Breaking News

ಬೆಳಗಾವಿಯಲ್ಲಿ ನಡೆಯಲಿದೆ ಹತ್ತು ದಿನ ಭಾರತೀಯ ಸಂಸ್ಕೃತಿಕ ಉತ್ಸವ

ಬೆಳಗಾವಿ- ಬೆಳಗಾವಿ ನಗರದ ಸರ್ವಾಂಗೀಣ ಅಭಿವೃದ್ಧಿಗಾಗಿ ದೆಹಲಿಗೆ ತೆರಳಿದ್ದ ಬಿಜೆಪಿ ನಿಯೋಗ ಅಭಿವೃದ್ಧಿಯ ಭರ್ಜರಿ ಬೇಟೆಯಾಡಿದೆ

ಕೇಂದ್ರದ ಸಂಸ್ಕೃತಿ ಸಚಿವ ಮಹೇಶ ಶರ್ಮಾ ಅವರನ್ನು ಭೇಟಿಯಾದ ನಿಯೋಗ ಕೇಂದ್ರದ ಸಂಸ್ಕೃತಿ ಇಲಾಖೆಯಿಂದ ದೇಶದ ವಿವಿಧ ರಾಜ್ಯಗಳಲ್ಲಿ ರಾಷ್ಟ್ರ ಮಟ್ಟದ ಸಂಸ್ಕೃತಿಕ ಉತ್ಸವಗಳನ್ನು ಮಾಡುತ್ತಿದೆ ಇದೇ ರೀತಿ ಬೆಳಗಾವಿ ನಗರದಲ್ಲಿ ಪ್ರತಿ ವರ್ಷ ಹತ್ತು ದಿನಗಳ ಕಾಲ ರಾಷ್ಟ್ರ ಮಟ್ಟದ ಸಂಸ್ಕೃತಿಕ ಉತ್ಸವ ಆಯೋಜಿಸಬೇಕು ಉತ್ಸವದಲ್ಲಿ ದೇಶದ ಎಲ್ಲ ರಾಜ್ಯಗಳ ಜಾನಪದ ಕಲೆ .ಭಾಷೆ ಮತ್ತು ಅಲ್ಲಿಯ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮಗಳನ್ನು ಉತ್ಸವದಲ್ಲಿ ಆಯೋಜಿಸಬೇಕೆಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಕೇಂದ್ರದ ಸಂಸ್ಕೃತಿ ಇಲಾಖೆಯ ಸಚಿವರಲ್ಲಿ ಮನವಿ ಮಾಡಿಕೊಂಡರು

ಬೆಳಗಾವಿ ನಗರ ಐತಿಹಾಸಿಕ ನಗರವಾಗಿದೆ ಈ ನಗರದಲ್ಲಿ ರಾಷ್ಟ್ರಮಟ್ಟದ ಸಂಸ್ಕೃತಿ ಉತ್ಸವ ನಡೆಯಬೇಕು ಬೆಳಗಾವಿಯಲ್ಲಿ ಹತ್ತು ದಿನಗಳ ಕಾಲ ಭಾರತೀಯ ಸಂಸ್ಕೃತಿ ಗತವೈಭವ ನಡೆಯಬೇಕು ಎಂದು ನಿಯೋಗ ಒತ್ತಾಯಿಸಿತು ಈದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಸಚಿವರು ಈ ಕುರಿತು ತಿಂಗಳಲ್ಲಿ ತೀರ್ಮಾಣ ಕೈಗೊಳ್ಳುವದಾಗಿ ಭರವಸೆ ನೀಡಿದರು

ಕೇಂದ್ರದ ಲೋಕೋಪಯೋಗಿ ಸಚಿವ ನೀತೀನ್ ಗಡ್ಕರಿ ಅವರನ್ನು ಭೇಟಿ ಮಾಡಿದ ನಿಯೋಗ ವಿಪರೀತ ಮಳೆಯಿಂದಾಗಿ ಬೆಳಗಾವಿಯ ರಸ್ತೆಗಳು ಸಂಪೂರ್ಣವಾಗಿ ಹಾಳಾಗಿವೆ ಕೇಂದ್ರದ ಪ್ರಕೃತಿ ವಿಕೋಪ ಪರಿಹಾರ ನಿಧಿಯಿಂದ 70 ಕೋಟಿ ರೂ ಅನುದಾನ ಬಿಡುಗಡೆ ಮಾಡುವಂತೆ ನಿಯೋಗ ಮನವಿ ಮಾಡಿಕೊಂಡಾಗ ಕೂಡಲೇ ಅನುದಾನ ಬಿಡುಗಡೆ ಮಾಡುವದಾಗಿ ಸಚಿವರು ಭರವಸೆ ನೀಡಿದರು

ಇದಾದ ಬಳಿಕ ಕೇಂದ್ರದ ರಸಗೊಬ್ಬರ ಸಚಿವ ಅನಂತ ಕುಮಾರ್ ಅವರು ಕೇಂದ್ರದ ಮೂಲಭೂತ ಸೌಕರ್ಯ ಇಲಾಖೆಯ ಸಚಿವ ರಾಧಕಾಕೃಷ್ಣನ್ ಅವರನ್ನು ತಮ್ಮ ಕಚೇರಿಗೆ ಕರೆಯಿಸಿ ಬೆಳಗಾವಿ ನಿಯೋಗಕ್ಕೆ ಭೇಟಿ ಮಾಡಿಸಿದರು ಈ ಸಂಧರ್ಭದಲ್ಲಿ ಶಾಸಕ ಅಭಯ ಪಾಟೀಲ ಬೆಳಗಾವಿ ದಕ್ಷಿಣ ಕ್ಷೇತ್ರದ ಅಭಿವೃದ್ಧಿಗಾಗಿ 171 ಕೋಟಿ ಅನುದಾನ ನೀಡುವಂತೆ ಪ್ರಸ್ತಾವನೆ ಸಲ್ಲಿಸಿದರು ಇದಕ್ಕೂ ಸಚಿವರು ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ ಎಂದು ಅಭಯ ಪಾಟೀಲ ತಿಳಿಸಿದ್ದಾರೆ

ಬೆಳಗಾವಿ ಅಭಿವೃದ್ಧಿಯ ಕುರಿತು ಎರಡು ದಿನಗಳ ಕಾಲ ಕೇಂದ್ರದ ವಿವಿಧ ಇಲಾಖೆಯ ಸಚಿವರನ್ನು ಭೇಟಿ ಮಾಡಿದ ಬಿಜೆಪಿ ನಿಯೋಗ ಅಭಿವೃದ್ಧಿ ಯ ಭರ್ಜರಿ ಬೇಟೆಯಾಡಿದೆ
ನಿಯೋಗ ದಲ್ಲಿ ಸಂಸದ ಸುರೇಶ ಅಂಗಡಿ ಪ್ರಭಾಕರ ಕೋರೆ ,ಅನೀಲ ಬೆನಕೆ, ಸೇರಿದಂತೆ ಬೆಳಗಾವಿಯ ವಿವಿಧ ಸಂಸ್ಥೆಗಳ ಪದಾಧಿಕಾರಿಗಳು ನಿಯೋಗದಲ್ಲಿದ್ದರು

Check Also

ಬೆಳಗಾವಿ ಜಿಲ್ಲಾಧಿಕಾರಿಗಳ ಇದೊಂದು ಕಾರ್ಯ ಶ್ಲಾಘನೀಯ

ಬೆಳಗಾವಿ- ಬೆಳಗಾವಿ ಜಿಲ್ಲಾಧಿಕಾರಿ ಮಹ್ಮದ್ ರೋಷನ್ ಅವರು ಮಾಡಿರುವ ಇದೊಂದು ಕಾರ್ಯ ಶ್ಲಾಘನೀಯ ಅದು ಏನಂದ್ರೆ ಸುವರ್ಣಸೌಧಕ್ಕೆ ಪಾಸ್ ಪಡೆದು …

Leave a Reply

Your email address will not be published. Required fields are marked *