ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ ಮೇಯರ್ ಹಾಗು ಉಪಮೇಯರ್ ಗೆ ಹೊಸ ಕಾರು ಕೊಡಿಸಬೇಕು ಎನ್ನುವ ವಿಷಯ ಪಾಲಕೆಯ ಸಾಮಾನ್ಯ ಸಭೆಯಲ್ಲಿ ಪ್ರತಿಧ್ವನಿಸಿತು
ಸಭೆ ಆರಂಭವಾಗುತ್ತಿದ್ದಂತೇಯೇ ಎಂ ಈ ಎಸ್ ನಗರ ಸೇವಕ ವಿನಾಯಕ ಗುಂಜಟಕರ ಮೇಯರ್ ಸರೀತಾ ಪಾಟೀಲರು ಬೆಳಗಾವಿಯ ಪ್ರಥಮ ಪ್ರಜೆ ಅವರು ಸ್ಕೂಟರ್ ಮೇಲೆ ಬರುತ್ತಿರುವದರಿಂ ಬೆಳಗಾವಿ ನಿವಾಸಿಗಳಿಗೆ ಅವಮಾನವಾಗಿದೆ ಈ ಬಗ್ಗೆ ಮೇಯರ್ ಸರಿತಾ ಪಾಟೀಲರು ಉತ್ತರ ಕೊಡಬೇಕು ಎಂದು ಒತ್ತಾಯಿಸಿದಾಗ ಇದಕ್ಕೆ ಮಾಜಿ ಮಹಾಪೌರ ಕಿರಣ ಸೈನಾಯಿಕ ಉತ್ತರ ನೀಡಲು ಮುಂದಾದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು
ಮೇಯರ್ ಕಾರಿನ ಬಗ್ಗೆ ಮೇಯರ್ ಚೇಂಬರದಲ್ಲಿ ಚರ್ಚಿಸಲಾಗಿದೆ ಈ ವಿಷಯವನ್ನಿ ಇಲ್ಲಿ ಚರ್ಚೆ ಮಾಡುವದು ಬೇಡ ಎಂದಾಗ ಅದಕ್ಕೆ ವಿನಾಯಕ ಗುಂಜಟಕರ ವಿರೋಧ ವ್ಯೆಕ್ತಪಡಿಸಿ ಮೇಯರ್ ಸರೀತಾ ಪಾಟೀಲ ಸ್ಕೂಟರ್ ಮೇಲೆ ಪಾಲಿಕೆಗೆ ಬರುವ ವಿಷಯ ಮಾದ್ಯಮಗಳಲ್ಲಿ ಪ್ರಕಟವಾಗಿದೆ ಅದಕ್ಕೆ ಉತ್ತರ ಕೊಡಲೇಬೇಕು ಗುಣಜಟಕರ ಪಟ್ಟು ಹಿಡಿದಾಗ ಕಿರಣ ಸೈನಾಯಿಕ ಗುಂಜಟಕರ ಅವರನ್ನು ತರಾಟರಗೆ ತೆಗೆದುಕೊಂಡು ನೀವು ಮೇಯರ್ ಚೇಂಬರಗೆ ಬರೋದಿಲ್ಲ ಈ ವಿಷಯ ಮಾತನಾಡುವ ನೈತಿಕತೆ ನಿಮಗಿಲ್ಲ ಎಂದರು
ಒಟ್ಟಾರೆ ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ನಾಡವಿರೋಧಿ ಎಂಈಎಸ್ ಗುಂಪಿನಲ್ಲಿ ಎರಡು ಗುಂಪುಗಳಾಗಿ ಪರಸ್ಪರ ಗುದ್ದಾಟ ನಡೆಸಿರುವದರಿಂದ ವಿರೋಧಿ ಗುಂಪು ಸದ್ಯಕ್ಕೆ ರಿಲ್ಯಾಕ್ಸ ಆಗಿದೆ
Check Also
ಕರ್ನಾಟಕ ರಾಜ್ಯೋತ್ಸವ: ನಾಳೆ ಮಂಗಳವಾರ ಪೂರ್ವಭಾವಿ ಸಭೆ
ಬೆಳಗಾವಿ, -ಕರ್ನಾಟಕ ರಾಜ್ಯೋತ್ಸವ ದಿನಾಚರಣೆಯನ್ನು ನವಂಬರ್ 1, 2024 ರಂದು ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ (ಅಕ್ಟೋಬರ್ 8) ಜಿಲ್ಲಾ ಪಂಚಾಯತ …