Breaking News
Home / Breaking News / ಜಿಂಕೆ ಕೊಂಬು ಪ್ರಕರಣ ಮೂವರ ಬಂಧನ ಸ್ಯಾಂಪಲ್ ಡೆಹರಾಡೂನ ಗೆ

ಜಿಂಕೆ ಕೊಂಬು ಪ್ರಕರಣ ಮೂವರ ಬಂಧನ ಸ್ಯಾಂಪಲ್ ಡೆಹರಾಡೂನ ಗೆ

ಬೆಳಗಾವಿ
ನಗರದ ಶೆಟ್ಟಿಗಲ್ಲಿಯ ಮನೆಯೊಂದರಲ್ಲಿ ಅಕ್ರಮವಾಗಿ ಪ್ರಾಣಿಗಳ ಅಂಗಾಂಗಗಳನ್ನು ಸಂಗ್ರಹಿಸಿಡಲಾಗಿದ್ದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಜೊತೆ ಮತ್ತೆ ಇಬ್ಬರನ್ನು ಬಂಧಿಸಲಾಗಿದೆ.

ಬೆಳಗಾವಿಯಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪೋಲೀಸ್ ಆಯುಕ್ತ ಟಿ ಜಿ ಕೃಷ್ಣಭಟ್ ಅವರು ಪ್ರಮುಖ ಆರೋಪಿ ಸಲೀಮಖಾನ್ ಶೇರಖಾನ್ ಜೊತೆ ಮಝರಖಾನ ಸೌದಾಗರ ಹಾಗೂ ಅಮ್ಜದಖಾನ್ ಸೌದಾಗರ ಅವರನ್ನು ಬಂಧಿಸಲಾಗಿದೆ ಎಂದರು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕೋಟ್ಯಾಂತರ ರೂ ಬೆಲೆಬಾಳುವ ಒಂದು ಟನ್‍ದಷ್ಟು ಜಿಂಕೆ ಕೊಂಬು ಮತ್ತು ಪಂಗೋಲಿನ್ ಚಿಪ್ಪುಗಳನ್ನು ವಶಪಡಿಸಿಕೊಳ್ಳಲಾಗಿದೆ. ಅರಣ್ಯ ಕಾಯ್ದೆಯ ಪ್ರಕಾರ ಆರೋಪಿಗಳ ಮೇಲೆ ನೇರವಾಗಿ ಕ್ರಮಕೈಗೊಳ್ಳಲು ನಮಗೆ ಬರುವದಿಲ್ಲ. ಈ ಹಿನ್ನಲೆಯಲ್ಲಿ ಮೂವರನ್ನೂ ಮುಂದಿನ ಕ್ರಮಕ್ಕಾಗಿ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.

ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿ ಸಿ ಪಿ ರಾ„ಕಾ ಮಾತನಾಡಿ ಮಂಗಳವಾರ ಶೆಟ್ಟಿಗಲ್ಲಿಯ ಮನೆಯೊಂದರ ಮೇಲೆ ದಾಳಿ ಮಾಡಿದ ಪೆÇಲೀಸರು ಆಕ್ರಮವಾಗಿ ಸಂಗ್ರಹಿಸಿ ಇಡಲಾಗಿದ್ದ 960 ಕೆ ಜಿ ಕಡುವೆಗಳ ಕೊಂಬು, ಸುಮಾರು ಎರಡು ಕೆ ಜಿ ಯಷ್ಟು ಪಂಗೋಲಿಯನ್ ಚಿಪ್ಪು ವಶಪಡಿಸಿಕೊಳ್ಳಲಾಗಿದೆ. ಈ ಪ್ರಾಣಿಗಳ ಅಂಗಾಂಗಗಳನ್ನು ಎಲ್ಲಿಂದ ತರಲಾಗುತ್ತಿತ್ತು ಹಾಗೂ ಎಲ್ಲಿಗೆ ಕಳಿಸಲಾಗುತ್ತಿತ್ತು ಎಂಬುದರ ಬಗ್ಗೆ ತನಿಖೆ ನಡೆದಿದೆ ಎಂದು ಹೇಳಿದರು.

ವಶಪಡಿಸಿಕೊಂಡ ಪ್ರಾಣಿಗಳ ಅಂಗಾಂಗಳ ಮೇಲೆ ಈಗಾಗಲೇ ಸಂಖ್ಯೆಗಳನ್ನು ಹಾಕಲಾಗಿದೆ. 1998 ರಲ್ಲಿ ಇವುಗಳನ್ನು ಸಂಗ್ರಹ ಮಾಡಲು ಅನುಮತಿ ಪತ್ರ ಪಡೆಯಲಾಗಿದೆ. ಆದರೆ ಈ ಅನುಮತಿ 2004 ರವರೆಗೆ ಮಾತ್ರ ಇದ್ದು ನಂತರವೂ ಅವುಗಳನ್ನು ಸಂಗ್ರಹ ಮಾಡಿಟ್ಟುಕೊಂಡಿರುವದು ಅನುಮಾನಕ್ಕೆ ಎಡೆಮಾಡಿಕೊಟ್ಟಿದ್ದು ಇದರ ಬಗ್ಗೆ ಆರಣ್ಯ ಇಲಾಖೆಯಿಂದ ವಿವರಣೆ ಕೇಳಲಾಗಿದೆ. ಪ್ರಕರಣದ ಸಮಗ್ರ ತನಿಖೆಯಾದ ನಂತರ ಎಲ್ಲವೂ ಹೊರಬರಲಿದೆ ಎಂದರು.

ಈ ಮದ್ಯೆ ಸುದ್ದಿಗಾರರ ಜೊತೆ ಮಾತನಾಡಿದ ಎ ಸಿ ಎಫ್ ಓ ಶಿವಾನಂದ ನಾಯಕವಾಡಿ 1998 ರಲ್ಲಿ ವಲು ಅರಣ್ಯ ಅಧಿಕಾರಿಗಳು ಪ್ರಾಣಿಗಳ ಅಂಗಾಂಗ ಸಂಗ್ರಹಕ್ಕೆ ಅನುಮತಿ ನೀಡಿದ್ದರು. ಅನುಮತಿ ನೀಡುವಾಗ 2004 ರಲ್ಲಿ ಈ ಎಲ್ಲ ಅಂಗಾಗಳನ್ನು ಸುಟ್ಟುಹಾಕಬೇಕು ಎಂದು ಸಹ ತಿಳಿಸಲಾಗಿತ್ತು; ಆದರೆ ಇವುಗಳನ್ನು ಹಾಗೆ ಇಡಲಾಗಿದ್ದರಿಂದ ಇದು ಅಕ್ರಮ ಸಂಗ್ರಹ ಎಂದು ಪರಿಗಣಿಸಲಾಗಿದೆ ಎಂದು ಹೇಳಿದರು.

2004 ರಲ್ಲಿ ಇವುಗಳನ್ನು ಸುಟ್ಟುಹಾಕದೆ ಹಾಗೆ ಇಟ್ಟಿರುವದನ್ನು ನೋಡಿದರೆ ಅಕ್ರಮ ವ್ಯವಹಾರ ಮಾಡುವ ಉದ್ದೇಶದಿಂದಲೇ ಇವುಗಳನ್ನು ಸಂಗ್ರಹಿಸಿಡಲಾಗಿದೆ ಎಂಬುದು ಗೊತ್ತಾಗುತ್ತದೆ. ಮೇಲಾಗಿ ನಾವು ಕಡುವೆ ಕೊಂಬುಗಳ ಸಂಗ್ರಹಕ್ಕೆ ಮಾತ್ರ ಅನುಮತಿ ನೀಡಿದ್ದೆವು. ಆದರೆ ಇದರಲ್ಲಿ ಜಿಂಕೆಗಳ ಕೊಂಬು, ಪಂಗೋಲಿಯನ್ ಚಿಪ್ಪು ಹಾಗೂ ಅನೆಗಳ ದಂತ ಹೋಲುವ ಅಂಗಾಗಳಿವೆ. ಇದು ಅರಣ್ಯ ಇಲಾಖೆ ಕಾಯ್ದೆ ಪ್ರಕಾರ ನಿಷಿದ್ಧ ಹಾಗೂ ಅಕ್ರಮ. ಈ ಹಿನ್ನಲೆಯಲ್ಲಿ ಬಂ„ತ ಮೂವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ ಎಂದರು.

1998 ರಲ್ಲಿ ವಲಯ ಅರಣ್ಯ ಅ„ಕಾರಿಗಳು ಅನುಮತಿ ನೀಡಿದ್ದರು. ಈ ರೀತಿ ಅನುಮತಿ ನೀಡುವ ಅ„ಕಾರ ಮುಖ್ಯ ವನ್ಯಜೀವಿ ಸಂರಕ್ಷಣಾ„ಕಾರಿಗಳಿಗೆ ಮಾತ್ರ ಇದೆ. ಹೀಗಾಗಿ ಅನುಮತಿ ಪತ್ರದ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ. ಇದಲ್ಲದೆ ವಶಪಡಿಸಿಕೊಂಡಿರುವ ಅಂಗಾಂಗಗಳಲ್ಲಿ ಆನೆ ದಂತ ಹೋಲುವ ಎರಡು ದಂತಗಳನ್ನು ಪರೀಕ್ಷೆಗಾಗಿ ಹೈದ್ರಾಬಾದ್‍ನಲ್ಲರುವ ಸಿ ಸಿ ಎಂ ಬಿ ಪ್ರಯೋಗಾಲಯಕ್ಕೆ ಹಾಗೂ ವಶಪಡಿಸಿಕೊಂಡಿರುವ ಅಂಗಾಂಗಳು ಎಷ್ಟು ವರ್ಷದ್ದು ಎಂಬುದನ್ನು ತಿಳಿಯಲು ಡೆಹರಾಡೂನ್‍ದಲ್ಲಿರುವ ವನ್ಯಜೀವಿ ಸಂಸ್ಥೆಗೆ ಕಳಿಸಲಾಗುವದು ಎಂದು ಶಿವಾನಂದ ನಾಯಕವಾಡಿ ಹೇಳಿದರು.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *