ಬೆಳಗಾವಿ- ಮನೆಯಲ್ಲಿ ವಿರೋಧವಿದ್ದರು ಕದ್ದು ಮುಚ್ಚಿ ರಜಿಸ್ಟರ್ ಮ್ಯಾರೇಜ್ ಮಾಡಿಕೊಂಡಿದ್ದ ಲವರ್ ನೊಬ್ಬ ತನ್ನ ಪ್ರಯತಮೆಯನ್ನೇ ಕತ್ತು ಹಿಚುಕಿ ಕೊಲೆ ಮಾಡಿದ ಘಟನೆ ಬೈಲಹೊಂಗಲ ತಾಲ್ಲೂಕಿನ ಬೆಳವಡಿ ಗ್ರಾಮದಲ್ಲಿ ನಡೆದೆದಿ
ಸುಮಾ(21) ಕೊಲೆಯಾದ ದುರ್ದೈವಿಯಾಗಿದ್ದು
ನಿನ್ನೆ ಸಂಜೆ ಗಂಡ, ಮಾವ, ಅತ್ತೆ, ಮೈದುನರು ಸೇರಿ ಹಲ್ಲೆ ಮಾಡಿ ಕತ್ತು ಹಿಚುಕಿ ಕೊಲೆ ಮಾಡಿದ್ದಾರೆಂದು ಕೊಲೆಯಾದ ಸುಮಾ ಕುಟುಂಬದವರು ಆರೋಪಿಸಿದ್ದಾರೆ
ಕೊಲೆ ಮಾಡಿ ಗಂಡ ಯುವರಾಜ್ ಅಬ್ಬಾರ್, ಮಾವ ಬಸಪ್ಪ, ಅತ್ತೆ ಮಾದೇವಿ, ಮೈದುನರಾದ ವೀರಣ್ಣ ಹಾಗೂ ಯಲ್ಲಪ್ಪ ಪರಾರಿಯಾಗಿದ್ದಾರೆಂದು ತಿಳಿದು ಬಂದಿದೆ
ಕಳೆದ ಹತ್ತು ತಿಂಗಳ ಹಿಂದಷ್ಟೇ ಪ್ರೀತಿಸಿ ಮದುವೆಯಾಗಿದ್ದ ಸುಮಾ ಯುವರಾಜ್ ಬೆಳವಡಿ ಗ್ರಾಮದಲ್ಲಿ ಮನೆ ಮಾಡಿ ಜೀವನ ಸಾಗಿಸುತ್ತಿದ್ದರು
ಯುವಕನ ಮನೆಯಲ್ಲಿ ಮದುವೆಗೆ ವಿರೋಧದ ನಡುವೆಯೂ ಬೈಲಹೊಂಗಲದಲ್ಲಿ ರಿಜಿಸ್ಟರ್ ಮದುವೆಯಾಗಿದ್ದರು ನಂತರ ಗಂಡ ಯುವರಾಜ್ ತಮ್ಮ ಕುಟುಂಬದವರ ಮಾತು ಕೇಳಿ ಪ್ರಿಯತಮೆಯ ವಿರುದ್ಧ ತಿರುಗಿ ಬಿದ್ದ ಎಂದು ಹೇಳಲಾಗುತ್ತಿದೆ
ಗ್ರಾಮದ ಹಿರಿಯರ ಮುಖಂಡತ್ವದಲ್ಲಿ ಮಗ ಹಾಗೂ ಸೊಸೆಯನ್ನ ಮನೆ ತುಂಬಿಸಿಕೊಂಡಿದ್ದ ಅತ್ತೆ ಮಾವ ನಂತರ ಸುಮಾಳ ಕೊಲೆ ಮಾಡಿದ್ದಾರೆ ಎಂದು ಸುಮಾಳ ಕುಟುಂಬದವರ ಆರೋಪವಾಗಿದೆ
ಕುಟುಂಬಸ್ಥರೊಂದಿಗೆ ಸೇರಿಕೊಂಡು ನಿನ್ನೆ ಮನೆಯಲ್ಲಿ ಕೊಲೆ ಮಾಡಿ ಶವ ಬಿಟ್ಟು ಪರಾರಿಯಾದ ದುಷ್ಕರ್ಮಿಗಳು ದೊಡವಾಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
ಆರೋಪಿಗಳನ್ನ ಬಂಧಿಸುವಂತೆ ಯುವತಿ ಸಂಬಂಧಿಕರಿಂದ ಆಗ್ರಹಿಸಿದ್ದು ಬೆಳವಡಿ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ