Breaking News

ಕಟ್ಟಿಮನಿ ಟ್ರಸ್ಟ್‍ನ ಅಧ್ಯಕ್ಷರಾಗಿ ಪ್ರೊ. ಮಲ್ಲಕಾರ್ಜುನ ಹಿರೇಮಠ

 

*ಕಟ್ಟಿಮನಿ ಶತಮಾನೋತ್ಸವದ ಸಂಭ್ರಮ, ಸ್ವಂತ ಕಟ್ಟಡಕ್ಕೆ ಅಳಲು*

ಡಾ. ಎಂ.ಎಂ. ಕಲಬುರ್ಗಿ ಅವರ ಸಾವಿನ ನಂತರ ಕಳೆದ ಎರಡು ವರ್ಷದಿಂದ ಖಾಲಿಯಾಗಿ ಉಳಿದ ಬೆಳಗಾವಿಯಲ್ಲಿನ ಡಾ. ಬಸವರಾಜ್ ಕಟ್ಟಿಮನಿ ಟ್ರಸ್ಟ್‍ನ ನೂತನ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಪ್ರೊ. ಮಲ್ಲಿಕಾರ್ಜುನ ಹಿರೇಮಠ ಅವರು ಇಂದು ಅಧಿಕಾರ ವಹಿಸಿಕೊಂಡರು.

ನಂತರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, 2019 ನೇ ಸಾಲಿಗೆ ಬಸವರಾಜ ಕಟ್ಟಿಮನಿ ಅವರು ಜನಿಸಿ  ನೂರು ವರ್ಷಗಳ ಆಗುತ್ತವೆ. ಅವರ ಶತಮಾನೋತ್ಸವ ಸಮಾರಂಭವನ್ನು ವಿಶೇಷ ಗೋಷ್ಠಿ ಹಾಗೂ ವಿಚಾರ ಸಂಕಿರಣಗಳು ಹಾಗೂ ಇತರೆ ಕಾರ್ಯಕ್ರಮಗಳ ಮೂಲಕ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ಕನ್ನಡದ ಪ್ರಮುಖ ಒಂದುನೂರು ಕಾದಂಬರಿಗಳ ಕುರಿತಿದಾರ ವಿಮರ್ಶಾ ಕೃತಿಯನ್ನು ತರಲು ಉದ್ದೇಶಿಸಲಾಗಿದೆ. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಕಟ್ಟಿಮನಿ ಅವರು ಕಥೆ ಕಾದಂಬರಿ ಕುರಿತಾದ ಕಮ್ಮಟಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ ಎಂದು ಹೇಳಿದರು.

ಚಿತ್ರ ಸಂಪಟ ರಚನೆಯಂಥ ಕೆಲ ಯೋಜನೆಗಳನ್ನು ಡಾ. ಕಲಬುರ್ಗಿ ಅವರು ಹಮ್ಮಿಕೊಂಡಿದ್ದರು. ಅರ್ಧಕ್ಕೆ ಉಳಿದ ಆ ಯೋಜನೆಗಳನ್ನು ಮುಂದುವರೆಸಲಾಗುವುದು. ಕಳೆದ ಎರಡು ವರ್ಷದ ಅನುದಾನ 30 ಲಕ್ಷ ಹಾಗೇ ಉಳಿದಿದ್ದು, ಟ್ರಸ್ಟ್‍ನ ಕಟ್ಟಡ ಹಾಗೂ ಇತರೆ ಕಾರ್ಯಕ್ರಮಗಳಿಗೆ ಉಪಯೋಗಿಸಿಕೊಳ್ಳಲಾಗುವುದು. ಟ್ರಸ್ಟ್‍ನ ಇತರೆ ಸದಸ್ಯರ ನೇಮಕಾತಿ ಬಗ್ಗೆ ಪರಿಶೀಲಿಸಿ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದು ಮಲ್ಲಿಕಾರ್ಜುನ ಹಿರೇಮಠ ತಿಳಿಸಿದ್ದಾರೆ.

ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‍ನ ಅಧ್ಯಕ್ಷ ರಾಘವೇಂದ್ರ ಪಾಟೀಲ ಅವರು, ಕಟ್ಟಿಮನಿ ಹಾಗೂ ಕೃಷ್ಣಶರ್ಮ ಅವರ ಎರಡೂ ಟ್ರಸ್ಟ್‍ಗಳ ಕಟ್ಟಡ ಹಾಗೂ ಜಾಗೆಯ ಬಗ್ಗೆ ಈ ಹಿಂದೆ ಉದ್ಘವಿಸಿತ್ತು. ಬೇರೆಯಡೆ ಸ್ಥಳಾಂತರಕ್ಕೆ ಅವಕಾಶವಿಲ್ಲದ ಕಾರಣ ಕುಮಾರ ಗಂಧರ್ವ ಕಟ್ಟಡದ ಹಿಂಬಾಗದ ಕಟ್ಟಡವನ್ನೇ ಅವಲಂಬಿಸಿ ಕಾರ್ಯಚಟುವಟಿಕೆಗಳನ್ನು ಮುಂದುವರೆಸಿದ್ದೇವೆ. ಈ ಕಟ್ಟಡ್ಕಕೆ ಹತ್ತಿಕೊಂಡೆ ಕಳೆದ 12 ವರ್ಷಗಳಿಂದ ನಿರುಪಯುಕ್ತವಾಗಿ ಕಟ್ಟಡವೊಂದು ಖಾಲಿಬಿದ್ದಿದೆ. ಅದನ್ನು ಬೆಟಗೇರಿ ಕೃಷ್ಣಶರ್ಮ ಟ್ರಸ್ಟ್‍ಗಾಗಿ ಕೊಟ್ಟರೆ ಅದನ್ನು ರಿಪೇರಿ ಮಾಡಿಕೊಂಡು ಬಳಸಿಕೊಳ್ಳುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ವಿನಂತಿ ಮಾಡಿಕೊಳ್ಳಲಾಗಿದೆ. ಆದರೆ, ಆಡಳಿತ ವ್ಯವಸ್ಥೆಯ ಸಂವಹಣದ ಅಂತರ ಹಾಗೂ ತಾಂತ್ರಿಕ ಕಾರಣಗಳಿಂದಾಗಿ ಸಾಧ್ಯವಾಗಿಲ್ಲ. ಕಟ್ಟಡ ಮಾತ್ರ ಹಾಗೇ ಹಾಳುಬಿದ್ದು, ವಿಷಕಾರಿ ಜಂತುಗಳ ಆಶ್ರಯ ತಾಣವಾಗಿದೆ ಎಂದು ಹೇಳಿದರು.

ಇದೇ ಸ್ಥಳದಲ್ಲಿ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಆಡಳಿತ ಕಚೇರಿಯ ಕಟ್ಟಡ ನಿರ್ಮಾಣಕ್ಕಾಗಿ ಸರಕಾರ ಸುಮಾರು 90 ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದೆ. ಅದು ಜಿಲ್ಲಾ ಆಡಳಿತದ ಹತ್ತಿರ ಇನ್ನೂ ಹಾಗೇ ಉಳಿದಿದೆ. ಆ ಹಣದಲ್ಲಿ ಬೇರೆ ಕಟ್ಟಡ ಕಟ್ಟುವುದಕ್ಕಿಂತ ಈಗಿರುವ ಬಸವರಾಜ ಕಟ್ಟಿಮನಿ ಟ್ರಸ್ಟ್‍ನ ಕಟ್ಟಡದ ಮೇಲಂತಸ್ತನ್ನು ನಿರ್ಮಿಸಿದರೆ, ಅಲ್ಲಿಯಾದರೂ ಈ ಎರಡೂ ಟ್ರಸ್ಟ್‍ಗಳನ್ನು ನಡೆಸಿಕೊಂಡು ಹೋಗಲು ಅನುಕೂಲವಾಗುತ್ತದೆ. ಕೆಳಗಡೆ ಆಡಳಿತ ಕಚೇರಿ ನಡೆಸಬಹುದು ಎಂದು ಬೆಳಗಾವಿ ಜಿಲ್ಲಾ ಆಡಳಿತ ಹಾಗೂ ಸರ್ಕಾರದ ಮಟ್ಟದಲ್ಲಿ ಸೂಚಿಸಿ ವಿನಂತಿಸಿಕೊಳ್ಳಲಾಗಿದೆ. ಇದಕ್ಕೂ ಸಹಿತ ಸರಿಯಾದ ಸ್ಪಂದೆನೆ ಸಿಕ್ಕಿಲ್ಲ ಎಂದು ರಾಘವೇಂದ್ರ ಪಾಟೀಲ ಅವರು ತಮ್ಮ ಅಳಲು ತೋಡಿಕೊಂಡರು.

ವಿಮರ್ಶಕ ಗಿರಡ್ಡಿ ಗೋವಿಂದರಾಜ್ ಅವರು ಮಾತನಾಡಿ, ಕಟ್ಟಿಮನಿ ಟ್ರಸ್‍ಗೆ ಬಿಡುಗಡೆಯಾದ ಹಣದಲ್ಲಿ ಕಟ್ಟಡವನ್ನು ರಿಪೇರಿ ಮಾಡಿಕೊಳ್ಳುವುದು ಸೂಕ್ತ. ಡಾ. ಎಂ.ಎಂ. ಕಲಬುರ್ಗಿ ಅವರು ತಾವು ಅಧ್ಯಕ್ಷರಾಗಿದ್ದಾಗಿ  ಟ್ಟಸ್ಟ್‍ನ ಅಧ್ಯಕ್ಷರು ಹಾಗೂ ಸದಸ್ಯರುಗಳ ಅಧಿಕಾರಿ ಮೂರು ವರ್ಷಕ್ಕಿಂತ ಜಾಸ್ತಿ ಇರಬಾರದು ಎಂದು ಸೂಚನೆ ನೀಡಿದ್ದರು. ಕೆಲವರು ರಾಜೀನಾಮೆ ನೀಡಿದ್ದಾರೆ. ಇನ್ನು ಕೆಲವರು ಹಾಗೇ ಉಳಿದಿದ್ದಾರೆ. ಈ ಬಗ್ಗೆ ನೂತನ ಅಕ್ಷರು ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ಹೇಳಿದರು.

ಬಸವರಾಜ ಕಟ್ಟಿಮನಿ ಶತಮಾನೋತ್ಸವ ನಿಮಿತ್ಯ ಹಮ್ಮಿಕೊಳ್ಳುವ ಕಾರ್ಯಕ್ರಮಗಳಲ್ಲಿ ಯಾವುದೇ ಪಟ್ಟಭದ್ರ ಹಿತಾಸಕ್ತಿಗಳಿಗೆ ಮನೆಹಾಕದೆ ಅವರ ಕೃತಿಗಳಿಗೆ ಸರಿಯಾದ ಮೌಲ್ಯ ದೊರಕಿಸಿಕೊಡಲು ಪ್ರಯತ್ನಿಸುವುದಾಗಿ ಮಲ್ಲಿಕಾರ್ಜುನ ಹಿರೇಮಠ ತಿಳಿಸಿದರು.

*ವರದಿ : ಡಾ. ಕೆ.ಎನ್. ದೊಡ್ಡಮನಿ*

Check Also

ಅನೈತಿಕ ಸವಾರಿ ತಡೆದು, ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ….!!

ಬೆಳಗಾವಿ-ತನ್ನ ಹೆಂಡತಿ ಬೇರೊಬ್ಬನ ಜೊತೆ ಬೈಕ್ ಮೇಲೆ ಹೊರಟಿದ್ದನ್ನು ಗಮನಿಸಿದ ಗಂಡ ಇಬ್ಬರ ಮೇಲೂ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಓರ್ವನನ್ನು …

Leave a Reply

Your email address will not be published. Required fields are marked *