ಕಿದೆ.

ಮಟನ್ ಪಾರ್ಟಿ ವಿಷಯದಲ್ಲಿ ಹೊಡೆದಾಟ ನಡೆದಿದ್ದನ್ನು ಗಮನಿಸಿ ಈ ಗ್ರಾಮದ ಇನ್ನೋರ್ವ ಅಭ್ಯರ್ಥಿ ಮತದಾರರನ್ನು ಉಳವಿ ಪ್ರವಾಸಕ್ಕೆ ಕರೆದುಕೊಂಡು ಹೋಗುವ ತಯಾರಿ ನಡೆಸಿದ್ದಾನೆ ಎಂದು ತಿಳಿದು ಬಂದಿದೆ.

ವಿರುಪನಕೊಪ್ಪ ಗ್ರಾಮದಲ್ಲಿ ಕುರಿ ಕೊಡಿಸಿದ ಅಭ್ಯರ್ಥಿ ಯಾರು..? ಧಾಭಾದಲ್ಲಿ ಪಾರ್ಟಿ ಕೊಟ್ಟವರು .ಯಾರು..? ನಂತರ ಯುವಕರಿಗೆ ಥಳಿಸಿದ ಅಭ್ಯರ್ಥಿ ಯಾರು ಅನ್ನೋದನ್ನು ಪೋಲೀಸರು ಪತ್ತೆ ಮಾಡಿ ಕ್ರಮ ಕೈಗೊಳ್ಳಬೇಕಾಗಿದೆ.

ಈಗ ಸದ್ಯಕ್ಕೆ ವಿರುಪನಕೊಪ್ಪ ಗ್ರಾಮದಲ್ಲಿ ಮತದಾರರನ್ನು ಉಳವಿ ಪ್ರವಾಸಕ್ಕೆ ಕರೆದುಕೊಂಡು ಹೋಗುವ ತಯಾರಿ ನಡೆದಿದೆ ಎಂದು ಗೊತ್ತಾಗಿದ್ದು ಈ ಗ್ರಾಮದಲ್ಲಿ ನಡೆಯುತ್ತಿರುವ ಲೋಕಲ್ ಕಾರಬಾರಿಗೆ ಬ್ರೇಕ್ ಹಾಕಲು ಚುನಾವಣಾ ಅಧಿಕಾರಿಗಳು ಮುಂದಾಗಬೇಕಾಗಿದೆ.

Check Also

ಮನೆ,ಮನೆಗೆ ಹೋಗಿ ಮತದಾರರ ಚೀಟಿ ವಿತರಿಸಲು ಡಿಸಿ ನಿತೇಶ್ ಪಾಟೀಲ್ ಸೂಚನೆ

ಬೆಳಗಾವಿ, ):ಮತದಾರರಿಗೆ ತಮ್ಮ ಮತಗಟ್ಟೆಗಳ ಬಗ್ಗೆ ಮುಂಚಿತವಾಗಿ ಮತದಾರರ ಚೀಟಿ(ವೋಟರ್ ಸ್ಲಿಪ್)ಗಳನ್ನು ನೀಡಿದರೆ ಮತದಾನ ಮಾಡಲು ಅನುಕೂಲವಾಗಲಿದೆ. ಆದ್ದರಿಂದ ಪ್ರತಿಯೊಂದು …

Leave a Reply

Your email address will not be published. Required fields are marked *