ಬೆಳಗಾವಿ- ಗಣೇಶಪೂರದಿಂದ ಬೆಳಗಾವಿಗೆ ಬೈಕ್ ಮೇಲೆ ಲಿಫ್ಟ ಕೇಳಿದ ಕಿರಾತಕನೊಬ್ಬ ಗಣೇಶಪೂರದ ನಿವಾಸಿ ಬೆನಕನಹಳ್ಳಿ ಗ್ರಾ ಪಂ ಸದಸ್ಯನಿಗೆ ಚೂರಿಯಿಂದ ಇರಿದು ಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ
ಬೆನಕನಹಳ್ಳಿ ಗ್ರಾಮಪಂ ಸದಸ್ಯ ಹಾಗು ಮರಾಠಿ ಭಾಷಿಕ ಯುವ ಅಘಾಡಿಯ ಉಪಾದ್ಯಕ್ಷ ರಾಗಿರುವ 34 ವರ್ಷ ವಯಸ್ಸಿನ ಮೌನೇಶ್ವರ ಬಾಬು ಗದಗ ಚೂರಿ ಇರಿತದಿಂದ ಗಂಭೀರವಾಗಿ ಗಾಯಗೊಂಡು ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ
ಮೌನೇಶ್ವರ ಪಾಟೀಲ. ಬೈಕ್ ಮೇಲೆ ಗಣೇಶಪೂರದಿಂದ ಬೆಳಗಾವಿಗೆ ಬರುವಾಗ ಗಣೇಶಪೂರದ ರಾಜು ಮೋರೆ ಎಂಬಾತ ಲಿಫ್ಟ ಕೇಳಿ ಗುಡ್ ಶೆಪರ್ಡ ಶಾಲೆಯವರೆಗೆ ಬಂದಿದ್ದಾನೆ ನಂತರ ಮೌನೆಶ್ವರನ ಬಾಯಿ ಮುಚ್ವಿ ಕುತ್ತಿಗೆಗೆ ಚೂರಿಯಿಂದ ಇರಿದು ಬೈಕ್ ಮೂಲಕ ಪರಾರಿಯಾಗಿದ್ದಾನೆ
ಚೂರಿ ಇರಿತದಿಂದ ನರಳುತ್ತಿದ್ದ ಮೌನೇಶ್ವರನನ್ನು ಕ್ಯಾಂಪ್ ಪೋಲೀಸರು ಆಸ್ಪತ್ರೆಗೆ ದಾಖಲಿಸಿದ್ದಾರೆ ಈ ಘಟನೆಯಿಂದಾಗಿ ಕೆಲ ಕಾಲ ಗಣೇಶಪೂರ ರಸ್ತೆಯಲ್ಲಿ ಆತಂಕದ ವಾತಾವರಣ ನಿರ್ಮಾಣ ವಾಗಿತ್ತು ಪ್ರಕರಣ ದಾಖಲಿಸಿಕೊಂಡಿರುವ ಕ್ಯಾಂಪ್ ಪೋಲೀಸರು ಆರೋಪಿಯ ಪತ್ತೆಗೆ ಕಾರ್ಯಾಚರಣೆ ಆರಂಭಿಸಿದ್ದಾರೆ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ