ಖಾನಾಪೂರ ರಸ್ತೆಯಲ್ಲಿ ಕಿಡಗೇಡಿಗಳ ಕಿತಾಪತಿ..!

ಬೆಳಗಾವಿ-ಬೆಳಗಾವಿ ಖಾನಾಪೂರ ರಸ್ತೆಯ ಇಕ್ಕೆಲುಗಳಲ್ಲಿ ಲೋಕೋಪಯೋಗಿ ಇಲಾಕೆ ಹಲವಾರು ಫಲಕಗಳನ್ನು ಹಾಕಿದೆ ಈ ಫಲಕಗಳಲ್ಲಿ ಬೆಳಗಾವಿ ಎಂದು ನಮೂದಿಸಿದೆ ಆದರೆ ಬೆಳಗಾವಿ ಖಾನಾಪೂರ ನಡುವೆ ಇರುವ ಎಲ್ಲ ಫಲಕಗಳಲ್ಲಿ ಕೆಲವು ಕಿಡಗೇಡಿಗಳು ಬೆಳಗಾವಿಯ ಬದಲು ಬೆಳಗಾವ್ ಎಂದು ಬರೆಯುವ ಕಿತಾಪತಿ ಹಲವಾರು ದಿನಗಲಿಂದ ಮುಂದುವರೆದಿದೆ
ಬೆಳಗಾವಿ ನಗರದ ವ್ಯಾಪ್ತಿ ದಾಟಿದರೆ ಸಾಕು ಮಚ್ಚೆ ಗ್ರಾಮದ ನಂತರ ಬರುವ ಎಲ್ಲ ಫಲಕಗಳಿಗೆ ಬಣ್ಣ ಬಳಿದಿರುವ ನಾಡವಿರೋಧಿಗಳು ಬೆಳಗಾವ ಎಂದು ತಿರುಚಿದ್ದಾರೆ ಇಂಗ್ಲೀಷ್ ಭಾಷೆಯಲ್ಲಿರುವ ಫಲಕಗಳಲ್ಲಿ ಐ ಅಕ್ಷರವನ್ನು ಅಳುಕಿಸಿ ಬೆಳಗಾವ ಎಂದು ತಿರುಚಲಾಗಿದೆ
ಮಚ್ಚೆ ಗ್ರಾಮದಿಂದ ಹಿಡಿದು ದೇಸೂರ ಗ್ರಾಮದವರೆಗೆ ಇಂತಹ ಫಲಕಗಳು ನಮಗೆ ನೋಡಲು ಸಿಗುತ್ತವೆ ಸರ್ಕಾರ ಬೆಳಗಾಂವ ಹೆಸರನ್ನು ಬದಲಿಸಿ ಬೆಳಗಾವಿ ಎಂದು ನಾಮಕರಣ ಮಾಡಿರುವ ವಿಷಯ ಇನ್ನೂ ಕೆಲವು ಜನರಿಗೆ ಸಹಿಸಲಾಗುತ್ತಿಲ್ಲ ಅದಕ್ಕಾಗಿ ಅವರು ಗ್ರಾಮದ ಹೊರ ಪ್ರದೇಶಗಳಲ್ಲಿರುವ ಫಲಕಗಳು ತಿರುಚಿ ಅದರಲ್ಲಿಯೇ ತೃಪ್ತಿಪಡುತ್ತಿದ್ದಾರೆ
ಪೋಲಿಸರು ಬೆಳಗಾವಿ ಹೆಸರನ್ನು ತಿರುಚಿ ಕಿತಾಪತಿ ನಡೆಸಿರುವ ಕಿಡಗೇಡಿಗಳನ್ನು ಗುರುತಿಸಿ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕಾಗಿದೆ

Check Also

ಅನಾಹುತ ಮಳೆಗೆ ಗೋಡೆ ಕುಸಿದು ಮಹಿಳೆ ಸಾವು

ಗೋಕಾಕ: ಗೋಕಾಕದ ಸಂಗಮ ನಗರದ ಫರೀದಾ ಎಂಬ ಮಹಿಳೆ ಗೋಡೆ ಕುಸಿದ ಪರಿಣಾಮ ಮೃತಪಟ್ಟಿದ್ದಾರೆ. ಇವರು ತಮ್ಮ ಮಗ ರಿಯಾಜ್ …

Leave a Reply

Your email address will not be published. Required fields are marked *