ಬೆಳಗಾವಿ- ಪಶ್ಚಿಮ ಘಟ್ಟಗಳಲ್ಲಿ ನಿರಂತರವಾಗಿ ಮಳೆ ಸುರಿಯುತ್ತಿದೆ. ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಮಲಪ್ರಭಾ ನದಿಯ ನವೀಲುತೀರ್ಥ ಜಲಾಶಯ ಭರ್ತಿಯಾಗಿದೆ.ಖಾನಾಪೂರದಿಂದ ಸವದತ್ತಿಯವರೆಗೆ ಹರಿಯುವ ಮಲಪ್ರಭಾ ನದಿ ತೀರದಲ್ಲಿ ಮೊಸಳೆಗಳು ಕಾಣಿಸಿಕೊಂಡಿದ್ದು ನದಿ ತೀರದ ಗ್ರಾಮಸ್ಥರು ಎಚ್ಚರಿಕೆ ವಹಿಸುವದು ಅಗತ್ಯವಾಗಿದೆ.
ಬೈಲಹೊಂಗಲ ಪ್ರದೇಶದ ಮಾಟೊಳ್ಳಿ ಗ್ರಾಮ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ನದಿ ತೀರದಲ್ಲಿ ಮೊಸಳೆ ಪ್ರತ್ಯಕ್ಷವಾಗಿದೆ.ಇದನ್ನು ಮೋಬೈಲ್ ಗಳಲ್ಲಿ ವಿಡಿಯೋ ಮಾಡಿ ಈ ಬಾಗದ ಜನ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದು ಖಾನಾಪೂರದಿಂದ ಸವದತ್ತಿಯವರೆಗೆ ಬರುವ ನದಿ ತೀರದ ಎಲ್ಲ ಗ್ರಾಮಸ್ಥರು ಮೊಸಳೆಗಳ ಬಗ್ಗೆ ಮುಂಜಾಗ್ರತೆ ವಹಿಸುವದು ಅಗತ್ಯವಾಗಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಮೊಸಳೆಗಳ ಚಲನವಲನಗಳ ಮೇಲೆ ನಿಗಾ ವಹಿಸಿ ಮೊಸಳೆಗಳನ್ನು ಹಿಡಿದು ಸೂಕ್ತ ಸ್ಥಳಕ್ಕೆ ಸಾಗಿಸುವದು ಅತ್ಯಗತ್ಯವಾಗಿದ್ದು.ಮಲಪ್ರಭಾ ನದಿ ತೀರದಲ್ಲಿ ಬರುವ ಗ್ರಾಮಗಳ ಗ್ರಾಮ ಪಂಚಾಯತಿಯವರು ತಮ್ಮ ತಮ್ಮ ಊರುಗಳಲ್ಲಿ ಹೊಳಿ ದಂಡಿ ಮ್ಯಾಲ ಮೊಸಳೆ ಬಂದ್ರಾವ್ರೀ ಪಾ…ಎಂದು ಡಂಗುರ ಸಾರಬೇಕಾಗಿದೆ. ಈ ಬಗ್ಗೆ ಬೈಲಹೊಂಗಲ ಮತ್ತು ಕಿತ್ತೂರು ತಹಶೀಲದಾರರು ಕ್ರಮ ಜರುಗಿಸಬೇಕಾಗಿದೆ.