Breaking News

ಶಹಬ್ಬಾಷ್‌….ಬೆಳಗಾವಿ ಮಹಾಪೌರ ಮಂಗೇಶ್ ಪವಾರ್….!!

 

 

ಬೆಳಗಾವಿ – ಬೆಳಗಾವಿ ಮಹಾನಗರ ಪಾಲಿಕೆ ಅಂದ್ರೆ ಕನ್ನಡ- ಮರಾಠಿ ಜಗಳ, ಎಂಈಎಸ್ ಕೇಂದ್ರ ಎನ್ಬುವ ಕಾಲ ಇತ್ತು ಆದ್ರೆ ಈಗ ಕಾಲ ಬದಲಾಗಿದೆ ಬೆಳಗಾವಿ ಮಹಾನಗರ ಪಾಲಿಕೆಯ ಚಿತ್ರಣವೇ ಬದಲಾಗಿದ್ದು ಪಾಲಿಕೆಯಲ್ಲಿ ಈಗ ನಾಡಗೀತೆ ನಿರಂತರವಾಗಿ ಕೇಳಿಸುತ್ತಿದೆ. ಮರಾಠಿ ಭಾಷಿಕ, ಮರಾಠಾ ಸಮಾಜದ ಮಂಗೇಶ್ ಪವಾರ್ ಬೆಳಗಾವಿಯ ಮೇಯರ್ ಆಗಿದ್ದು ಅವರ ಸಾರಥ್ಯದಲ್ಲಿ ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯನ್ನು ಕನ್ನಡದಲ್ಲೇ ನಡೆಸುವ ಮೂಲಕ ಮೇಯರ್ ಮಂಗೇಶ್ ಪವಾರ್ ಅವರು ಭಾಷಾ ಸೌಹಾರ್ದತೆಯ ಪವರ್ ತೋರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಬೆಳಗಾವಿ ಮೇಯರ್ ಮಂಗೇಶ್ ಪವಾರ್ ಇಂದು ನಡೆದ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ನಗರ ಸೇವಕರ ಅಹವಾಲುಗಳು ಕೇಳಿ ಕನ್ನಡದಲ್ಲೇ ಅದಕ್ಕೆ ಉತ್ತರಿಸಿ,ಕನ್ನಡದಲ್ಲೇ ಚರ್ಚಿಸಿ, ಕನ್ನಡದಲ್ಲೇ ಅಧಿಕಾರಿಗಳಿಗೆ ಸೂಚನೆ, ನೀಡಿ,ಕನ್ನಡದಲ್ಲೇ ರೂಲಿಂಗ್ ಮಾಡುವ ಮೂಲಕ ಕನ್ನಡಿಗರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

ಬೆಳಗಾವಿ ಮೇಯರ್ ಮಂಗೇಶ್ ಪವಾರ್ ಅವರ ನೇತ್ರತ್ವದಲ್ಲಿ ನಡೆದ ಪಾಲಿಕೆಯ ಮೊದಲ ಸಾಮಾನ್ಯಸಭೆ ಸಂಪೂರ್ಣವಾಗಿ ಕನ್ನಡಮಯವಾಗಿತ್ತು ಕನ್ನಡದಲ್ಲೇ ನಿರರ್ಗಳವಾಗಿ ಮಾತನಾಡಿದ ಮಂಗೇಶ್ ಪವಾರ್ ಅತ್ಯಂತ ತಾಳ್ಮೆಯಿಂದ ಪಾಲಿಕೆ ಸದಸ್ಯರ ಸಲಹೆಗಳನ್ನು ಆಲಿಸಿದರು, ಸದಸ್ಯರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸಿದರು.ಸ್ಥಳದಲ್ಲೇ ಹಲವಾರು ಆದೇಶಗಳನ್ನು ಮಾಡುವ ಮೂಲಕ ಮೇಯರ್ ಮಂಗೇಶ್ ಪವಾರ್ ಎಲ್ಲರ ಗಮನ ಸೆಳೆದರು.

ಜೊತೆಗೆ ಪಾಲಿಕೆಯ ಸಾಮಾನ್ಯಸಭೆಯ ನಡುವಳಿಕೆಯ ಅಜೇಂಡಾ ಪತ್ರವನ್ನು ಕನ್ನಡ ಹಾಗೂ ಮರಾಠಿ ಎರಡೂ ಭಾಷೆಯಲ್ಲಿ ನೀಡುವ ಮೂಲಕ ಮೇಯರ್ ಮಂಗೇಶ್ ಪವಾರ್ ಭಾಷಾ ಸೌಹಾರ್ದತೆಯ ಸಂದೇಶ ರವಾನಿಸಿದರು.

Check Also

ಕೆಎಲ್ಇ ಡಾಕ್ಟರ್ ಗಳಿಗೆ ಯುದ್ಧ ಗೆದ್ದ ಸಂಭ್ರಮ

ಕೆಮ್ಮು ಮತ್ತು ಕಡಿಮೆ ರಕ್ತದೊತ್ತಡದೊಂದಿಗೆ ತೀವ್ರವಾದ ಉಸಿರಾಟದ ತೊಂದರೆ ಅನುಭವಿಸುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ವ್ಯಕ್ತಿಗೆ ಪೆನುಂಬ್ರಾ ಡಿವೈಸ್ ಮೂಲಕ …

Leave a Reply

Your email address will not be published. Required fields are marked *