ಬೆಳಗಾವಿ: ತಾಲ್ಲೂಕಿನ ಮುತ್ಯಾನಟ್ಟಿ ಗುಡ್ಡದಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಪ್ರಕರಣದಲ್ಲಿ ಬಂಧಿತರಾಗಿದ್ದ ಐವರ ವಿರುದ್ಧದ ಆರೋಪ ಸಾಬೀತಾಗಿದ್ದು, ಆರೋಪಿಗಳಿಗೆ ಬೆಳಗಾವಿಯ 3ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ಮತ್ತು ಪೋಕ್ಸೋ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ಆದೇಶ ನೀಡಿದೆ.ಅಷ್ಟೇ ಅಲ್ಲ ಪ್ರತಿ ಆರೋಪಿಗಳಿ ತಲಾ 5ಲಕ್ಷ ರೂ. ದಂಡ ವಿಧಿಸಿದೆ.
ಮುತ್ಯಾನಟ್ಟಿಯ ಸಂಜು ದಡ್ಡಿ (24), ಸುರೇಶ ಭರಮಪ್ಪ ಬೆಳಗಾವಿ (24), ಸುನೀಲ ಲಗಮಪ್ಪ ಡುಮ್ಮಗೋಳ (21), ಹುಕ್ಕೇರಿ ತಾಲ್ಲೂಕು ಮಣಗುತ್ತಿಯ ಮಹೇಶ ಶಿವನ್ನಗೋಳ (23) ಮತ್ತು ಬೈಲಹೊಂಗಲದ ಸೋಮಶೇಖರ ಶಹಾಪುರ (23) ಅಪರಾಧಿಗಳಿಗೆ ಶಿಕ್ಷೆಯಾಗಿದೆ.ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯವು 33 ಸಾಕ್ಷಿಗಳನ್ನು ವಿಚಾರಣೆಗೆ ಒಳಪಡಿಸಿತ್ತು.
ಮೊದಲ ಹಾಗೂ ಎರಡನೇ ಆರೋಪಿಗೆ ತಲಾ 5.21 ಲಕ್ಷ ರೂ., ಮೂರು ಹಾಗೂ, ನಾಲ್ಕನೇ ಆರೋಪಿಗೆ 5.11 ಲಕ್ಷ ರೂ. ಹಾಗೂ 5.06 ಲಕ್ಷ ರೂ. ದಂಡ ವಿಧಿಸಲಾಗಿದೆ.
2017 ರಲ್ಲಿ ಮುತ್ಯಾನಟ್ಟಿಯ ಗುಡ್ಡದ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿತ್ತು ಕಾಕತಿ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು,ತನಿಖಾಧಿಕಾರಿಯಾಗಿ ಸಿಪಿಐ ರಮೇಶ್ ಗೋಕಾಕ್ ಅವರು ತನಿಖೆ ಮಾಡಿದ್ದರು.ಸರ್ಕಾರಿ ವಿಶೇಷ ಅಭಿಯೋಜಕರಾಗಿ ಎಲ್ ವಿ ಪಾಟೀಲ ಸರ್ಕಾರದ ಪರವಾಗಿ ವಕಾಲತ್ತು ಮಾಡಿದ್ದರು.