ಬಿಜೆಪಿ ಅಭ್ಯರ್ಥಿ ಇವತ್ತೇ ಫೈನಲ್….!!!

ಬೆಳಗಾವಿ-ಬೆಳಗಾವಿ ಲೋಕಸಭಾ ಮತಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯಾರಾಗ್ತಾರೆ ಎನ್ನುವ ವಿಷಯ ಅತ್ಯಂತ ಕುತೂಹಲ ಕೆರಳಿಸಿದ್ದು ಇವತ್ತೇ ಬಿಜೆಪಿ ಅಭ್ಯರ್ಥಿ ಘೋಷಣೆಯಾಗುವ ಎಲ್ಲ ಸಾಧ್ಯತೆಗಳಿವೆ.

ಬಿಜೆಪಿ ಅಭ್ಯರ್ಥಿ ಯಾರಾಗಬಹುದು,? ಬಿಜೆಪಿ ಟಿಕೆಟ್ ಯಾರಿಗೆ ಸಿಗಬಹುದು,ಎನ್ನುವದರ ಬಗ್ಗೆ ಈಗಾಗಲೆ ಅನೇಕ ಆಯಾಮಗಳಲ್ಲಿ ಚರ್ಚೆ,ವಿಶ್ಲೇಷಣೆಗಳು ನಡೆದು ಈ ವಿಚಾರದಲ್ಲಿ ಹಲವಾರು ಜನ ಆಕಾಂಕ್ಷಿಗಳ ಹೆಸರುಗಳು ಪ್ರಸ್ತಾಪ ಆಗಿವೆ.ಈ ಅಭ್ಯರ್ಥಿಯನ್ನು ಘೋಷಣೆ ಮಾಡುವ ಕುರಿತು ಕ್ಷಣಗಣನೆ ಶುರುವಾಗಿದ್ದು ಅಂತಿಮ ಕ್ಷಣಗಳಲ್ಲಿ ಯಾರು ಲಾಟರಿ ಹೊಡೆಯುತ್ತಾರೆ ಅನ್ನೋದನ್ನು ಇವತ್ತು ಸಂಜೆಯವರೆಗೆ ಕಾದು ನೋಡಬೇಕಾಗಿದೆ.

ಇವತ್ತು ದೆಹಲಿಯಲ್ಲಿ ಸ್ಕ್ರೀನೀಂಗ್ ಕಮೀಟಿ ಸಭೆ ನಡೆಯಲಿದ್ದು ಈ ಸಭೆಯಲ್ಲಿ ಅಭ್ಯರ್ಥಿ ಘೋಷಣೆ ಆಗಬಹುದು ಎಂದು ಹೇಳಲಾಗುತ್ತಿದೆ.

ಶ್ರದ್ಧಾ ಶೆಟ್ಟರ್ ಬದಲು ಸುರೇಶ್ ಅಂಗಡಿ ಅವರ ಪತ್ನಿ ಮಂಗಲಾ ಅಂಗಡಿ ಅಥವಾ ಎಂ.ಬಿ ಝಿರಲಿ ಅವರಿಗೆ ಟಿಕೆಟ್ ಸಿಗಬಹು ಎನ್ನುವ ಸುದ್ಧಿ ಈಗ ಜಿಲ್ಲೆಯಾದ್ಯಂತ ಸಾಕಷ್ಟು ಪ್ರಚಾರ ಪಡೆದಿದ್ದು,ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಕೊಡುವ ನಿಟ್ಟಿನಲ್ಲಿ ಬಿಜೆಪಿ ಹೈಕಮಾಂಡ್ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದ್ದು,ಬಿಜೆಪಿ ಇದೇ ಸಿದ್ಧಾಂತ ಪಾಲಿಸಿದರೆ ಬೆಳಗಾವಿಯ ಪ್ರಸಿದ್ಧ ನ್ಯಾಯವಾದಿ,ಬಿಜೆಪಿ ಮುಖಂಡ ಎಂ.ಬಿ ಝಿರಲಿ ಅವರಿಗೆ ಬಿಜೆಪಿ ಟಿಕೆಟ್ ಸಿಗೋದು ಗ್ಯಾರಂಟಿ ಎಂದು ಹೇಳಲಾಗುತ್ತಿದೆ.

ಬೆಳಗಾವಿ ಲೋಕಸಭಾ ಮತಕ್ಷೇತ್ರದ ನಾಲ್ಕು ಜನ ಶಾಸಕರು ಎಂ.ಬಿ ಝಿರಲಿ ಅವರ ಹೆಸರು ಶಿಫಾರಸು ಮಾಡಿದ್ದರಿಂದ ಎಂ.ಬಿ ಝಿರಲಿ ಅವರೇ ಲಾಟರಿ ಹೊಡೆಯುವ ಎಲ್ಲ ಲಕ್ಷಣಗಳು ಕಂಡು ಬಂದಿವೆ…

Check Also

ಮೂವತ್ತು ವರ್ಷಗಳ ನಂತರ ರಾಜಕೀಯ ವೈರಿಗಳ ಮಿಲನ.!!!

  ಬೆಳಗಾವಿ- ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಆಗಿದೆ.ಕಳೆದ ಮೂರು ದಶಕಗಳಿಂದ ರಾಜಕೀಯ ಕಡುವೈರಿಗಳಾಗಿದ್ದ ಕತ್ತಿ ಕುಟುಂಬ ಹಾಗೂ …

Leave a Reply

Your email address will not be published. Required fields are marked *