Breaking News

ಪತಿಯ ಕಿರುಕಳ ,ನೇಣಿಗೆ ಶರಣಾದ ವಿವಾಹಿತ ಮಹಿಳೆ

ಬೆಳಗಾವಿ-ಪತಿಯ ಮನೆಯವರ ಕಿರುಕುಳಕ್ಕೆ ಬೇಸತ್ತು ವಿವಾಹಿತ ಮಹಿಳೆಯೊಬ್ಬಳು ನೇಣಿಗೆ ಶರಣಾದ ಘಟನೆ,ಬೆಳಗಾವಿ ತಾಲೂಕಿನ ಸಾಂಬ್ರಾ ಗ್ರಾಮದಲ್ಲಿ ನಡೆದಿದೆ.

ಸಾಂಬ್ರಾ ಗ್ರಾಮದ ಸವಿತಾ ಮಾರುತಿ ಜೋಗಾನಿ(32) ನೇಣಿಗೆ ಶರಣಾದ ಮಹಿಳೆಯಾಗಿದ್ದು,ಮೂಲತಃ ರಾಕಸಕೊಪ್ಪ ಗ್ರಾಮದ ಮಾರುತಿ ಜೋಗಾನಿ(40) ಕುಟುಂಬಸ್ಥರ ವಿರುದ್ಧ‌ ಸುನಿತಾ ಕುಟುಂಬಸ್ಥರ ಆರೋಪ ಮಾಡಿದೆ.2018ರಲ್ಲಿ ಕುಟುಂಬಸ್ಥರ ಸಮ್ಮುಖದಲ್ಲಿಯೇ ಮದುವೆ ಆಗಿದ್ದ ಮಾರುತಿ-ಸುನಿತಾ,ಮಾರುತಿ ಜೋಗಾಣಿ ಸರ್ಕಾರಿ ಶಾಲೆ ಶಿಕ್ಷಕನಾಗಿ ಕೆಲಸ ಮಾಡ್ತಿದ್ದಾನೆ.ಮದುವೆ ನಂತರ ಪತಿ ಮಾರುತಿ, ಕುಟುಂಬಸ್ಥರ ನಿರಂತರ ಕಿರುಕುಳ ನೀಡುತ್ತಿದ್ದರು ಎಂದು ಮಹಿಳೆಯ ಪೋಷಕರು ಆರೋಪಿಸಿದ್ದಾರೆ.

ಕ್ಷುಲ್ಲಕ ಕಾರಣಕ್ಕೆ ಪತಿ ಮಾರುತಿಯಿಂದ‌ ಸವಿತಾ ಹಲ್ಲೆ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ.ನಾಲ್ಕು ವರ್ಷ ವಯಸ್ಸಿನ ಗಂಡು ಮಗು ಹೊಂದಿರುವ ಮಾರುತಿ-ಸವಿತಾ ದಂಪತಿ

ನಿರಂತರ ಕಿರುಕುಳ ಹಿನ್ನೆಲೆ ‌ಮನೆಯಲ್ಲಿ ಯಾರೂ ಇಲ್ಲದಾಗ ಮಹಿಳೆ ನೇಣಿಗೆ ಶರಣಾಗಿದ್ದಾಳೆ,ಮಗಳು ನೇಣು ಹಾಕಿಕೊಂಡಿಲ್ಲ ಗಂಡನೆ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ‌ಂದು‌ ಮೃತ ಮಹಿಳೆಯ ಸಹೋದರಿ ಆರೋಪ ಮಾಡಿದ್ದಾಳೆ.ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಅನುಮಾನಾಸ್ಪದ ಸಾವು ಸಂಬಂಧ ದೂರು ದಾಖಲಾಗಿದೆ

Check Also

ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆಗೆ ಸೂಚನೆ

ಬೆಳಗಾವಿ- ಆಪರೇಷನ್ ಸಿಂಧೂರ್ ಯಶಸ್ಸಿಗೆ ರಾಜ್ಯದ ಎಲ್ಲ ಮಸೀದಿಗಳಲ್ಲಿ ಶುಕ್ರವಾರದ ನಮಾಜ್ ಬಳಿಕ ಸಾಮೂಹಿಕ ಪ್ರಾರ್ಥನೆ ಮಾಡುವಂತೆ ರಾಜ್ಯದ ವಸತಿ,ವಕ್ಫ್ …

Leave a Reply

Your email address will not be published. Required fields are marked *