ಬೆಳಗಾವಿ-ಕೆಪಿಸಿಸಿ ಆದೇಶದಂತೆ ಬೆಳಗಾವಿ ಲೋಕಸಭಾ ಮತಕ್ಷೇತ್ರದ ಉಪ ಚುನಾವಣೆಯ ಅಭ್ಯರ್ಥಿ ಆಯ್ಕೆಯ ಕುರಿತು ಸಮೀತಿ ಚರ್ಚೆ ಮಾಡಿದೆ. ಒಂದು ವಾರದ ಬಳಿಕ ಮತ್ತೆ ಸಭೆ ಸೇರುತ್ತೇವೆ ಚುನಾವಣೆ ಕೆಪಿಸಿಸಿ ಕಾರ್ಯಾದ್ಯಕ್ಷ ಸತೀಶ್ ಜಾರಕಿಹೊಳಿ ನೇತ್ರತ್ವದಲ್ಲಿ ಚುನಾವಣೆ ನಡೆಯುತ್ತದೆ.ಎಂದು ಆಯ್ಕೆ ಸಮೀತಿಯ ಅದ್ಯಕ್ಷ ಎಂ.ಬಿ ಪಾಟೀಲ ತಿಳಿಸಿದ್ದಾರೆ.
ಬೆಳಗಾವಿಯ ಕಾಂಗ್ರೆಸ್ ಭವನದಲ್ಲಿ ನಡೆದ ಸಮೀತಿಯ ಸಭೆಯ ಬಳಿಕ ಸುದ್ಧಿಗೋಷ್ಠಿ ನಡೆಸಿದ ಎಂ.ಬಿ ಪಾಟೀಲ ಇಂದು ನಡೆದ ಸಭೆಯಲ್ಲಿ ಎಲ್ಲರ ಅಭಿಪ್ರಾಯ ಸಂಗ್ರಹಿಸಲಾಗಿದೆ.ವಾರದ ಬಳಿಕ ಮತ್ತೆ ಸಭೆ ಸೇರುತ್ತೇವೆ.ಏಳೆಂಟು ಜನ ಆಕಾಂಕ್ಷಿಗಳಾಗಿದ್ದಾರೆ,ಎಲ್ಲ ಸಮುದಾಯದ ನಾಯಕರಿಂದಲೂ ಅರ್ಜಿಗಳು ಬಂದಿವೆ,ಮತ್ತೊಮ್ಮೆ ಪರಾಮರ್ಶೆ ಮಾಡುತ್ತೇವೆ ಎಂದು ಎಂಬಿ ಪಾಟೀಲ ಹೇಳಿದ್ರು
ಮುಂದಿನ ದಿನಗಳಲ್ಲಿ ಬೆಳಗಾವಿ ಲೋಕಸಭಾ ಮತ ಕ್ಷೇತ್ರದ ಎಲ್ಲ ವಿಧಾನಸಭಾ ಮತಕ್ಷೇತ್ರಗಳಿಗೂ ಹೋಗಿ ಕಾಂಗ್ರೆಸ್ ನಾಯಕರ ಅಭಿಪ್ರಾಯ ಸಂಗ್ರಹ ಮಾಡಿದ ಬಳಿಕ ಅಂತಿಮವಾಗಿ ಆಕಾಂಕ್ಷಿಗಳ ಹೆಸರನ್ನು ಕೆಪಿಸಿಸಿಗೆ ಶಿಫಾರಸ್ಸು ಮಾಡುತ್ತೇವೆ ಎಂದರು.
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ