ಬೆಳಗಾವಿ- ಮಹಾದಾಯಿ ಬಚಾವ್ ಆಂದೋಲನವನ್ನು ಗೋವಾ ರಾಜ್ಯದ ಪರಿಸರವಾದಿಗಳು ಆರಂಭಿಸಿದ್ದಾರೆ ಮಹಾದಾಯಿ ನದಿ ನೀರಿಗಾಗಿ ಆಗ್ರಹಿಸಿ ಕರ್ನಾಟಕ ರಾಜ್ಯದಲ್ಲಿ ನಾಳೆ ಬಂದ್ ಆಚರಿಸಲಾಗುತ್ತಿದೆ. ಅತ್ತ ಗೋವಾದಲ್ಲಿ ಮಹಾದಾಯಿ ನದಿ ನೀರು ಉಳಿಸಿಕೊಳ್ಳಲು ಮಹದಾಯಿ ಬಚಾವ್ ಆಂದೋಲನವೊಂದು ಇಂದೇ ಪ್ರಾರಂಭವಾಗಿದೆ.
ಗೋವಾ ಸುರಕ್ಷಾ ಮಂಚ್ ಮುಖಂಡ ಆನಂದ್ ಶಿರೋಡ್ಕರ್ ನೇತೃತ್ವದಲ್ಲಿ ಇಂದಿನಿಂದ 7 ದಿನಗಳ ಕಾಲ ಗೋವಾದ್ಯಂತ ಮಹದಾಯಿ ಬಚಾವ್ ಯಾತ್ರೆ ನಡೆಯಲಿದೆ. ಕರ್ನಾಟಕದ ಗಡಿಭಾಗದಲ್ಲಿರುವ ಸೂರಲ್ನ ಐತಿಹಾಸಿಕ ಸಾತೇರಿ ಕೇಳಬಾವಿ ದೇವಸ್ಥಾನದಲ್ಲಿ ಇಂದು ವಿಶೇಷ ಪೂಜೆ ಸಲ್ಲಿಸುವ ಮೂಲಕ ಆಂದೋಲನಕ್ಕೆ ಚಾಲನೆ ನೀಡಲಾಯಿತು.
ಪೂಜೆಗೋಸ್ಕರ ಕರ್ನಾಟಕದಲ್ಲಿರುವ ಕಳಸಾ ನಾಲೆ ಸೇರಿದಂತೆ ಮಹದಾಯಿಯ 10 ಉಪನದಿಗಳಿಂದ ನೀರು ಸಂಗ್ರಹಿಸಿ ಕುಂಬದಲ್ಲಿ ತುಂಬಿ ಕೊಂಡೊಯ್ಯಲಾಯಿತು. ಈ ಸಂದರ್ಭದಲ್ಲಿ ಪೊಲೀಸ್ ಬಿಗಿ ಭದ್ರತೆ ಒದಗಿಸಲಾಗಿತ್ತು