Breaking News

ಮರಾಠಿ ಬ್ಯಾರೇ….ಮರಾಠಾ ಬ್ಯಾರೇ ರೀ ಪಾ….!!!

ಬೆಳಗಾವಿ- ಬೆಂಗಳೂರಿನ ಹೋರಾಟಗಾರರಿಗೆ ಬಹುಶ ಮರಾಠಿ,ಮತ್ತು ಮರಾಠಾ ನಡುವಿಣ ವ್ಯತ್ಯಾಸ ಗೊತ್ತಿಲ್ಲ, ಅದಕ್ಕಾಗಿಯೇ ಅವರು ಸರ್ಕಾರ ರಚನೆ ಮಾಡಿರುವ ಮರಾಠಾ ಅಭಿವೃದ್ಧಿ ಪ್ರಾಧಿಕಾರವನ್ನು ವಿರೋಧಿಸುತ್ತಿದ್ದಾರೆ.

ಬೆಳಗಾವಿ ಜಿಲ್ಲೆ ಸೇರಿದಂತೆ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲೂ ಮರಾಠಾ ಸಮುದಾಯ ನೆಲೆಸಿದೆ.ಅವರು ಮಾತಾಡೋದು ಕನ್ನಡ ಭಾಷಿ,ಅವರಿಗೆ ಮರಾಠಿ ಭಾಷೆಯೇ ಗೊತ್ತಿಲ್ಲ, ಮರಾಠಾ ಸಮುದಾಯ ಕನ್ನಡಿಗರಾಗಿಯೇ ಬದುಕುತ್ತಿದ್ದಾರೆ.ಬಹಳಷ್ಟು ಮರಾಠಾ ಸಮುದಾಯದ ಯುವಕರು ಕರ್ನಾಟಕ ರಕ್ಷಣಾ ವೇದಿಕೆ ಸೇರಿದಂತೆ ವಿವಿಧ ಕನ್ನಡ ಸಂಘಟನೆಗಳಲ್ಲಿ ಪದಾಧಿಕಾರಿಗಳಾಗಿದ್ದಾರೆ. ಬೆಳಗಾವಿ ಕರ್ನಾಟಕ ರಕ್ಷಣಾ ವೇದಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಣೇಶ ರೋಕಡೆ,ಮರಾಠಾ ಸಮುದಾಯದವರು,ಬೆಳಗಾವಿಯ ಕನ್ನಡಪರ ಹೋರಾಟಗಾರರು ನಿರಂತರವಾಗಿ ಕನ್ನಡಪರ ಹೋರಾಟ ಮಾಡುತ್ತಿದ್ದಾರೆ.

ಧಾರವಾಡದಲ್ಲಿ ರಕ್ಷಣಾ ವೇದಿಕೆ ಕಟ್ಟಿ ಬೆಳೆಸಿ 40ಕ್ಕೂ ಕೇಸ್ ಹಾಕಿಸಿಕೊಂಡಿ ಶಿವಾಜಿ ಡೆಂಬ್ರೆ‌ ಮರಾಠ ಸಮಾಜದವರು…
ಕರವೇ ಬೆಳಗಾವಿ‌ ದಶರಥ ಬನೋಸಿ ಸಹ ಮರಾಠರೇ.‌ ಇವೆರಡು ಹೆಸರು ಉದಾಹರಣೆ ಮಾತ್ರ ಹಾಗೆ ಹುಡುಕುತ್ತ ಹೋದರೆ ದೊಡ್ಡ ಪಟ್ಟಿಯೇ ಆಗುತ್ತದೆ.

ಮರಾಠಾ ಅಭಿವೃದ್ಧಿ ಪ್ರಾಧಿಕಾರದ ಕುರಿತು ಕನ್ನಡಪರ ಸಂಘಟನೆಗಳು ನಡೆದುಕೊಳ್ಳುವ ರೀತಿ,ಮತ್ತು ಮಾಡುತ್ತಿರುವ ವಿರೋಧ ನೋಡಿ,ಕನ್ನಡಿಗರಾಗಿಯೇ ಬದುಕುತ್ತಿರುವ ,ಕನ್ನಡದ ಉಳುವಿಗಾಗಿ ಹೋರಾಟ ಮಾಡುತ್ತಿರುವ ಮರಾಠಾ ಸಮುದಾಯದ ಯುವಕರಿಗೆ ತುಂಬಾ ನೋವಾಗಿದೆ.

ಖಾನಾಪೂರ ತಾಲ್ಲೂಕಿನ ಅತೀ ಹೆಚ್ಚು ಹಳ್ಳಿಗಳಲ್ಲಿ,ಮರಾಠಾ ಸಮುದಾಯದ ಯುವಕರಿದ್ದಾರೆ.ಮರಾಠಾ ಪ್ರಾಧಿಕಾರದ ರಚನೆಯ ಬಳಿಕ ಕನ್ನಡ ಸಂಘಟನೆಗಳ ವಿರೋಧವನ್ನು ಗಮನಿಸಿ,ಮರಾಠಾ ಸಮುದಾಯದ ಯುವಕರು ,ಮರಾಠಾ ಕನ್ನಡ ಅಭಿಮಾನಿ ಸಂಘಟನೆಯನ್ನು ಹುಟ್ಟು ಹಾಕಲು ನಿರ್ಧರಿಸಿದ್ದಾರೆ.

ಈ ರೀತಿಯ ಚಿಂತನೆ ,ಬೆಳಗಾವಿ ಜಿಲ್ಲೆಯ ಮರಾಠಾ ಸಮುದಾಯದ ಯುವಕರಲ್ಲಿ ಶುರುವಾಗಿದ್ದು ,ಕೆಲವೇ ದಿನಗಳಲ್ಲಿ ಇದು ಅಸ್ತಿತ್ವಕ್ಕೆ ಬರಲಿದ್ದು,ಪರಿಸ್ಥಿತಿಗೆ ತಕ್ಕಂತೆ ಉದಯವಾಗುತ್ತಿರುವ ಈ ಹೊಸ ಸಂಘಟನೆಯ ಉದ್ಘಾಟನೆಗೆ ಮುಖ್ಯಮಂತ್ರಿಗಳನ್ನು ಅಹ್ವಾನಿಸಲು ಮರಾಠಾ ಸಮುದಾಯದ ಯುವಕರು ನಿರ್ಧರಿಸಿದ್ದಾರೆ.

ಬೆಂಗಳೂರಿನ ಕನ್ನಡಪರ ಸಂಘಟನೆಗಳು ವಾಸ್ತವ ಅರಿಯದೇ ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚನೆಗೆ ವಿರೋಧ ಮಾಡುವದು ಸರಿಯಲ್ಲ.ಸೂಕ್ತವೂ ಅಲ್ಲ,ಕರ್ನಾಟಕ ಬಂದ್ ಕರೆಯನ್ನು ಕೂಡಲೇ ವಾಪಸ್ ಪಡೆದು,ರಾಜ್ಯದಲ್ಲಿ ಭಾಷಾ ಸೌಹಾರ್ದತೆಯನ್ನು ಕಾಯ್ದುಕೊಳ್ಳುವದು ಅತ್ಯಗತ್ಯವಾಗಿದೆ,ಜಾತಿ ಬೇರೆ ಭಾಷೆ ಬೇರೆ ,ಎರಡನ್ನೂ ಒಂದೇ ತಕ್ಕಡಿಯಲ್ಲಿ ತೂಗುವದು ಸರಿಯಲ್ಲ.

ಬೆಂಗಳೂರಿನ ಕನ್ನಡಪರ ಸಂಘಟನೆಗಳು ಕೂಡಲೇ ಮರು ಪರಾಮರ್ಶೆ ಮಾಡಿ, ಮರಾಠಾ ಅಭಿವೃದ್ಧಿ ಪ್ರಾಧಿಕಾರದ ರಚನೆಯನ್ನು ಸ್ವಾಗತಿಸಿ,ಎಂದೆಂದಿಗೂ ಕನ್ನಡಿಗರಾಗಿ ಬದುಕುತ್ತಿರುವ ಮರಾಠಾ ಸಮುದಾಯದ ಏಳಿಗೆಗೆ ಬೆಂಬಲ ಸೂಚಿಸಬೇಕಾಗಿದೆ.

Check Also

ಜ್ಞಾನೇಶ್ವರ ಮುನಿ ಮಹಾರಾಜರು (86) ವಿಧಿವಶ

ಬೆಳಗಾವಿ -ಯಮ ಸಲ್ಲೇಖನ ವೃತ್ತದ ಮೂಲಕ ಜ್ಞಾನೇಶ್ವರ ಮುನಿ ಮಹಾರಾಜರು (86) ಇಹಲೋಕವನ್ನು ತ್ಯೇಜಿಸಿದ್ದಾರೆ. ಬೈಲಹೊಂಗಲ ತಾಲೂಕಿನ ದೇವಲಾಪುರ ಕ್ಷೇತ್ರದಲ್ಲಿ …

Leave a Reply

Your email address will not be published. Required fields are marked *