Breaking News

ನಿನ್ನೆ ಲವ್ ಮ್ಯಾರೇಜ್ ,ಇಂದು ವೈಫ್ ಆಫ್ ಸುಧಾಕರ್…..!!

ಬೆಳಗಾವಿ-ಬೆಂಗಳೂರಿನ ಪ್ರಿಯಾಂಕಾ ಗೌಡ, ಬೆಳಗಾವಿಯ ರೋಹೀತ್ ಕೋಲಕಾರ ಇಬ್ಬರು Instagram ನಲ್ಲಿ ಲವ್ ಮಾಡಿ ನಿನ್ನೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲ್ಲೂಕಿನ ಪಾರಿಶ್ವಾಡ ಗ್ರಾಮದ ದೇವಸ್ಥಾನದಲ್ಲಿ ಮದುವೆಯಾಗಿದ್ದರು.ಮದುವೆಯಾದ ಈ ಜೋಡಿ ರಕ್ಷಣೆ ನೀಡುವಂತೆ ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೆ ಮನವಿ ಮಾಡಿಕೊಂಡ ವಿಚಾರ ನಿನ್ನೆ ದೊಡ್ಡ ಸುದ್ದಿಯಾಗಿತ್ತು.

ನಿನ್ನೆ ಮದುವೆಯಾದ ಬೆಂಗಳೂರಿನ ಪ್ರೀಯಾಂಕಾ ಗೌಡ,ಪ್ರೀತಿ ಪ್ರೇಮದ ಹೆಸರಿನಲ್ಲಿ ಬೆಳಗಾವಿ ಹುಡುಗ ರೋಹೀತ್ ನಿಗೆ ಮೋಸ ಮಾಡಿದಳಾ ? ಎನ್ನುವ ಪ್ರಶ್ನೆ ಈಗ ಎದುರಾಗಿದೆ. ಯಾಕಂದ್ರೆ ಇದೇ ಪ್ರೀಯಾಂಕಾ ಗೌಡ ಬೆಂಗಳೂರಿನ ಪೋಲೀಸರಿಗೆ ನಾನು ವೈಫ್ ಆಫ್ ಸುಧಾಕರ್ ಎಂದು ಬರೆದುಕೊಟ್ಟ ಹೇಳಿಕೆ ಪತ್ರ ಈಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪತ್ರವನ್ನು ಬೆಳಗಾವಿ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿಗಳಿಗೂ ತಲುಪಿದೆ.

ಬೆಂಗಳೂರಿನಲ್ಲಿ ದರ್ಶನ್ ಗೆಳತಿ ಪವಿತ್ರಾ ಗೌಡರ ಗಾಳಿ ಬೀಸುತ್ತಿದ್ದರೆ,ಇತ್ತ ಬೆಳಗಾವಿಯಲ್ಲಿ ಪ್ರೀಯಾಂಕಾ ಗೌಡ ಬಿರುಗಾಳಿ ಬೀಸುತ್ತಿದೆ. ನಿನ್ನೆ ಬೆಳಗಾವಿಯ ರೋಹಿತ್ ಜೊತೆ ಮದುವೆಯಾಗಿರುವ ಪ್ರೀಯಾಂಕಾ ಗೌಡ ಮೊದಲು ಸುಧಾಕರ್ ಎಂಬಾತನ ಜೊತೆ ಮದವೆಯಾಗಿದ್ದಳು,ಎನ್ನುವ ವಿಚಾರ ಈಗ ಬೆಳಕಿಗೆ ಬಂದಿದ್ದು, ಸ್ವತಃ ಪ್ರೀಯಾಂಕಾ ಗೌಡ ಬರೆದು ಕೊಟ್ಟ ಪತ್ರದಲ್ಲಿ ನಾನು ವೈಫ್ ಆಫ್ ಸುಧಾಕರ್ ಎಂದು ಬರೆದಿದ್ದಾಳೆ. ಪ್ರೀಯಾಂಕಾ ಗೌಡ ಬೆಂಗಳೂರಿನ ಪೋಲೀಸರಿಗೆ ಬರೆದುಕೊಟ್ಟ ಪತ್ರವನ್ನು ಈ ಸುದ್ಧಿಯ ನಡುವೆ ಹಾಕಿದ್ದೇನೆ ನೋಡಿ…

ಬೆಂಗಳೂರಿನ ಹುಡುಗಿ ಪ್ರೀಯಾಂಕಾ ಗೌಡ, ನಾನು ಕೋಟ್ಯಾಧೀಶೆ ಎಂದು ನನ್ನ ಮದುವೆ ಆಗಿಲ್ಲ, ಅಂತಾ ಬೆಳಗಾವಿ ಹುಡುಗ ರೋಹೀತನಿಗೆ ಸುಳ್ಳು ಹೇಳಿ ಮೋಸ ಮಾಡಿದಳಾ ಎನ್ನುವ ಅನುಮಾನ ಈಗ ಶರುವಾಗಿದೆ.ಪ್ರೀಯಾಂಕಾ ಗೌಡಳ ಮೊದಲನೇಯ ಪತಿ ಶಿಡ್ಲಘಟ್ಟದ ಸುಧಾಕರ್ ನಡೆ ಈಗ ಬೆಳಗಾವಿ ಕಡೆ ಎಂದು ಗೊತ್ತಾಗಿದೆ. ಸುಧಾಕರ್ ಬೆಳಗಾವಿಗೆ ಬಂದ್ಮೇಲೆ ಗುಟ್ಟು ಬಹಿರಂಗವಾಗಲಿದೆ.

Check Also

ವೀಕ್ಲಿ ಮ್ಯಾರೇಜ್,ಇದು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಹುಡುಗರ ಲೈಫ್ ಡ್ಯಾಮೇಜ್ …..!!!

ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ …

Leave a Reply

Your email address will not be published. Required fields are marked *