ಬೆಳಗಾವಿ- ಮಾರಿಹಾಳ ಪೋಲೀಸ್ ಠಾಣೆಯ ಹದ್ದಿಯಲ್ಲಿ,ಬೆಳಗಾವಿ- ಗೋಕಾಕ್ ರಸ್ತೆಯಲ್ಲಿ ಸುಲಿಗೆ,ಕಳ್ಳತನಾಡುತ್ತಿದ್ದ ಸುಲಿಗೆಕೋರರ ಗ್ಯಾಂಗ್ ಮಾರಿಹಾಳ ಪೋಲೀಸರ ಬಲೆಗೆ ಬಿದ್ದಿದೆ.
ಸುಲಿಗೆ,ಮನೆಗಳ್ಳತನ,ಬೈಕ್ ಕಳ್ಳತನ,ಅಟೋ ಕಳುವು ಮಾಡಿದ್ದ ಸುಲಿಗೆಕೋರರು ಬೆಳಗಾವಿ – ಗೋಕಾಕ್ ರಸ್ತೆಯಲ್ಲಿ,ಸಾರ್ವಜನಿಕರಿಂದ ಆಭರಣ,ಹಣ ಸುಲಿಗೆ ಮಾಡುತ್ತಿದ್ದ ಆರೋಪಿತರಾದ ರಾಮಪ್ಪಾ ಹುಲೆಪ್ಪಾ ಕರಿಹಾಳ(,20,) ಉದ್ಯಮಬಾಗ ವಾಲ್ಮೀಕಿ ನಗರ,,ವಾಂಡ ಬಸ್ಯಾ ಉರ್ಪ ಬಸಪ್ಪ ಹುಲೆಪ್ಪ ಕರೀಹಾಳ,(21) ಉದ್ಯಮಬಾಗ ವಾಲ್ಮೀಕಿ ನಗರ ,ಸಂತೋಷ ಉರ್ಪ ಸಂತ್ಯಾ ಮನೋಹರ ಕಾಂಬಳೆ,(22) ಜೈತುನ ಮಾಳ ಉದ್ಯಮಬಾಗ ,ಸನೀಲ ಬಸಪ್ಪ ತೋಟಗಿ (28) ಚನ್ನಮ್ಮ ನಗರ ಬೆಳಗಾವಿ ಇವರನ್ನು ಬಂದಿಸಿ ,ಐದು ಬೈಕ್ ,ಒಂದು ಅಟೋ ,168 ಗ್ರಾಮ ಚಿನ್ನಾಭರಣ ಸೇರಿದಂತೆ ,ಸುಮಾರು ಒಂಬತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಸಾಮುಗ್ರಿಗಳನ್ನು ವಶ ಪಡಿಸಿಕೊಳ್ಳಲಾಗಿದೆ.
ಮಾರಿಹಾಳ ಠಾಣೆಯ ಪೋಲೀಸರು ಭರ್ಜರಿ ಬೇಟೆಯಾಡಿ ಸುಲಿಗೆಕೋರರನ್ನು ಜೈಲಿಗೆ ಕಳಹಿಸಿದ್ದು ಮಾರಿಹಾಳ ಠಾಣೆಯ ಸಾಧನೆಗೆ ಹಿರಿಯ ಅಧಿಕಾರಿಗಳು ಪ್ರಶಂಸೆ ವ್ಯೆಕ್ತ ಪಡಿಸಿದ್ದಾರೆ.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ