ಬೆಳಗಾವಿ- ಬೆಳಗಾವಿಯಲ್ಲಿ ನಾಡದ್ರೋಹಿ ಎಂಇಎಸ ಪುಂಡಾಟಿಕೆ ಮುಂದುವರೆದಿದೆ.ಸೋಶಿಯಲ್ ಮಿಡಿಯಾದಲ್ಲಿ ಕಿರಿಕ್ ಮಾಡುತ್ತಿರುವ ಕಂಗಾಲ್ ಕಂಪನಿ ಎಂಇಎಸ್ ಗೆ ಖಾಕಿ ಪಡೆ ಖದರ್ ತೋರಿಸಿದೆ.
ಸೋಶಿಯಲ್ ಮಿಡಿಯಾದಲ್ಲಿ ಸರ್ಕಾರಕ್ಕೆ ಧಮಕಿ ಹಾಕಿದ,ನಾಡದ್ರೋಹಿಗಳ ವಿರುದ್ಧ ಕೇಸ್ ಬುಕ್ ಆಗಿದೆ.ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದ ಸೈಟ್ ವಿರುದ್ಧ ಕೇಸ್ ದಾಖಲಾಗಿದೆ.
ಬೆಳಗಾವಿ ಖಡೇಬಜಾರ್ ಪೊಲೀಸ್ ಠಾಣೆಯಲ್ಲಿ ಎಂಇಎಸ್ ವಿರುದ್ಧ ಸೋಮೋಟೋ ಕೇಸ್ ದಾಖಲು ಮಾಡಲಾಗಿದ್ದು,
ಹೆಡ್ ಕಾನ್ಸ್‌ಟೇಬಲ್ ಬಿ.ಎನ್. ನಾಕುಡೆಯಿಂದ ದೂರು ಪಡೆಯಲಾಗಿದೆ.
ರಾಯಲ್ ಬೆಳಗಾಂವಕರ ಎನ್ನುವ ಇನಸ್ಟಾಗ್ರಾಮ್ ಅಡ್ಮಿನಿಂದ ನಾಡವಿರೋಧಿ ಪೋಸ್ಟ್ ಮಾಡಲಾಗಿದೆ.
ಈ ಪೋಸ್ಟನಲ್ಲಿ ಕನ್ನಡಿಗರಿಗೆ, ಕರ್ನಾಟಕ ಸರ್ಕಾರ ಕ್ಕೆ ಬೆದರಿಕೆ ಹಾಕಲಾಗಿದೆ.ಜೂನ್ 27 ರ ಒಳಗಾಗಿ ಬೆಳಗಾವಿಯಲ್ಲಿ ಮರಾಠಿ ಬೋರ್ಡ್ ಹಾಕಬೇಕು,ಇಲ್ಲವೇ ಒಂದೇ ಒಂದು ಕನ್ನಡ ಬೋರ್ಡ್ ಇರಲು ಬಿಡಲ್ಲ,ಇದು ಮನವಿ ಅಲ್ಲ ಎಚ್ಚರಿಕೆ ಎಂದು ಪೋಸ್ಟ್ ಮಾಡಲಾಗಿತ್ತು.
ಬೆಳಗಾವಿಯಲ್ಲಿ ಭಾಷಾ ಸಾಮರಸ್ಯ ಕದಡುವ,ಕನ್ನಡ ಮರಾಠಿ ಭಾಷಿಕರಲ್ಲಿ ದ್ವೇಷ ಭಾವನೆ ಉಂಟು ಮಾಡುವ,ಸಮಾಜ ಶಾಂತಿ ಕದಡುವ ಕೆಲಸ ಮಾಡಲಾಗಿದೆ ಎಂದು ದೂರು ದಾಖಲಾಗಿದ್ದು.ರಾಯಲ್ ಬೆಳಗಾಂವಕರ ಇನಸ್ಟಾಗ್ರಾಮ್ ಅಕೌಂಟ್ ವಿರುದ್ಧ ಐಪಿಸಿ ಕಲಂ 120, 153,505(1)(B),505(2) ಅಡಿ ಕೇಸ್ ದಾಖಲು ಮಾಡಲಾಗಿದೆ.
ಇದು ಚುನಾವಣೆಯ ವರ್ಷವಾಗಿದ್ದು,ಎಲ್ಲ ಕ್ಷೇತ್ರಗಳಲ್ಲಿ ಅಧಿಕಾರ ಕಳೆದುಕೊಂಡು ಕಂಗಾಲ್ ಆಗಿರುವ ಎಂಇಎಸ್ ಬೆಳಗಾವಿಯಲ್ಲಿ ನಿರಂತರವಾಗಿ ಪುಂಡಾಟಿಕೆ ನಡೆಸುತ್ತಿದ್ದು ಬೆಳಗಾವಿ ಪೋಲೀಸರು ನಾಡದ್ರೋಹಿಗಳಿಗೆ ಲಗಾಮು ಹಾಕುತ್ತಿದ್ದಾರೆ.