Breaking News

ಸರಸ ಸಲ್ಲಾಪ,ಮುಚ್ಚಿಡಲು ಹೆತ್ತ ಮಗನ ಜೊತೆ ಗಂಡನ ಅಣ್ಣನ ಹೆಂಡತಿಯನ್ನೇ ಕೊಂದ ಪಾಪಿ ಪ್ರಿಯತಮೆ…!!!

ಸರಸ ಸಲ್ಲಾಪ,ಮುಚ್ಚಿಡಲು ಹೆತ್ತ ಮಗನನ್ನೇ,ಜೊತೆಗೆ ಗಂಡನ ಅಣ್ಣನ ಹೆಂಡತಿಯನ್ನೇ ಕೊಂದ ಪಾಪಿ ಹೆಣ್ಣು….!!

ಬೆಳಗಾವಿ- ಉತ್ತರ ಕರ್ನಾಟಕದ ಜವಾರಿ ಭಾಷೆಯಲ್ಲಿ ಹೇಳಬೇಕಂದ್ರ ಹೆಣ್ಣೊಂದು ತನ್ನ ಹಾದರ ಮುಚ್ಚಿಡಲು ತನ್ನ ಹೆತ್ತ ಮಗನನ್ನೇ ಬಾವಿಗೆ ತಳ್ಳಿ,ಕೊಲೆ ಮಾಡುವ ಜೊತೆಗೆ ತನ್ನ ಗಂಡನ ಅಣ್ಣನ ಹೆಂಡಿತಿ ಮಲಗಿರುವಾಗ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಜೋಡಿ ಕೊಲೆ ಮಾಡಿದ ಹೃದಯವಿದ್ರಾವಕ ಘಟನೆ ಹುಕ್ಕೇರಿ ತಾಲ್ಲೂಕಿನ ಬೆಲ್ಲದ ಬಾಗೇವಾಡಿ ಗ್ರಾಮದಲ್ಲಿ ನಡೆದಿದೆ

ಬೆಲ್ಲದ ಬಾಗೇವಾಡಿ ಗ್ರಾಮದ ಸುಧಾ ಸುರೇಶ ಕರೀಗಾರ‌,ಮತ್ತು ರಮೇಶ್ ಬಸ್ತವಾಡೆ ನಡುವೆ ಸರಸ ಸಲ್ಲಾಪ ನಡೆದಿತ್ತು ಇವರಿಬ್ಬರೂ ಮೋಬೈಲ್ ನಲ್ಲಿ ಮಾತಾಡುವದನ್ನು ಸುಧಾಳ ಗಂಡನ ಅಣ್ಣನ ಹೆಂಡತಿ ಭಾಗ್ಯಶ್ರೀ ಕೇಳಿಸಿಕೊಂಡು ತನ್ನ ಗಂಡನಿಗೆ ತಿಳಿಸಿ ತಮ್ಮನ ಹೆಂಡತಿಗೆ ಬುದ್ದಿ ಮಾತು ಹೇಳುವಂತೆ ಹೇಳಿದ್ದಾಳೆ ಭಾಗ್ಯಶ್ರೀಯ ಗಂಡ ಚಿನ್ನಪ್ಪ ತನ್ನ ತಮ್ಮನ ಹೆಂಡತಿ ಅಂದ್ರೆ ಸುರೇಶ ಕರೀಗಾರ ಹೆಂಡತಿ ಸುಧಾ ಗೆ ಬುದ್ಧಿ ಹೇಳಿದ್ದಾನೆ .

ತನ್ನ ಅನೈತಿಕ ಸಮಂಧದ ಬಗ್ಗೆ ಭಾಗ್ಯಶ್ರೀ ಎಡವಟ್ಟು ಮಾಡಿದ್ದಾಳೆ ಅವಳು ಗಂಡನ ಎದುರು ಬಾಯಿ ಬಿಟ್ಟರೆ ಬದುಕು ಬುಡಮೇಲಾದೀತು ಎಂದು ಹೆದರಿ ಭಾಗ್ಯಶ್ರೀಯ ಮೇಲೆ ಸೇಡು ತೀರಿಸಿಕೊಳ್ಳಲು ಭಾಗ್ಯಶ್ರೀ ಮಲಗಿರುವಾಗ ಸುಧಾ ಸಮಯ ಸಾಧಿಸಿ ಭಾಗ್ಯಶ್ರೀ ಯ ಮೇಲೆ ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಿದ್ದಾಳೆ

ಸುಧಾ ರಮೇಶ ಬಸ್ತವಾಡೆ ಎಂಬಾತನ ಜೊತೆ ಅನೈತಿಕ ಸಮಂಧ ಹೊಂದಿರುವ ವಿಷಯ ಸುಧಾಳ ಮಗ ಪ್ರವೀಣ ಗೆ ಗೊತ್ತಾಗಿದೆ ಪ್ರವೀಣ ಗೆ ಬಾವಿ ಹತ್ತಿರ ಕರೆದುಕೊಂಡು ಹೋಗಿ ಹೆತ್ತ ಮಗನನ್ನೇ ಬಾವಿಗೆ ತಳ್ಳಿ ಕೊಲೆ ಮಾಡಿದ್ದಾಳೆ

ಸುಧಾ ಕರೀಗಾರ ಗಂಡನ ಅಣ್ಣ ಚಿನ್ನಪ್ಪಾ ಕರೀಗಾರ ಕೊಟ್ಟ ದೂರು ದಾಖಲಿಸಿಕೊಂಡ ಪೋಲೀಸರು ಪ್ರಕರಣದ ತನಿಖೆ ಮಾಡಿ ಜೋಡಿ ಕೊಲೆ ಮಾಡಿದ ಸುಧಾ ಕರೀಗಾರ ಮತ್ತು ರಮೇಶ್ ಬಸ್ತವಾಡೆ ಎಂಬಾತರನ್ನು ಬಂಧಿಸಿ ಜೈಲಿಗೆ ಕಳಿಸಿದ್ದಾರೆ‌

Check Also

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ

ಇಂದು ಬೆಳಗಾವಿಯಲ್ಲಿ ಬೃಹತ್ ಮೌನ ಮೆರವಣಿಗೆ ಹತ್ತು ಸಾವಿರ ರೇನ್ ಕೋಟ್ ವಿತರಣೆ ಬೆಳಗಾವಿ- ಪುಣ್ಯಕ್ಷೇತ್ರ ಧರ್ಮಸ್ಥಳದ ಕುರಿತು ಸರ್ಕಾರ …

Leave a Reply

Your email address will not be published. Required fields are marked *