ಬೆಳಗಾವಿ- ಪುಷ್ಪಾ ಸಿನಿಮಾ ಸ್ಟೈಲ್ ನ
ಲ್ಲೇ ಗೋವಾ ಸರಾಯಿಯನ್ನು ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಅಂತರ್ ರಾಜ್ಯ ಜಾಲವನ್ನು ಬೆಳಗಾವಿಯ ಅಬಕಾರಿ ಇಲಾಖೆಯ ಅಧಿಕಾರಿಗಳು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಗೋವಾ – ಬೆಳಗಾವಿ ಮಾರ್ಗವಾಗಿ ಬೇರೆ ಬೇರೆ ರಾಜ್ಯಗಳಿಗೆ ಗೋವಾದಲ್ಲಿ ತಯಾರಿಸಲಾದ ವಿವಿಧ ಬ್ರ್ಯಾಂಡಗಳ ಮದ್ಯದ ಬಾಟಲಿಗಳನ್ನು ಅತ್ಯಂತ ವ್ಯವಸ್ಥಿತವಾಗಿ,ನಿಗೂಢವಾಗಿ ತುಂಬಿದ ಲಾರಿಯನ್ನೇ ಬೆಳಗಾವಿಯ ಅಬಕಾರಿ ಇಲಾಖೆಯ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು ಲಾರಿ ಚಾಲಕನನ್ನು ಬಂಧಿಸಿದ್ದಾರೆ.
ಲಾರಿಯಲ್ಲಿ ಫ್ಲೈವುಡ್ ಅರ್ದತುಂಬಿ ನಂತರ ಅರ್ದ ಭಾಗವನ್ನು ಮದ್ಯದ ಬಾಟಲಿಗಳನ್ನು ತುಂಬಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಜಾಲವನ್ನು ಬೆಳಗಾವಿಯ ಅಬಕಾರಿ ಇಲಾಖೆ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಲಾರಿಯಲ್ಲಿ ಅತ್ಯಂತ ಬೆಲೆ ಬಾಳುವ,ಸಿಗ್ನೀಚರ್,ಬ್ಲೆಂಡರ್ಸ್ ಫ್ರೈಡ್, ಮ್ಯಾನ್ಸನ್ ಹೌಸ್,ರಾಯಲ್ ಚಾಲೇಂಜ್,ರಾಯಲ್ ಸ್ಟ್ಯಾಗ್,ವ್ಯಾಟ್ 69 ,ಸೇರಿದಂತೆ ವಿವಿಧ ಬ್ರ್ಯಾಂಡ್ ಗಳ ಮದ್ಯದ ಬಾಟಲಿಗಳನ್ನು ಫ್ಲೈವುಡ್ ತುಂಬಿದ ಲಾರಿಯಲ್ಲಿ ಸಾಗಾಣಿಕೆ ಮಾಡಲಾಗುತ್ತಿತ್ತು.
ಅಬಕಾರಿ ಇಲಾಖೆಯ ಉಪ ಆಯುಕ್ತ ಮಂಜುನಾಥ ಅವರ ನೇತ್ರತ್ವದಲ್ಲಿ ಕಾರ್ಯಾಚರಣೆ ನಡೆಸಿದ ಬೆಳಗಾವಿಯ ಅಬಕಾರಿ ಇಲಾಖೆಯ ಅಧಿಕಾರಿಗಳ ತಂಡ ನಿನ್ನೆ ಮದ್ಯರಾತ್ರಿ ದಾಳಿ ಮಾಡಿ ಭರ್ಜರಿ ಬೇಟೆಯಾಡಿದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ