ಬೆಳಗಾವಿ – ಸ್ನೇಹಕ್ಕೆ ಗೆಳೆತನಕ್ಕೆ ಆಸ್ತಿ,ಅಂತಸ್ತು,ಅಧಿಕಾರ ಅಡ್ಡಿ ಬರೋದಿಲ್ಲ, ಮಂತ್ರಿಯಾದರೇನು ಬಾಲ್ಯದ ಗೆಳತಿಯನ್ನು ಮರೆಯಲು ಸಾಧ್ಯವೇ ಇಲ್ಲ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ತೋರಿಸಿದ್ದಾರೆ ಹುಟ್ಟೂರಿನ ಜಾತ್ರೆಯಲ್ಲಿ ಬಾಲ್ಯದ ಗೆಳತೆಯ ಜೊತೆ ಜಾತ್ರೆಯಲ್ಲಿ ಹರಟೆ ಹೊಡೆದು ಬಾಲ್ಯದ ನೆನಪುಗಳನ್ನು ಮೆಲಕುಹಾಕಿದ್ದಾರೆ.
ಚಿಕ್ಕಹಟ್ಟಿಹೊಳಿ ಗ್ರಾಮ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಅವರ ಹುಟ್ಟೂರು ಈ ಗ್ರಾಮದಲ್ಲಿ ಶ್ರೀ ವೀರಭದ್ರ ದೇವರ ಜಾತ್ರೆ ನಡೆಯುತ್ತಿದೆ. ಜಾತ್ರೆಗಾಗಿ ಊರಿಗೆ ಹೋದ ಲಕ್ಷ್ಮೀ ಹೆಬ್ಬಾಳಕರ್ ಬಾಲ್ಯದ ಸ್ನೇಹಿತೆ ಗಂಗಮ್ಮ ನನ್ನು ನೆನಪಿಸಿಕೊಂಡು ಗಂಗಮ್ಮನನ್ನು ತಮ್ಮ ಮನೆಗೆ ಕರೆಯಿಸಿಕೊಂಡು ಗೆಳತಿಯ ಜೊತೆ ಕಾಲ ಕಳೆದಿದ್ದಾರೆ.. ಇದೇ ವೇಳೆ ಇಬ್ಬರೂ ಜೊತೆ ಕುಳಿತು ಊಟ ಸವಿದು, ಬಾಲ್ಯದ ದಿನಗಳನ್ನು ಮೆಲುಕು ಹಾಕಿ, ಪರಸ್ಪರ ಖುಷಿಪಟ್ಟಿದ್ದಾರೆ.
ವೃತ್ತಿಯಲ್ಲಿ ಗಂಗಮ್ಮ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ನೂರಾರು ಪುಟ್ಟ ಮಕ್ಕಳ ಲಾಲನೆ-ಪಾಲನೆ ಮಾಡುತ್ತಿದ್ದಾರೆ. ಕಾಕತಾಳೀಯಂತೆ ಲಕ್ಷ್ಮೀ ಹೆಬ್ಬಾಳಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಆಗಿದ್ದಾರೆ.ಅದೇ ಇಲಾಖೆಯಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿರುವ ಗಂಗಮ್ಮನನ್ಬು ಲಕ್ಷ್ಮೀ ಹೆಬ್ಬಾಳಕರ್ ರಾಜ್ಯದ ಸಚಿವೆಯಾದರೂ ಸಹ ನಮ್ಮಿಬ್ಬರ ಸ್ನೇಹದಲ್ಲಿ ಕಿಂಚಿತ್ತೂ ಅಂತರವಿಲ್ಲ – ಗೆಖೆತನ ಮೊದಲು ಹೇಗಿತ್ತೋ, ಇಂದು ಕೂಡ ಅದೇ ರೀತಿಯಾಗಿ ಮುಂದುವರೆದಿದೆ ಎಂದು ಸಾಭೀತು ಪಡಿಸಿದ್ದಾರೆ.
ಬಾಲ್ಯ ಸ್ನೇಹಿತೆ ಜೊತೆ ಸಂಭ್ರಮಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಚಿಕ್ಕಹಟ್ಟಿಹೊಳಿ (ಖಾನಾಪುರ) : ತವರು ಮನೆಯ ಜಾತ್ರೆಯಲ್ಲಿ ಭಾಗಿಯಾಗಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಭಾನುವಾರ ತಮ್ಮ ಬಾಲ್ಯ ಸ್ನೇಹಿತೆಯ ಜೊತೆ ಸಂಭ್ರಮಿಸಿದರು. ವಿಶೇಷವೆಂದರೆ ಸಚಿವರ ಬಾಲ್ಯ ಸ್ನೇಹಿತೆ ಈಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಡಿ ಬರುವ ಅಂಗನವಾಡಿ ಕಾರ್ಯಕರ್ತೆ!
ಚಿಕ್ಕಹಟ್ಟಿಹೊಳಿಯ ಶ್ರೀ ವೀರಭದ್ರ ದೇವರ ಜಾತ್ರಾ ಮಹೋತ್ಸವದ ಹಿನ್ನೆಲೆಯಲ್ಲಿ ಲಕ್ಷ್ಮೀ ಹೆಬ್ಬಾಳಕರ್ ಅವರು ತವರು ಮನೆಯಲ್ಲಿದ್ದಾರೆ. ಭಾನುವಾರ ಅವರ ಶಾಲಾ ಹಾಗೂ ಬಾಲ್ಯ ಸ್ನೇಹಿತೆ ಗಂಗಮ್ಮ ಮನೆಗೆ ಆಗಮಿಸಿದ್ದರು. ಇಬ್ಬರೂ ಜೊತೆ ಕುಳಿತು ಊಟ ಸವಿದು, ಬಾಲ್ಯದ ದಿನಗಳನ್ನು ಮೆಲುಕು ಹಾಕಿ, ಪರಸ್ಪರ ಖುಷಿ ಹಂಚಿಕೊಂಡರು.
ವೃತ್ತಿಯಲ್ಲಿ ಗಂಗಮ್ಮ ಅಂಗನವಾಡಿ ಕಾರ್ಯಕರ್ತೆಯಾಗಿದ್ದು, ಲಕ್ಷ್ಮೀ ಹೆಬ್ಬಾಳಕರ್ ರಾಜ್ಯದ ಸಚಿವೆಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರೂ, ಇಬ್ಬರ ಸ್ನೇಹದಲ್ಲಿ ಯಾವುದೇ ಅಂತರ ಕಾಣಲಿಲ್ಲ. ಬಾಲ್ಯದಲ್ಲಿದ್ದಂತೆ ಇಬ್ಬರೂ ಮಾತನಾಡುತ್ತ ಕಾಲಕಳೆದರು.