ಬೆಳಗಾವಿ- ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಇಂದಿನಿಂದ ವಿಧಾನಸಭೆಯ ಪರ್ವ ಆರಂಭವಾಯಿತು ಕೆಪಿಸಿಸಿ ಅಧ್ಯಕ್ಷರಾದ ಡಾ ಜಿ ಪರಮೇಶ್ವರ, ಡಿಕೆ ಶಿವಕುಮಾರ್ ಜಲಸಂಪನ್ಮೂಲ ಸಚಿವ ಡಿಕೆ ಶಿವಕುಮಾರ್ ಸೇರಿದಂತೆ ಇತರ ನಾಯಕರು ಕಾಂಗ್ರೆಸ್ ನಾಯಕಿ ಲಕ್ಷ್ಮೀ ಹೆಬ್ಬಾಳಕರ ಅವರ ಪರವಾಗಿ ಫುಲ್ ಬ್ಯಾಟಿಂಗ್ ನಡೆಸಿದರು
ಹಿರೇಬಾಗೇವಾಡಿಯ ಎಪಿಎಂಸಿ ಆವರಣದಲ್ಲಿ ನಡೆದ ಕಾಂಗ್ರೆಸ್ ನಡಿಗೆ ವಿಜಯದ ಕಡೆಗೆ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿ ಈ ಬಾರಿ ಲಕ್ಷ್ಮೀ ಹೆಬ್ಬಾಳಕರ ಅವರನ್ನು ಇಪ್ಪತ್ತೈದು ಸಾವಿರ ಮತಗಳ ಅಂತರದಿಂದ ಗೆಲ್ಲಿಸಬೇಕೆಂದು ಅಲ್ಲಿ ನೆರೆದ ಸಹಸ್ರಾರು ಜನರಲ್ಲಿ ಮನವಿ ಮಾಡಿಕೊಂಡಿದ್ದು ವಿಶೇಷವಾಗಿತ್ತು
ಸಿದ್ಧನಭಾಂವಿ ಸೇರಿದಂತೆ ನಾಲ್ಕು ಗ್ರಾಮಗಳ ಕೆರೆ ತುಂಬಿಸುವ ಯೋಜನೆಗೆ ಮಂಜೂರಾತಿ ನೀಡಿ ಗ್ರಾಮೀಣ ಕ್ಷೇತ್ರದ ರೈತರಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಜಲಸಂಪನ್ಮೂಲ ಸಚಿವ ಎಂ ಬಿ ಪಾಟೀಲ ನಮ್ಮ ಸರ್ಕಾರ ನುಡಿದಂತೆ ನಡೆದಿದೆ ನಾಲ್ಕು ವರ್ಷಗಳ ಅವಧಿಯಲ್ಲಿ ನಲವತ್ತು ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ನೀರಾವರಿ ಯೋಜನೆಗಳಿಗೆ ಖರ್ಚು ಮಾಡಿದೆ ಅದರಲ್ಲಿ 28 ಕೋಟಿ ಗೂ ಹೆಚ್ಚು ಅನುದಾನ ಉತ್ತರ ಕರ್ನಾಟಕದ ಯೋಜನೆಗಳಿಗೆ ಖರ್ಚು ಮಾಡಿದ್ದು ಬಿಜೆಪಿ ಸರ್ಕಾರವಿದ್ದಾಗ ಉತ್ತರ ಕರ್ನಾಟಕಕ್ಕೆ ಖರ್ಚು ಮಾಡಿದ್ದು ಕೇವಲ ಹನ್ನೆರಡು ಕೋಟಿ ಹಾಗಾದ್ರೆ ಉತ್ತರ ಕರ್ನಾಟಕಕ್ಕೆ ನ್ಯಾಯ ಕೊಟ್ಟಿದ್ದು ಯಾವ ಪಕ್ಷ ಎಂಬುದನ್ನು ತಿಳಿದುಕೊಂಡು ಬಿಜೆಪಿಯ ಸುಳ್ಳು ಹೇಳಿಕೆಗಳಿಗೆ ಕಿವಿಗೊಡಬಾರದು ಎಂದು ಸಚಿವ ಎಂ ಬಿ ಪಾಟೀಲ ಮನವಿ ಮಾಡಿಕೊಂಡರು
ಶಾಸಕ ಸಂಜಯ ಪಾಟೀಲ ಸಿದ್ಧನಭಾವಿ ಹಾಗು ಇತರ ನಾಲ್ಕು ಗ್ರಾಮಗಳ ಕೆರೆ ತುಂಬಿಸುವ ಯೋಜನೆ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಮಂಜೂರಾಗಿದೆ ಎಂದು ಸುಳ್ಳು ಹೇಳಿ ಜನರ ದಿಕ್ಕು ತಪ್ಪಿಸುವ ಅಪಪ್ರಚಾರದಲ್ಲಿ ತೊಡಗಿದ್ದಾರೆ ಈ ಯೋಜನೆಯ ನೀಲ ನಕ್ಷೆ ತಯಾರಿಸಿ ಅದಕ್ಕೆ ಕೇಂದ್ರ ಜಲ ಆಯೋಗದಿಂದ ಅನುಮತಿ ಪಡೆದು ಕ್ಯಾಬೀನೇಟ್ ನಲ್ಲಿ ಅದಕ್ಕೆ ಅನುಮತಿ ನೀಡಿ ಅನುದಾನ ಬಿಡುಗಡೆ ಮಾಡಿ ಯೋಜನೆಗೆ ಚಾಲನೆ ನೀಡಿದ್ದು ನಾವು ಎಂದು ಎಂ ಬಿ ಪಾಟೀಲ ಶಾಸಕ ಸಂಜಯ ಪಾಟೀಲರಿಗೆ ತಿರಗೇಟು ನೀಡಿದರು
ಸಿದ್ಧನಬಾಂವಿ ಹಾಗು ಇತರ ಗ್ರಾಮಗಳ ಕೆರೆ ತುಂಬಿಸುವ ಯೋಜನೆಗೆ ಮಂಜೂರಾತಿ ನೀಡುವಂತೆ ಲಕ್ಷ್ಮೀ ಹೆಬ್ಬಾಳಕರ ತಮ್ಮನ್ನು ನೂರಕ್ಕೂ ಹೆಚ್ಚು ಬಾರಿ ಭೇಟಿಯಾಗಿ ಬೆಳಗಾವಿಯಲ್ಲಿ ಅಧಿವೇಶನ ನಡೆಯುವ ಸಂಧರ್ಭದಲ್ಲಿ ತಮ್ಮನ್ನು ಸಿದ್ದನಬಾಂವಿ ಕೆರೆ ತೋರಿಸಿ ಕಾಡು ಬೇಡಿ ಯೋಜನೆಯ ಮಂಜೂರಾತಿಗೆ ಲಕ್ಷ್ಮೀ ಹೆಬ್ಬಾಳಕರ ಕಾರಣೀಕರ್ತರಾಗಿದ್ದಾರೆ ಎಂದು ಎಂಬಿ ಪಾಟೀಲ ಹೇಳಿದರು
ಪ್ರಧಾನಿ ನರೇಂದ್ರ ಮೋದಿ ದೇಶದಲ್ಲಿ ನೋಟ್ ಬ್ಯಾನ್ ಮಾಡಿದ ಹಾಗೆ ಗ್ರಾಮೀಣ ಕ್ಷೇತ್ರದಲ್ಲಿ ಢೋಂಗಿ ಮಾತಗಳನ್ನಾಡುವ ಸಂಜಯ್ ಪಾಟೀಲರಿಗೂ ಬ್ಯಾನ್ ಮಾಡಿ ಎಂದು ಎಂ ಬಿ ಪಾಟೀಲ ಹೇಳಿದ್ರು
ಇಂಧನ ಸಚಿವ ಡಿಕೆ ಶಿವಕುಮಾರ ಶಾಸಕ ಸಂಜಯ ಪಾಟೀಲ ಒಳ್ಳೆಯ ವ್ಯೆಕ್ತಿ ಕಳೆದ ಹತ್ತು ವರ್ಷಗಳಿಂದ ಅವರು ನನಗೆ ಸ್ನೇಹಿತ ವಿಧಾನಸಭೆಗೆ ಬರ್ತಾರೆ ಸಹಿ ಮಾಡ್ತಾರೆ ದುಡ್ಡು ಇಸ್ಕೋತಾರೆ ಹೋಗ್ತಾರೆ ಒಂದು ದಿನವೂ ವಿಧಾನಸಭೆಯಲ್ಲಿ ಈ ಕ್ಷೇತ್ರಕೆ ಕರೆಂಟ್ ಕೊಡಿ ನೀರು ಕೊಡಿ ಅಂತ ಕೇಳಲಿಲ್ಲ ಈ ಕ್ಷೇತ್ರದ ಬಗ್ಗೆ ಒಂದು ಪ್ರಶ್ನೆಯನ್ನೂ ಕೆಳಲಿಲ್ಲ ಇಂತಹ ಶಾಸಕನನ್ನು ಈ ಕ್ಷೇತ್ರದಿಂದ ಬ್ಯಾನ್ ಮಾಡೋದು ಒಳ್ಳೆಯದು ಶಾಸಕ ಸಂಜಯ ಪಾಟೀಲ ಈ ಭಾಗದಲ್ಲಿ ಕೆಲಸ ಮಾಡಿದ್ದರೆ ಇಲ್ಲಿ ಇಷ್ಟೊಂದು ಜನ ಸೇರುತ್ತಿರಲಿಲ್ಲ ಎಂದು ಡಿಕೆ ಶಿವಕುಮಾರ್ ಶಾಸಕ ಸಂಜಯ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು
ಸರ್ಕಾರ ನುಡಿದಂತೆ ನಡೆದಿದೆ ಜನರ ಕಲ್ಯಾಣಕ್ಕಾಗಿ ಹಲವಾರು ಕಾರ್ಯಕ್ರಮಗಳನ್ನು ಜಾರಿಗೆ ತಂದಿದೆ ಬಿಜೆಪಿ ಅಧಿಕಾರದಲ್ಲಿ ಇದ್ದಾಗ ಕಚ್ಚಾಡಿದರು ಜನ ಇವರಿಗೆ ಜೈಲಿಗೆ ಹೋಗಲು ಹೇಳಿದ್ರಾ.ಬ್ಲ್ಯು ಫ್ಲಿಂ ನೋಡಲು ಹೇಳಿದ್ರಾ? ರಿಸಾರ್ಟಿಗೆ ಹೋಗಲು ಹೇಳಿದ್ರಾ? ಎಂದು ಬಿಜೆಪಿ ವಿರುದ್ಧ ಪ್ರಶ್ನೆಗಳ ಸುರಿಮಳೆಗೈದ ಅವರು ಬಿಜೆಪಿ ಪಾಪ ಪರಿವರ್ತನೆ ಆಗಬೇಕಾಗಿದೆ ಅಧಿಕಾರ ಇದ್ದಾಗ ಬಿಜೆಪಿಯಿಂದ ಸೈಕಲ್ ಸೀರೆ ಕೊಟ್ಟಿರುವದನ್ನು ಬಿಟ್ಟು ಬೇರೆ ಏನೂ ಕೊಡಲು ಸಾಧ್ಯವಾಗಲಿಲ್ಲ ಈಗ ಅಧಿಕಾರ ಇಲ್ಲದಿದ್ದಾಗ ಪರಿವರ್ತನೆ ಮಾಡಲು ಹೊರಟಿದ್ದಾರೆ ಎಂದು ಡಿ ಕೆ ಶಿವಕುಮಾರ್ ಬಿಜೆಪಿ ವಿರುದ್ಧ ವ್ಯೆಂಗ್ಯವಾಡಿದರು
ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಸುವರ್ಣ ವಿಧಾನಸಭೆ ಇದೆ ಈ ಕ್ಷೇತ್ರದ ಬೆಳವಣಿಗೆಗೆ ಮನೆಗೆ ಬಂದ ಮಹಾಲಕ್ಷ್ಮೀಯನ್ನು ದೂರಕ್ಕೆ ಸರಿಸಬೇಡಿ ರಾಜಕಾರಣ ನಿಂತ ನೀರಲ್ಲ ಇದು ಹರಿಯುವ ನೀರಲ್ಲ ಚುನಾವಣೆ ಬಂದಾಗ ಮತ್ತೆ ಇಲ್ಲಿಗೆ ಬರ್ತಿವಿ ಕೆಲವರು ಲಕ್ಷ್ಮೀ ಹೆಬ್ಬಾಳಕರ ಅವರ ಟಿಕೆಟ್ ತಪ್ಪಸ್ತೀವಿ ಅಂತ ಹೇಳ್ತಿದ್ದಾರೆ ಲಕ್ಷ್ಮೀ ಅವರಿಗೇ ಟಿಕೆಟ್ ಅಂತ ಈ ರಾಜ್ಯದ ಮುಖ್ಯಮಂತ್ರಿ ಹೇಳಿದ್ದಾಯ್ತು ಪಕ್ಷದ ಅದ್ಯಕ್ಷರೂ ಹೆಳಿದ್ದಾಯ್ತು ಟಿಕೆಟ್ ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ ಇಡೀ ಸರ್ಕಾರ ಮತ್ತು ಪಕ್ಷ ಲಕ್ಷ್ಮೀ ಹೆಬ್ಬಾಳಕರ ಅವರ ಜೊತೆಗೆ ಇದೆ ಎಂದು ಡಿಕೆಶಿ ಹೇಳಿದರು
ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ ಮಾತನಾಡಿ ಬಿಜೆಪಿಯ ಅಜಂಡಾ ಕೋಮುವಾದದ ಅಜಂಡವಾಗಿದೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ ಶಾ ರಾಜ್ಯದಲ್ಲಿ ಕೋಮು ಗಲಭೆ, ಸೃಷ್ಠಿಸಿ ರಾಜ್ಯದಲ್ಲಿ ಗೊಂದಲ ಸೃಷ್ಠಿಸಿ ಎಂದು ಹೇಳುತ್ತಾರೆ ಇವರಿಗೆ ಅಭಿವೃದ್ಧಿ, ಶಾಂತಿ ಬೇಕಾಗಿಲ್ಲ ಎಂದು ಪರಮೇಶ್ವರ ಆರೋಪಿಸಿದರು
ಕೇಂದ್ರ ಸಚಿವ ಅನಂತಕುಮಾರ ಹೆಗಡೆ ವಿವಾದಾತ್ಮಕ ಹೇಳಿಕೆ ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ
ರಾಜ್ಯದಲ್ಲಿ ಬಿಜೆಪಿ ನಡೆಸುತ್ತಿರುವ ಪರಿವರ್ತನಾ ರ್ಯಾಲಿಯಲ್ಲಿ ಜೈಲಿಗೆ ಹೋಗಿದ್ದು, ನಾವು ಪರಿವರ್ತನೆಯಾಗಿದ್ದೇವೆ ಎಂದು ಜನರ ಮುಂದೆ ಹೇಳಲು ಹೋರಟಿದೆ ಎಂದು ಭಾವಿಸಿಕೊಳ್ಳಬೇಕಾಗುತ್ತದೆಕಾಂಗ್ರೆಸ್ ಸರಕಾರ ರಾಜ್ಯದ ಜನತೆಗೆ ಸಾಕಷ್ಟು ಯೋಜನೆಗಳನ್ನು ನೀಡಿದೆ. ಬಿಜೆಪಿಯವರ ಕೊಡುಗೆ ಏನು ಎಂದು ಪ್ರಶ್ನಿಸಿದ ಅವರು
ಕೇಂದ್ರದಲ್ಲಿ ಬಿಜೆಪಿಯ ಪ್ರಧಾನಿ ಮೋದಿ ಹೇಳಿದ ಸುಳ್ಳನ್ನು ರಾಜ್ಯದ ಚುನಾವಣೆಯ ಸಂದರ್ಭದಲ್ಲಿ ಜನರ ಮುಂದೆ ಇಡುತ್ತೇವೆ
ವಿಧಾನ ಸಭೆಯ ಚುನಾವಣೆಯಲ್ಲಿ ಮತ್ತೇ ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬರುತ್ತದೆ ಎಂಬ ವಿಶ್ವಾಸ ಇದೆ. ಜನರು ನಮ್ಮ ಮೇಲೆ ಆಶೀರ್ವಾದ ಬೇಕು ಎಂದರು
ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಬಂದಾಗಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಸ್ವಚ್ಚ ಆಡಳಿತ ನಡೆಸಿದೆ ನುಡಿದಂತೆ ನಡೆದಿದೆ ಎಂದು ಪರಮೇಶ್ವರ ಹೇಳಿದರು
ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ ಶಾಸಕ ಸಂಜಯ ಪಾಟೀಲ ಕಳೆದ ಹತ್ತು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಾರ್ಯ ಮಾಡದೇ ಕೇವಲ ಪ್ರೋಟೋಕಾಲ್ ಶಾಸಕರಾಗಿದ್ದಾರೆ ತಮಗೆ ಈ ಭಾಗದ ಜನ ಆಶಿರ್ವಾದ ಮಾಡಿ ಐದು ವರ್ಷ ಅಧಿಕಾರ ಕೊಟ್ಟರೆ ಇಪ್ಪತ್ತೈದು ವರ್ಷದ ಅಭಿವೃದ್ಧಿಯನ್ನು ಐದು ವರ್ಷದಲ್ಲೇ ಮಾಡಿ ಮುಗಿಸುವೆ ಎಂದು ಹೆಬ್ಬಾಳಕರ ಭರವಸೆ ನೀಡಿದ್ರು
ಸಿದ್ಧನಭಾವಿ ಕೆರೆ ಸೇರಿದಂತೆ ಇತರ ಗ್ರಾಮಗಳ ಕೆರೆ ತುಂಬಿಸುವ ಯೋಜನೆಗೆ ಮಂಜೂರಾತಿ ಪಡೆಯಲು ಮುಖ್ಯಮಂತ್ರಿ ನೀರಾವರಿ ಮಂತ್ರಿಗಳ ಕೈಕಾಲು ಬಿದ್ದು ಯೋಜನೆಗೆ ಮಂಜೂರಾತಿ ಪಡೆದಿದ್ದೇನೆ ಶಾಸಕ ಸಂಜಯ ಪಾಟೀಲ ಈಗ ಈ ಯೋಜನೆಗೆ ಅಡ್ಡಿಪಡಿಸುತ್ತಿದ್ದಾರೆ ಶಾಸಕರು ದೇವರ ಸ್ವರೂಪಿ ಎಂದು ಜನ ಭಾವಿಸಿದ್ದಾರೆ ಆದ್ರೆ ಶಾಸಕ ಸಂಜಯ ಪಾಟೀಲ ನಡುವಳಿಕೆ ನೋಡಿದರೆ ಅವರೂ ದೆವ್ವ ಎಂಬುದು ಸ್ಪಷ್ಟವಾಗುತ್ತದೆ ಕೇವಲ ಭಾಷಣ ಮಾಡುವದರಿಂದ ಅಭಿವೃದ್ಧಿ ಸಾದ್ಯವಿಲ್ಲ ಎಂದು ಲಕ್ಷ್ಮೀ ಹೆಬ್ಬಾಳಕರ ಶಾಸಕ ಸಂಜಯ ಪಾಟೀಲ ವಿರುದ್ಧ ವಾಗ್ದಾಳಿ ನಡೆಸಿದರು