ಬೆಳಗಾವಿ- ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವ ಪರಿಣಾಮ ಮಲಪ್ರಭಾ ನದಿಗೆ ಅಡ್ಡಲಾಗಿ ಕಟ್ಟಿದ ಮುನವಳ್ಳಿ ನವಿಲು ತಿರ್ಥ ಜಲಾಶಯ ಭರ್ತಿಯಾಗಿದ್ದು ಯಾವುದೇ ಸಮಯದಲ್ಲಿ ಜಲಾಶಯದಿಂದ ನೀರು ಬಿಡುವ ಸಾಧ್ಯತೆ ಇದೆ.
ಯಾವುದೆ ಕ್ಷಣದಲ್ಲಿ ಜಲಾಶಯದಿಂದ ನೀರು ಹೊರ ಬಿಡುವ ಸಾಧ್ಯತೆ ಇರುವದರಿಂದ,ರಾಮದುರ್ಗ ತಾಲೂಕಿನ 20 ಹಳ್ಳಿಗಳು ಹಾಗು ಸವದತ್ತಿ ತಾಲೂಕಿನ 8 ಹಳ್ಳಿಗಳಿಗೆ ಪ್ರವಾಹ ಭೀತಿ ಎದುರಿಸುತ್ತಿವೆ
ಪ್ರವಾಹ ಭೀತಿ ಹಿನ್ನೆಲೆ ಗ್ರಾಮದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಪುರಸಭೆ, ತಾಲೂಕಾ ಆಡಳಿತ ಸೂಚನೆ ನೀಡಿದೆ
ಅಟೊ ರಿಕ್ಷಾಗಳಲ್ಲಿ ಅನೌನ್ಸ ಮಾಡಿ ಜನರಿಗೆ ಅರಿವು ಮುಡಿಸುತ್ತಿರುವ ಅಧಿಕಾರಿ ,ಸಿಬ್ಬಂದಿ. ಮುನವಳ್ಳಿ ಪುರಸಭೆಯಿಂದ ಜಾಗ್ರತೆ ಅಭಿಯಾನ ನಡೆದಿದೆ.
ಕಿಡಕಿಯಿಂದ ಹಾರಿ ವೃದ್ದನ ಆತ್ಮಹತ್ಯೆ
ಬೆಳಗಾವಿ ಪ್ರಸಿದ್ದ ಖಾಸಗಿ ಆಸ್ಪತ್ತೆಯ ಮೇಲಿಂದ ಹಾರಿ ವೃದ್ದನೊರ್ವ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ