ಕರ್ನಾಟಕ – ಮಹಾರಾಷ್ಟ್ರ ನಡುವೆ ಬಸ್ ಓಡಾಟ ಬಂದ್ ಪ್ರಯಾಣಿಕರ ಪರದಾಟ….!!!
ಬೆಳಗಾವಿ- ಗಡಿಯಲ್ಲಿ ಹೋರಾಟದ ಕಾವು ಹೆಚ್ಚಾದ ಹಿನ್ನಲೆಯಲ್ಲಿ ಕರ್ನಾಟಕ – ಮಹಾರಾಷ್ಟ್ರ ನಡುವಿನ ಬಸ್ ಸಂಚಾರ ಬಂದ್ ಮಾಡಲಾಗಿದೆ.
ಪ್ರಮಾಣವಚನ ಸ್ವೀಕರಿಸುವಾಗ ಮಹಾರಾಷ್ಟ್ರದ ಮಂತ್ರಾಲಯದಲ್ಲಿ ಝಾಲಾಚ್ ಪಾಯಿಜೆ ಎಂದು ಘೋಷಣೆ ಕೂಗಿದ ಮಹಾರಾಷ್ಟ್ರ ಚಂದಗಡ ಶಾಸಕ ರಾಜೇಶ್ ಪಾಟೀಲ ಅವರನ್ನು ಎಂ ಈ ಎಸ್ ವತಿಯಿಂದ ಬೆಳಗಾವಿಯಲ್ಲಿ ಸತ್ಕರಿಸಲಾಗುತ್ತಿದೆ. ರಾಜೇಶ್ ಪಾಟೀಲ ಅವರನ್ನು ಬೆಳಗಾವಿ ಗಡಿ ಪ್ರವೇಶ ಮಾಡಲು ಅವಕಾಶ ನೀಡಬಾರದು ಎಂದು ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದ ಹೆನ್ನಲೆಯಲ್ಲಿ ಮುಂಜಾಗೃತ ಕ್ರಮವಾಗಿ ಬಸ್ ಗಳ ಓಡಾಟ ನಿಲ್ಲಿಸಲಾಗಿದೆ
ಬೆಳಗಾವಿಯಿಂದ ,ಹಾಗು ಚಿಕ್ಕೋಡಿ ವಿಭಾಗದಿಂದ ಕೊಲ್ಹಾಪೂರದ ಕಡೆಗೆ ಬಸ್ ಗಳು ಓಡಾಡುತ್ತಿಲ್ಲ, ಜೊತೆಗೆ ಗಡಿಯಲ್ಲಿ ಕರ್ನಾಟಕ ನವನಿರ್ಮಾಣ ಸೇನೆಯ ಕಾರ್ಯಕರ್ತರು ಮಹಾರಾಷ್ಟ್ರ ಬಸ್ ಗಳಿಗೆ ಕಪ್ಪು ಮಸಿ ಬಳಿದ ಹಿನ್ನಲೆಯಲ್ಲಿ ಕೊಲ್ಗಾಪೂರ ಸಾಂಗ್ಲಿ ,ಮಿರಜ ಪ್ರದೇಶಗಳಿಂದಲೂ ಬೆಳಗಾವಿಯತ್ತ ಮಹಾರಾಷ್ಟ್ರ ದ ಬಸ್ ಗಳು ಓಡಾಡುತ್ತಿಲ್ಲ ಹೀಗಾಗಿ ಅಂತರಾಜ್ಯ ಬಸ್ ಸಂಚಾರವನ್ನು ತಡೆ ಹಿಡಿಯಲಾಗಿದೆ.
ಅಂತರಾಜ್ಯ ಬಸ್ ಸಂಚಾರವನ್ನು ತುರ್ತಾಗಿ ತಡೆ ಹಿಡಿದಿರುವದರಿಂದ ಪ್ರಯಾಣಿಕರು ಪರದಾಡುವ ದೃಶ್ಯ ಸಾಮಾನ್ಯವಾಗಿದ್ದು ಪ್ರಯಾಣಿಕರು ಖಾಸಗಿ ವಾಹನಗಳ ಮೊರೆ ಹೋಗಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ