ಬೆಳಗಾವಿ- ಹಲವಾರು ದಶಕಗಳಿಂದ ಅನೇಕ ಅಡತಡೆ ಗಳನ್ನು ಎದುರಿಸಿದ ಕಾಕತಿಯ ಮಾರ್ಕಂಡೇಯ ಶುಗರ್ಸ ಕೊನೆಗೂ ಕಬ್ಬು ನುರಿಸಲು ಆರಂಭಿಸಿದ್ದು ಪ್ರಸಕ್ತ ಹಂಗಾಮಿನಲ್ಲಿ 71 ಸಾವಿರ ಟನ್ ಕಬ್ಬು ನುರಿಸುವಲ್ಲಿ ಯಶಸ್ವಿಯಾಗಿದೆ.
ದಿ.ರಾಮಭಾವು ಪೋತದಾರ ಅವರ ಕನಸಿನ ಕೂಸಾಗಿದ್ದ ಮಾರ್ಕಂಡೇಯ ಸಕ್ಕರೆ ಕಾರ್ಖಾನೆ ಕಬ್ಬು ನುಡಿಸಲು ಆರಂಭಿಸಿದೆ ಟ್ರೈಲ್ ಬೇಸ್ ನಲ್ಲಿ 71 ಸಾವಿರ ಟನ್ ಕಬ್ಬು ನುರಿಸಿ 50 kg ಯ ಒಂದು ಲಕ್ಷ 20 ಸಾವಿರ ಸಕ್ಕರೆ ಉತ್ಪಾದಿಸಿದೆ ಎಂದು ಕಾರ್ಖಾನೆ ಯ ಅದ್ಯಕ್ಷ ಅವಿನಾಶ ಪೋತದಾರ ತಿಳಿಸಿದರು.
ಕಾರ್ಖಾನೆ ಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ಫೆಬ್ರವರಿ 19 ರಂದು ಬೆಳಗಾವಿಗೆ ಮಾಜಿ ಪ್ರದಾನಿ ದೇವೇಗೌಡ ಬರಲಿದ್ದು ಪ್ರಥಮ ಬಾರಿಗೆ ಮಾರ್ಕಂಡೇಯ ಸಕ್ಕರೆ ಕಾರ್ಖಾನೆ ಉತ್ಪಾಸಿದ ಸಕ್ಕರೆ ಚೀಲುಗಳಿಗೆ ದೇವೇಗೌಡರು ಪೂಜೆ ಸಲ್ಲಿಸಲಿದ್ದಾರೆ.
ಮಾರ್ಕಂಡೇಯ ಸಕ್ಕರೆ ಕಾರ್ಖಾನೆ ಸ್ಥಾಪಿಸುವದರಲ್ಲಿ ದೇವೇಗೌಡರ ಸಹಕಾರ ,ಸಹಾಯ ಮಾಡಿದ್ದು ಎಲ್ಲರ ಸಹಕಾರದಿಂದ ಕಾರ್ಖಾನೆ ಆರಂಭವಾಗಿದೆ.ಮುಂದಿನ ಹಂಗಾಮಿನಿಂದ ಕಾರ್ಖಾನೆ ಪೂರ್ಣ ಪ್ರಮಾಣದಲ್ಲಿ ಕಬ್ಬು ನುರಿಸುತ್ತದೆ ಎಂದು ಅವಿನಾಶ ಪೋತದಾರ ಹೇಳಿದರು