ಬೆಳಗಾವಿ – ಹೆಣ್ಣು ಮಕ್ಕಳ ಮಾರಾಟ ಆಯ್ತು,ಹನಿ ಟ್ರ್ಯಾಪ್ ಗೋಳಾಟ ಆಯ್ತು ಈಗ ಹೊಸದೊಂದ ಆಟ ಶುರುವಾಗಿದೆ ಇದು ಮದ್ಯ ವಯಸ್ಸಿನ ಔಟ್ ಡೇಟೆಡ್ ಹುಡುಗರಿಗೆ ಕಾಟವಾಗಿದೆ ಈ ಕಹಾನಿ ಕೇಳಿದ್ರೆ ನಿಜವಾಗಲೂ ಜಗತ್ತಿನ ಮತ್ತೊಂದು ವಿಸ್ಮಯದ ದರ್ಶನವಾದಂತಾಗುತ್ತದೆ.
ನೀವು ಯಾದಿ ಮೇ ಶಾದಿ ಬಗ್ಗೆ ಕೇಳಿದ್ದೀರಾ ನೋಡಿದ್ದೀರಾ,ಅರೇಂಜ್ ಮ್ಯಾರೇಜ್, ಲವ್ ಮ್ಯಾರೇಜ್ ಗಳನ್ನೂ ಸಹ ನೋಡಿದ್ದೀರಾ ಆದ್ರೆ ಈಗ ವೀಕ್ಲಿ ಮ್ಯಾರೇಜ್ ಜಮಾನಾ ಶುರುವಾಗಿದೆ, ಇದರ ಹೆಸರು ವೀಕ್ಲಿ ಮ್ಯಾರೇಜ್ ಅದಕ್ಕೆ ಮದುವೆಯಾಗುವ ಹುಡುಗ ಕೊಡಬೇಕು ಲಕ್ಷ ಲಕ್ಷ ರೂಗಳ ಪ್ಯಾಕೇಜ್ ಒಂದು ವಾರದ ಬಳಿಕ ಈ ರೀತಿಯ ಮದುವೆಯಾದ ಹುಡುಗನ ಲೈಫೇ ಡ್ಯಾಮೇಜ್ ಇಂತಹದೊಂದು ಪ್ರಕರಣ ಘಟನೆ ಪಕ್ಕದ ಬಾಗಲಕೋಟೆ ಜಿಲ್ಲೆಯಲ್ಲಿ ದಾಖಲಾದ್ರೆ ಬೆಳಗಾವಿ ಜಿಲ್ಲೆಯ ರಾಯಬಾಗದಲ್ಲಿ ಬೆಳಕಿಗೆ ಬಂದಿದೆ.
ಏಳೆಂಟು ಹುಡುಗಿಯರ ಗ್ಯಾಂಗ್ ಇದೆ ಈ ಗ್ಯಾಂಗ್ ಲೀಡರ್ ಗಳು ಇರ್ತಾರೆ, ಅವರು 40 ರಿಂದ 50 ವರ್ಷ ವಯಸ್ಸಿನ ಮದುವೆ ಆಗದೇ ಇರುವ ಹುಡುಗರನ್ನು ಹುಡುಕುತ್ತಾರೆ, ನಮ್ಮ ಕಡೆ ಹುಡುಗಿ ಇದ್ದಾಳೆ ನಾವೇ ಮುಂದು ನಿಂತು ಮದುವೆ ಮಾಡಸ್ತೀವಿ ಅದಕ್ಕೆ ಮೂರು ಲಕ್ಷ ನಾಲ್ಕು ಲಕ್ಷ ರೂ ನಮಗೆ ಕೊಡಬೇಕು ಎಂದು ಕರಾರು ಮಾಡಿ ಮದುವೆ ಮಾಡಸ್ತಾರೆ.
ಮದುವೆ ಮಾಡಿಸಿದ ಬಳಿಕ ಲೀಡರ್ ಕೆಲಸ ಮುಗಿಯುತ್ತೆ ಮದುವೆ ಮಾಡಿಕೊಂಡ ಹುಡುಗಿ ಕೇವಲ ಒಂದು ವಾರ ಗಂಡನ ಜೊತೆಯಲ್ಲಿ ಇರ್ತಾಳೆ ಒಂದು ವಾರದ ನಂತರ ತವರು ಮನೆಗೆ ಹೋಗಿ ಬರ್ತೀನಿ ಎಂದು ಹೋದವಳು ಮರಳಿ ಬರುವದಿಲ್ಲ ಇದೇ ವೀಕ್ಲಿ ಮ್ಯಾರೇಜ್.
ಈ ರೀತಿಯ ಮದುವೆ ರಾಯಬಾಗದಲ್ಲಿ ನಡೆದಿದೆ. ಮರ್ಯಾದೆಗೆ ಹೆದರಿ ಮದುವೆ ಮಾಡಿಕೊಂಡ ಹುಡುಗ ಪೋಲೀಸರಿಗೆ ದೂರು ಕೊಟ್ಟಿಲ್ಲ ಆದ್ರೆ ಈ ಬಗ್ಗೆ ಪೋಲೀಸರಿಗೆ ಮಾಹಿತಿ ಸಿಕ್ಕಿದೆ ಪೋಲೀಸರು ಮದುವೆ ಮಾಡಿಕೊಂಡು ವಾರದ ಬಳಿಕ ನಾಪತ್ತೆಯಾಗಿದ್ದ ಆ ಗ್ಯಾಂಗ್ ಪತ್ತೆ ಮಾಡಿ,ವಾರ್ನೀಂಗ್ ಕೊಟ್ಟು ಕಳುಹಿಸಿದ್ದಾರೆ.