ಲಿವಿಂಗ್.. ಲವೀಂಗ್ ಟುಗೆದರ್, ಆಸ್ಪತ್ರೆಗೆ ದಾಖಲು…..!!!
ಬೆಳಗಾವಿ- ಅವನ ಹೆಸರು ಆನಂದ ಆತ ಮೂಲತಹ ಬೆಳಗಾವಿಯ ಹುಡುಗ,ಸದ್ಯ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ ಈತ ಗೋಕಾಕಿನ ಆಂಟಿ ಶೋಭಾ ಜೊತೆ ಸ್ನೇಹ ಬೆಳೆಸಿಕೊಂಡಿದ್ದ ಇಬ್ಬರು ಲಿವಿಂಗ್ ಟುಗೆದರ್ ಅಂತಾ ಲವ್ ಮಾಡ್ತಾ ಇದ್ರು, ಈ ಲವ್ ಈಗ ವಿಕೋಪಕ್ಕೆ ಹೋಗಿದ್ದು ಆನಂದ ಶೋಭಾಗೆ ಚಾಕುವಿನಿಂದ ಚುಚ್ಚಿದ್ದಾನೆ, ಶೋಭಾ ಆನಂದಗೆ ಚಾಕುವಿನಿಂದ ಚುಚ್ಚಿದ್ದಾನೆ ಈಗ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ
ಈ ಘಟನೆ ನಡೆದಿದ್ದು ಗೋಕಾಕ್ ನಗರದಲ್ಲಿ, ಗೋಕಾಕಿನ ಶೋಭಾ ಆಂಟಿ ಗಾಯಗೊಂಡು ಗೋಕಾಕಿನ ಆಸ್ಪತ್ರೆಗೆ ದಾಖಲು ಆದ್ರೆ ಬೆಂಗಳೂರಿನ ಆನಂದ ಬೆಳಗಾವಿ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾನೆ. ಗೋಕಾಕಿನ ವಿವಾಹಿತ ಶೋಭಾ ತನ್ನ ಆತ್ಮರಕ್ಷಣೆಗಾಗಿ ಆನಂದ ಮೇಲೆ ಹಲ್ಲೆ ಮಾಡಿದ್ದೇನೆ ಎಂದು ಪೋಲೀಸರಿಗೆ ತಿಳಿಸಿದ್ದಾಳೆ.
ಗೋಕಾಕಿನ ಶೋಭಾ ಆಂಟಿ ವಿವಾಹಿತೆ ಅನ್ನೋದು ಬೆಂಗಳೂರಿನ ಆನಂದ ಗೆ ಗೊತ್ತೇ ಇರಲಿಲ್ಲ,ಫೋನ್ ನಲ್ಲಿ ಇಬ್ಬರ ನಡುವೆ ನಿತ್ಯ ಸುಮಧುರ ಸಂಭಾಷಣೆ ನಡೆಯುತ್ತಿತ್ತು, ಆದ್ರೆ ಕಳೆದ ಹದಿನೈದು ದಿನದಿಂದ ಶೋಭಾ ಆಂಟಿಯ ಫೋನ್ ಬಂದ್ ಆಗಿತ್ತು ಹೀಗಾಗಿ, ಶೋಭಾಳನ್ನು ನೋಡಲು ಆನಂದ ಬೆಂಗಳೂರಿನಿಂದ ಗೋಕಾಕಿಗೆ ಧಾವಿಸಿದ್ದ, ಶೋಭಾ ಆಂಟಿಯ ಮನೆಗೆ ಆನಂದ ಹೋದಾಗ ಶೋಭಾ ತನ್ನ ಗಂಡನ ಜೊತೆಗಿದ್ದಳು, ಆದ್ರೆ ಆನಂದನಿಗೆ ಶೋಭಾ ವಿವಾಹಿತೆ ಅನ್ನೋದು ಗೊತ್ತೇ ಇರಲಿಲ್ಲ, ನನ್ನ ಬಿಟ್ಟು ಬೇರೆಯವನ ಜೊತೆ ಲವ್ ಮಾಡ್ತೀಯಾ ? ನನಗೆ ಮೋಸ ಮಾಡ್ತೀಯಾ ಎಂದು ಆನಂದ ಶೋಭಾ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು ,ಪ್ರತಿಯಾಗಿ ಶೋಭಾ, ಆನಂದನ ಮೇಲೆ ಚಾಕುವಿನಿಂದ ಹಲ್ಲೆ ಮಾಡಿದ್ದು ಈ ಲವ್ ಹುಚ್ಚಾಟ ಈಗ ಚಾಕು ಚುಚ್ಚಾಟದಲ್ಲಿ ಅಂತ್ಯಗೊಂಡಿದ್ದು ಹಲ್ಲೆ ,ಪ್ರತಿಹಲ್ಲೆ ಯಿಂದ ಗಾಯಗೊಂಡಿರುವ ಇಬ್ಬರೂ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಗೋಕಾಕ್ ಪೋಲೀಸರು ಹುಚ್ಚಾಟ, ಚುಚ್ಚಾಟದ ಘಟನೆಯ ಬಗ್ಗೆ ತನಿಖೆ ನಡೆಸಿದ್ದಾರೆ.