ಬೆಳಗಾವಿ
ಕೊರಳಲ್ಲಿ ತಾಳಿ, ಮುಖದಲ್ಲಿ ಮಂದಹಾಸ, ಕೈಯಲ್ಲೊಂದು ಮನವಿ ಪತ್ರ, ನನಗೆ ನೀನು ನಿನಗೆ ನಾನು ಎಂದು ಕೈ ಕೈ ಹಿಡಿದು ಪ್ರೇಮಿಗಳ ಪ್ರಯಾಣ. ಹೌದು ಪ್ರೀತಿ ಮಾಡಬಾರದು ಮಾಡಿದರೆ ಜಗಕೆ ಹೆದರಬಾರದು ಅಂತಾರೆ.
ಅವರು ಕಳೆದ ಐದಾರು ವರ್ಷದಿಂದ ರೋಹಿತ್, ನಂದಿನಿ ಪರಸ್ಪರ ಪ್ರೀತಿ ಮಾಡಿ ಕಳೆದ ಐದು ದಿನಗಳ ಹಿಂದೆ ಮದುವೆಯಾಗಿದ್ದಾರೆ. ಆದರೆ ಯುವತಿಯ ಮನೆಯವರು ನಮ್ಮ ಮೇಲೆ ಪೊಲೀಸ್ ಕಿತ್ತೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಪಿಎಸ್ಐ ಸಾಹೇಬರು ನಮ್ಮ ಮೇಲೆಯೇ ಕ್ರಮ ಜರುಗಿಸುವುದಾಗಿ ಹೇಳುತ್ತಿದ್ದಾರೆ. ನಮಗೆ ರಕ್ಷಣೆ ಕೊಡಬೇಕೆಂದು ಪ್ರೇಮಿಗಳು ಎಸ್ಪಿ ಕಚೇರಿಯಲ್ಲಿ ಅಳಲು ತೋಡಿಕೊಂಡರು.
ಯುವತಿಯ ಮನೆಯ ಕಡೆಯವರು ಸುಳ್ಳು ಕೇಸ್ ಹಾಕಿದ್ದಾರೆ. ನಾನು ಅವರ ಕೈಗೆ ಸಿಕ್ಕರೆ ನನಗೆ ಕೊಲೆ ಮಾಡುವುದಾಗಿ ಬೇದರಿಕೆ ಹಾಕಿದ್ದಾರೆ. ನಮ್ಮ ಕುಟುಂಬದವರನ್ನು ಠಾಣೆಗೆ ಕರೆದು ಕುಳಿಸಿಕೊಂಡಿದ್ದಾರೆ ಎಂದು ಹಳಿಯಾಳದ ರೋಹಿತ್ ಗುಡಿಸಾಗರ ಆರೋಪಿಸಿದರು.
ನಮ್ಮ ಮನೆಯಲ್ಲಿ ನನ್ನಗೆ ಇಷ್ಟ ಇಲ್ಲದ ವ್ಯಕ್ತಿಯ ಜೊತೆಗೆ ನಿಶ್ಷಿತಾತ ಮಾಡಿದ್ದರು. ಆದರೆ ನನಗೆ ಇಷ್ಟ ಇರಲಿಲ್ಲ. ಕಳೆದ ನಾಲ್ಕೈದು ವರ್ಷದಿಂದ ನಾನಿ ರೋಹಿತ್ ಜೊತೆಗೆ ಪ್ರೀತಿ ಮಾಡುತ್ತಿದ್ದೆ. ಕಳೆದ ಐದು ದಿನದ ಹಿಂದೆ ಹಳಿಯಾಳದ ಗಣೇಶ ಮಂದಿರದಲ್ಲಿ ಮದುವೆಯಾಗಿದ್ದೇನೆ. ಈಗ ನಮ್ಮ ಮನೆಯವರು ನಮಗೆ ಜೀವ ಬೇದರಿಕೆ ಹಾಕುತ್ತಿದ್ದಾರೆ. ನಮಗೆ ರಕ್ಷಣೆ ಕೊಡಬೇಕೆಂದು ನಂದಿನ ದೊಡಮನಿ ಮನವಿ ಮಾಡಿದರು.
ಪ್ರೇಮ ವಿವಾಹಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವ ನಂದಿನಿ ಕುಟುಂಬದವರು ರೋಹಿತ್ ಕುಟುಂಬದವರಿಗೆ ಜೀವ ಬೆದರಿಕೆ ಹಾಕುತ್ತಿದ್ದಾರೆ ಎಂದು ಪ್ರೇಮಿಗಳು ಆರೋಪಿಸಿದ್ದಾರೆ. ರಕ್ಷಣೆ ಕೋರಿ ಈ ಜೋಡಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ಮನವಿ ಮಾಡಿದ್ದಾರೆ.
