ಬೆಳಗಾವಿ- ಬೆಳಗಾವಿ ನಗರ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಸೇರಿ ಫೆಬ್ರುವರಿ ತಿಂಗಳಿಗೆ ಬರೊಬ್ಬರಿ ಎರಡು ವರ್ಷ ಸ್ಮಾರ್ಟ್ ಸಿಟಿಯಲ್ಲಿ ಯೋಜನೆಯ ಝಲಕ್ ನೋಡಲು ಸಿಗದಿದ್ದರೂ ರಾಜ್ಯ ಸರ್ಕಾರದ ವಿಶೇಷ ಅನುದಾನದಲ್ಲಿ ಮಾಡಿದ ಸ್ಮಾರ್ಟ್ ರಸ್ತೆ, ಸೇರಿದಂತೆ ಇತರ ಕಾಮಗಾರಿಗಳು ನೋಡಲು ಸಿಗುತ್ತವೆ
ಬೆಳಗಾವಿಯಲ್ಲಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನಗರದ ಇನ್ನೂ ಹಲವಾರು ರಸ್ತೆಗಳು ಸ್ಮಾರ್ಟ್ ಆಗಲಿವೆ ಸ್ಮಾರ್ಟ್ ಬಸ್ ನಿಲ್ದಾಣ,ಸ್ಮಾರ್ಟ್ ಬಸ್ ಶೆಲ್ಟರ್ ಸ್ಮಾರ್ಟ್ ಪಾರ್ಕಿಂಗ್,ಹೀಗೆ ಹಲವಾರು ಸ್ಮಾರ್ಟ್ ಕಾಮಗಾರಿಗಳ ಜೊತೆಗೆ ಬೆಳಗಾವಿ ಪಾಲಿಕೆ ಸ್ಮಾರ್ಟ್ ಚಿತಾಗಾರ ನಿರ್ಮಿಸುತ್ತಿದೆ
ಬೆಳಗಾವಿ ಮಹಾನಗರ ಪಾಲಿಕೆಯ ಸದಾಶಿವ ನಗರದ ಸ್ಮಶಾನದಲ್ಲಿ ಸ್ಮಾರ್ಟ್ ಶಾಸಕ ಫಿರೋಜ್ ಸೇಠ ಅವರ ವಿಶೇಷ ಕಾಳಜಿಯಿಂದಾಗಿ 54 ಲಕ್ಷರೂ ವೆಚ್ಚದಲ್ಲಿ ಡಿಸೈಲ್ ಆಧಾರಿತ ಚಿತಾಗಾರ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ
ಕೇವಲ 750 ರೂ ವೆಚ್ಚದಲ್ಲಿ ಮೂರು ಘಂಟೆಯಲ್ಲಿ ಒಂದು ಅಂತ್ಯಕ್ರಿಯೆ ಮುಗಿಸುವ ಈ ಡಿಸೈಲ್ ಆಧಾರಿತ ಚಿತಾಗಾರ ಮೂರು ತಿಂಗಳಲ್ಲಿ ರೆಡಿಯಾಗಲಿದೆ
ಶಾಸಕ ಫಿರೋಜ್ ಸೇಠ ಮತ್ತು ಮಾಜಿ ಮಂತ್ರಿ ಸತೀಶ ಜಾರಕಿಹೊಳಿ ಅವರು ಡಿಸೈಲ್ ಆಧಾರಿತ ಚಿತಾಗಾರಕ್ಕೆ ಚಾಲನೆ ನೀಡಿದ್ದಾರೆ
ಕಟ್ಟಿಗೆ ಉರುವಲದಲ್ಲಿ ಅಂತ್ಯಕ್ರಿಯೆ ಮಾಡಬೇಕಾದ್ರೆ ಈ ಮೊದಲು ಮೂರು ಸಾವಿರ ರೂ ಗೂ ಹೆಚ್ಚು ಖರ್ಚು ಬರುತ್ತಿದ್ದು ಡಿಸೈಲ್ ಆಧಾರಿತ ಚಿತಾಗಾರ ರೆಡಿಯಾದರೆ ಕೇವಲ 750 ರೂ ಚಾರ್ಜ್ ಮಾಡಲು ಪಾಲಿಕೆ ನಿರ್ಧಾರ ಕೈಗೊಂಡಿದೆ
ಮಹಾನಗರ ಪಾಲಿಕೆ 54 ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಡಿಸೈಲ್ ಆಧಾರಿತ ಚಿತಾಗಾರ ಬೆಳಗಾವಿ ಜನತೆಗೆ ಅನಕೂಲ ಆಗಲಿದೆ ಆದ್ರೆ ಪಾಲಿಕೆ 750 ರೂ ಚಾರ್ಜ್ ಮಾಡದೇ ಉಚಿತ ಸೇವೆ ಮಾಡಿದ್ರೆ ಒಳ್ಳೆಯದು ಅನ್ನೋದು ಸಮಾಜ ಸೇವಕರ ಅಂಬೋಣ ಈ ಕುರಿತು ಪಾಲಿಕೆ ಸದಸ್ಯರು ತೀರ್ಮಾಣ ಕೈಗೊಳ್ಳುವದು ಅಗತ್ಯ