ನಾಳೆ ಬೆಳಗಾವಿಯಲ್ಲಿ ಸರ್ಕಾರಿ ಖಾಸಗಿ ಆಸ್ಪತ್ರೆಗಳು ಓಪಿಡಿ ಸೇವೆ ಬಂದ್ ಆಗಲಿದ್ದು ನಾಳೆ ಶನಿವಾರ ಬೆಳಗಾವಿ ಜಿಲ್ಲೆಯಾದ್ಯಂತ ಮೆಡಿಕಲ್ ಎಮರ್ಜೆನ್ಸಿ ಎದುರಾಗಲಿದೆ.
ಕಲ್ಕತ್ತಾ ಘಟನೆ ಖಂಡಿಸಿ ಬೆಳಗಾವಿ ಜಿಲ್ಲೆಯಾದ್ಯಂತ ಓಪಿಡಿ ಸೇವೆ ಬಂದ್ ಮಾಡಲು,ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ಬೆಳಗಾವಿ ಜಿಲ್ಲಾಧ್ಯಕ್ಷ ಡಾ.ರವೀಂದ್ರ ಆನಗೋಳ ಹೇಳಿಕೆ ನೀಡಿದ್ದಾರೆ.ಪಶ್ಚಿಮ ಬಂಗಾಳದಲ್ಲಿ ಮಹಿಳಾ ವೈದ್ಯೆ ಮೇಲೆ ಅತ್ಯಾಚಾರ ಕೊಲೆ ಖಂಡಿಸಿ ಓಪಿಡಿ ಸೇವೆ ಸ್ಥಗಿತಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಘಟನೆ ನಡೆದು ವಾರ ಕಳೆದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ,ಮೂರನೇ ವರ್ಷದ ವ್ಯದ್ಯಕೀಯ ವಿದ್ಯಾರ್ಥಿ ಕೆಲಸ ಮುಗಿಸಿ ಮಲಗಿರುವಾಗ ಅಮಾನುಷವಾಗಿ ಕೊಲೆ ಮಾಡಲಾಗಿದೆ.ಆಸ್ಪತ್ರೆ ಮೇಲೆ ದಾಳಿ ನಡೆಸಿ ಪೀಠೋಪಕರಣಗಳನ್ನ ನಾಶ ಮಾಡಿದ್ದಾರೆ.ವೈದ್ಯರ ಮೇಲೆ ಪದೇ ಪದೇ ಈ ರೀತಿ ನಡೆಯುತ್ತಿರುವುದನ್ನ ಖಂಡಿಸಿದರೂ ಸರಕಾರ ಕ್ರಮ ಕೈಗೊಳ್ಳುತ್ತಿಲ್ಲ,
ಮಹಿಳೆ ವೈದ್ಯರಿಗೆ ಹಾಗೂ ಮಹಿಳಾ ವಿದ್ಯಾರ್ಥಿಗಳಿಗೆ ಸರ್ಕಾರ ಯಾವುದೇ ಸುರಕ್ಷಾ ಸೌಲಭ್ಯ ಕೊಡುತ್ತಿಲ್ಲ ಎಂದು ಬೆಳಗಾವಿಯ ಇಂಡಿಯನ್ ಮೆಡಿಕಲ್ ಅಸೋಸೇಶಿಯ್ ಆರೋಪಿಸಿದೆ.
ನ್ಯಾಯ ನೀಡುವಂತೆ ನಮ್ಮ ಹೋರಾಟ ನಡೆಯುತ್ತಿದೆ,ಆಸ್ಪತ್ರೆಗಳಲ್ಲಿ ಸುರಕ್ಷಿತವಾದ ಪರಿಸರ ನಿರ್ಮಾಣವಾಗಬೇಕು,ಇಂತವರ ವಿರುದ್ಧ ಕಟ್ಟುನಿಟ್ಟಿನಲ್ಲಿ ಕ್ರಮ ಕೈಗೊಳ್ಳುವ ಕಾನೂನು ಜಾರಿಗೆ ತರಬೇಕು,ಕಲ್ಕತಾ ಘಟನೆ ಖಂಡಿಸಿ ನಾಳೆ ಬೆಳಗಾವಿ ಜಿಲ್ಲೆಯಲ್ಲಿರುವ ಸರ್ಕಾರಿ ಖಾಸಗಿ ಕ್ಲೀನಿಕ್,ಆಸ್ಪತ್ರೆಗಳ ಓಪಿಡಿ,ಐಪಿಡಿ ಸೇವೆ ಸ್ಥಗಿತ ಮಾಡುತ್ತೇವೆ.ಎಮರ್ಜೆನ್ಸಿ ಸೇವೆ ಮಾತ್ರ ಇರುತ್ತೆ ಎಂದು ಬೆಳಗಾವಿಯ IMA ಘಟಕ ತಿಳಿಸಿದೆ.
ನಾಳೆ ಬೆಳಿಗ್ಗೆ 06ರಿಂದ ಬೆಳಗಿನ 06ಗಂಟೆಯವರೆಗೆ ಸೇವೆ ಸ್ಥಗಿತ ಮಾಡುತ್ತೇವೆ.24 ಗಂಟೆಗಳ ಕಾಲ ನಾವು ಪ್ರತಿಭಟನೆ ಮಾಡುತ್ತೇವೆ ಎಂದು ಮಾಹಿತಿ ನೀಡಿದರು.ಕೇಂದ್ರದ ಮೆಡಿಕಲ್ ಅಸೋಸಿಯೇಶನ್ ನಿರ್ದೇಶನದ ಮೇರೆಗೆ ನಾವು ನಿರ್ಧಾರ ಮಾಡುತ್ತೇವೆ ಎಂದು ಐಎಂಎ ಅಧ್ಯಕ್ಷ ಡಾ.ರವೀಂದ್ರ ಹೇಳಿದ್ದಾರೆ.
ಕೆಎಲ್ಇ ಆಸ್ಪತ್ರೆಯೂ ಬಂದ್ ಗೆ ಬೆಂಬಲ..
ಕೊಲ್ಕತ್ತಾದಲ್ಲಿ ಸ್ಥಾನಿಕ ವೈದ್ಯೆಯ ಅತ್ಯಾಚಾರ ಹಾಗೂ ಕೊಲೆ ಖಂಡಿಸಿ ಐಎಂಎ ಕರೆ ನೀಡಿದ ಪ್ರತಿಭಟನೆಯ ಅಂಗವಾಗಿ ಕೆಎಲ್ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ಹೊರರೋಗಿ ವಿಭಾಗವು ದಿ. 17 ಅಗಷ್ಟ 2024ರಂದು ಕಾರ್ಯನಿರ್ವಹಿಸುವುದಿಲ್ಲ.
ಆದರೆ ಅಪಘಾತ ಮತ್ತು ತುರ್ತು ವೈದ್ಯಕೀಯ ಸೇವೆ, ವಾರ್ಡಗಳು, ಲ್ಯಾಬೊರೆಟರಿ(ಪ್ರಯೋಗಾಲಯ) ಎಂದಿನಂತೆ ಕಾರ್ಯನಿರ್ವಹಿಸಲಿವೆ. ಆದ್ದರಿಂದ ಸಾರ್ವಜನಿಕರು ಗಮನಹರಿಸುವಂತೆ ಕೋರಲಾಗಿದೆ.