ಬೆಳಗಾವಿ-ಮನಸ್ಸಿನಲ್ಲಿ ಸಹಿಸಲಾಗದ ನೋವು,ಕಣ್ಣೀರಾಗಿ ಕರಗಿದರೂ ಅದನ್ನೆಲ್ಲ ಸಹಿಸಿ ರಾಜಕೀಯ ಕ್ಷೇತ್ರ ಹೊಸದಾದರೂ ದಿ.ಸುರೇಶ ಅಂಗಡಿಯವರ ಪತ್ನಿ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ವಾರದಲ್ಲೇ ಜನಸಾಮಾನ್ಯರ ಜೊತೆ ಬೆರೆತು ಮತಯಾಚಿಸುತ್ತಿದ್ದಾರೆ
ಮಂಗಲಾ ಅಂಗಡಿ ಅವರಿಗೆ ರಾಜಕೀಯ ಕ್ಷೇತ್ರ ಹೊಸದು,ಆದರೂ ಮಂಗಲಾ ಅಂಗಡಿ,ಅತ್ಯಂತ ವಿನಯದಿಂದಲೇ ಬೆಳಗಾವಿ ಲೋಕಸಭಾ ಮತಕ್ಷೇತ್ರದಲ್ಲಿ ಎಲ್ಲರ ಗಮನ ಸೆಳೆಯುತ್ತಿದ್ದಾರೆ.
ಬಿಜೆಪಿ ಹೈಕಮಾಂಡ್ ಮಂಗಲಾ ಅಂಗಡಿ ಅವರನ್ನು ಬಿಜೆಪಿ ಅಭ್ಯರ್ಥಿ ಎಂದು ಘೋಷಣೆ ಮಾಡಿದ ತಕ್ಷಣ,ವಿಘ್ನೇಶ್ವರನ ಆಶಿರ್ವಾದ ಪಡೆದು ಚುನಾವಣಾ ಅಖಾಡಕ್ಕೆ ಇಳಿದಿರುವ ಅವರು ಕೇವಲ ಒಂದು ವಾರದಲ್ಲೇ ಎಲ್ಲರ ಜೊತೆ ಬೆರೆತಿದ್ದಾರೆ.
ಈಗಾಗಲೇ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬೆಳಗಾವಿ,ತಾಲ್ಲೂಕು,ಬೈಲಹೊಂಗಲ,ರಾಮದುರ್ಗ,ಸವದತ್ರಿ ವಿಧಾನಸಭಾ ಕ್ಷೇತ್ರದಲ್ಲಿ ಮತಯಾಚಣೆ ಮಾಡಿರುವ ಮಂಗಲಾ ಅಂಗಡಿ ಬೆಳಿಗ್ಗೆ 7 ಗಂಟೆಯಿಂದಲೇ ಪ್ರಚಾರ ಶುರು ಮಾಡುತ್ತಾರೆ
ಇಂದು ಗೋಕಾಕಿನಲ್ಲಿ ಮತಯಾಚನೆ
ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಮಂಗಲಾ ಅಂಗಡಿ ಅವರು ಇವತ್ತು ಗೋಕಾಕ ವಿಧಾನಸಭಾ ಮತಕ್ಷೇತ್ರದಲ್ಲಿ ಮತಯಾಚಿಸಲಿದ್ದಾರೆ.
ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್,ಸಚಿವ ಭೈರತಿ ಬಸವರಾಜ್ ಶಶಿಕಲಾ ಜೊಲ್ಲೆ ,ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಗೋಕಾಕ್ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ನಡೆಸಲಿದ್ದಾರೆ.