ಬೆಳಗಾವಿ-ಬಜಾಜ್ ಕಂಪನಿಯ ಬೈಕ್ ಗಳನ್ನು ಬೆಳಗಾವಿ ಜಿಲ್ಲೆಯ ಹಳ್ಳಿ,ಹಳ್ಳಿಗಳಲ್ಲಿ ಮಾರಾಟ ಮಾಡಿ ದಾಖಲೆ ಮಾಡುವ ಮೂಲಕ ಬೆಳಗಾವಿಯ ಯಶಸ್ವಿ ಉದ್ಯಮಿಯಾಗಿರುವ ಮಲ್ಲಿಕಾರ್ಜುನ್ ಜಗಜಂಪಿ ಅವರು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ದೆ ಮಾಡಲು ನಿರ್ಧರಿಸಿದ್ದಾರೆ.
ಈ ಬಗ್ಗೆ ಬೆಳಗಾವಿ ಸುದ್ದಿ ಡಾಟ್ ಕಾಮ್ ಗೆ ವ್ಯಾಟ್ಸಪ್ ಸಂದೇಶ ಕಳುಹಿಸಿರುವ ಅವರು,ನಾನು ಬಿಜೆಪಿಯ ಸದಸ್ಯನೂ ಅಲ್ಲ,ನಾನು ಕಾಂಗ್ರೆಸ್ಸಿನ ಸದಸ್ಯನೂ ಅಲ್ಲ.ನಾನು ಬೆಳಗಾವಿ ಜಿಲ್ಲೆಯ ಜನಸಾಮಾನ್ಯರ ಧ್ವನಿಯಾಗಿ,ಪಕ್ಷೇತರ ಅಭ್ಯರ್ಥಿಯಾಗಿ ಎಂಪಿ ಇಲೆಕ್ಷನ್ ಗೆ ಸ್ಪರ್ದೆ ಮಾಡುತ್ತೇನೆ ಎಂದು ಮಲ್ಲಿಕಾರ್ಜುನ್ ಜಗಜಂಪಿ ಘೋಷಣೆ ಮಾಡಿದ್ದಾರೆ.
ಬಜಾಜ್ ಕಂಪನಿಯ ಬೈಕ್ ಮಾರಾಟದ ವಿಚಾರವಾಗಿ ದಾಖಲೆ ಮಾಡುವ ಮೂಲಕ ಬೆಳಗಾವಿ ಜಿಲ್ಲೆಯ ಯುವಕರ ಜೊತೆ ಬೆಳಗಾವಿ ಜಿಲ್ಲೆಯ ಹಳ್ಳಿ,ಹಳ್ಳಿಗಳಲ್ಲಿ ಯುವಕರ ಜೊತೆ ನೇರವಾಗಿ ಸಂಪರ್ಕ ಹೊಂದಿರುವ ಮಲ್ಲಿಕಾರ್ಜುನ್ ಜಗಜಂಪಿ ಅವರು ಈ ಬಾರಿಯ ಎಂ.ಪಿ ಇಲೆಕ್ಷನ್ ಗೆ ಸ್ಪರ್ದೆ ಮಾಡುತ್ತಿರುವದು ವಿಶೇಷ,ವಿಭಿನ್ನ, ಮತ್ತು ವಿಶಿಷ್ಟವಾಗಿದೆ.
ಬೆಳಗಾವಿ ಜಿಲ್ಲೆಯಲ್ಲಿ ದಿನ ಕಳೆದಂತೆ, ಲೋಕಸಭೆ ಚುನಾವಣೆಗೆ ನಿಲ್ಲುವ ಆಕಾಂಕ್ಷಿಗಳ ಪಟ್ಟಿ ಬೆಳೆಯುತ್ತಲೇ ಇದೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ
