ಬೆಳಗಾವಿ-ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ನಾಡದ್ರೋಹಿ ಎಂಇಎಸ್ ಬೆಳಗಾವಿಯಲ್ಲಿ ಹೊಸ ವರಸೆ ಆರಂಭಿಸಿದೆ.ಮನೆಯ ಅಂಗಳದಲ್ಲಿ ಏಕ್ ಮರಾಠಾ ಲಾಕ್ ಮರಾಠಾ ಎಂದು ರಂಗೋಲಿ ಹಾಕಿಸಿ ಮರಾಠಿ ಭಾಷಿಕರನ್ನು ಕೆರಳಿಸಿ ಎಂಇಎಸ್ ಸಂಘಟನೆಯನ್ನು ಬಲಿಷ್ಢಗೊಳಿಸಲು ಹೊಸ ಪ್ಲ್ಯಾನ್ ಮಾಡಿಕೊಂಡಿದ್ದು ಬೆಳಗಾವಿ ಗ್ರಾಮೀಣ ಕ್ಷೇತ್ರದ ದೇಸೂರು ಗ್ರಾಮದಲ್ಲಿ ಹತ್ತು ಹಲವು ಮನೆಗಳ ಎದುರು ಜೈ ಮಹಾರಾಷ್ಟ್ರ ಎಂದು ರಂಗೋಲಿಯಲ್ಲಿ ಬಿಡಿಸಿ ನಾಡದ್ರೋಹಿ ಕೆಲಸ ಮಾಡುತ್ತಿದೆ.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ತಮ್ಮ ಕ್ಷೇತ್ರದಲ್ಲಿ ಟಿಫೀನ್ ಭಾಕ್ಸ್ ,ಮೀಕ್ಸರ್ ಹಂಚಿಕೆ ಮಾಡುತ್ತಿದ್ದಾರೆ,ಬಿಜೆಪಿಯ ಟಿಕೆಟ್ ಆಕಾಂಕ್ಷಿಯೊಬ್ಬರು ಸೀರೆ ಮತ್ತು ಹಾಟ್ ಬಾಕ್ಸ್ ಹಂಚಿದ್ದಾರೆ.ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು ಫ್ರೀ ಗೀಫ್ಟ್ ಹಂಚಿಕೆ ಮಾಡುತ್ತಿರುವ ವಿಚಾರದಿಂದ ಎಂಇಎಸ್ ನಾಯಕರು ಸಂಪೂರ್ಣವಾಗಿ ಕಂಗಾಲ್ ಆಗಿದ್ದು ಮರಾಠಿ ಭಾಷೆಯ ಕರನ್ನು ಪ್ರಚೋದಿಸಲು ಎಂಇಎಸ್ ನಾಯಕರು ಮನೆ ಮುಂದೆ ನಾಡ್ರೋಹಿ ಸಂದೇಶ ಸಾರುವ ರಂಗೋಲಿ ಉತ್ಸವ ಮಾಡುತ್ತಿದ್ದಾರೆ.
ಮಾಜಿ ಶಾಸಕ ಸಂಜಯ ಪಾಟೀಲ ಅವರು ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸ್ಟೀಲ್ ತಾಟು,ಸ್ಟೀಲ್ ಗ್ಲಾಸು ಹಂಚಿಕೆ ಮಾಡಿದ್ದು ಬೆಳಗಾವಿ ಗ್ರಾಮೀಣದಲ್ಲಿ ಗೀಪ್ಟ್ ಪಾಲಿಟೀಕ್ಸ್ ನಡೆದಿದ್ದು ಇದರ ಜೊತೆಗೆ ಎಂಇಎಸ್ ಈ ಕ್ಷೇತ್ರದಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಲು ಹೊರಟಿದೆ.