ಬೆಳಗಾವಿ-ದಿ ಸುರೇಶ್ ಅಂಗಡಿ ಅವರ ಕುಟುಂಬಕ್ಕೆ ಅದೃಷ್ಠದ ಬಾಗಿಲು ತೆರೆದಿದೆ,ನಿನ್ನೆ ರಾತ್ರಿ ಬಿಜೆಪಿ ಹೈಕಮಾಂಡ್ ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ,ಅವರ ಹೆಸರು ಘೋಷಣೆ ಮಾಡುತ್ತಿದ್ದಂತೆ ಮಂಗಲಾ ಅಂಗಡಿ ಇವತ್ತು ಬೆಳ್ಳಂ ಬೆಳಿಗ್ಗೆ ಫೀಲ್ಡ್ ಗೆ ಇಳಿದಿದ್ದಾರೆ.
ಮಂಗಲಾ ಅಂಗಡಿ,ಪುತ್ರಿ ಶ್ರದ್ಧಾ, ಮತ್ತು ಡಾ. ಸ್ಪೂರ್ತಿ ಸೇರಿದಂತೆ ಕುಟುಂಬಸ್ಥರು ಇವತ್ತು ಬೆಳಿಗ್ಗೆ ಬೆಳಗಾವಿಯ ಚನ್ನಮ್ಮ ವೃತ್ತದಲ್ಲಿರುವ ಶ್ರೀ ಗಣೇಶ್ ಮಂದಿರದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಚುನಾವಣಾ ಅಖಾಡಕ್ಕೆ ಇಳಿದಿದ್ದಾರೆ.
ಮಂಗಲಾ ಅಂಗಡಿ ಅವರಿಗೆ ಟಿಕೆಟ್ ಘೋಷಣೆಯಾಗುತ್ತಿದ್ದಂತೆ ಅಂಗಡಿ ಅವರ ಅಭಿಮಾನಿಗಳು ಮಂಗಲಾ ಅಂಗಡಿ ಅವರಿಗೆ ಶುಭಹಾರೈಸಿದ್ದಾರೆ.
ಕಳೆದ ಆರು ತಿಂಗಳಿನಿಂದ ಶಾಂತವಾಗಿದ್ದ ಸುರೇಶ್ ಅಂಗಡಿ ಅವರ ಮನೆಗೆ ಅವರ ಅಭಿಮಾನಿಗಳು ಇವತ್ತು ಬೆಳಿಗ್ಗೆಯಿಂದಲೇ ಬರುತ್ತಿದ್ದಾರೆ,ಒಟ್ಟಾರೆ ಬಿಜೆಪಿಯಲ್ಲಿ ಈಗ ಎಲ್ಲವೂ ಪ್ರಶಾಂತವಾಗಿದ್ದು ಮಂಗಲಾ ಅಂಗಡಿ ವಿಘ್ನೇಶ್ವರನ ಆಶೀರ್ವಾದ ಪಡೆದು ಚುನಾವಣೆಯ ಪ್ರಕ್ರಿಯೆ ಶುರು ಮಾಡಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ