ಬೆಳಗಾವಿಯ ಎಂಈಎಸ್ ನಾಯಕರ ಜೊತೆ ಪೋಲೀಸರ ಮೀಟಿಂಗ್…
ಬೆಳಗಾವಿ- ನಿನ್ನೆ ಸೋಮವಾರ ಕನ್ನಡ ಸಂಘಟನೆಗಳ ನಾಯಕರು ಮತ್ತು ರೈತ ಸಂಘಟನೆಗಳ ನಾಯಕರ ಜೊತೆ ಸಭೆ ನಡೆಸಿ ಗಡಿಯಲ್ಲಿ ಶಾಂತಿ ಕಾಪಾಡುವಂತೆ ಮನವಿ ಮಾಡಿಕೊಂಡಿದ್ದು ಇಂದು ಪೋಲೀಸ್ ಆಯುಕ್ತರು ಎಂಈಎಸ್ ನಾಯಕರ ಸಭೆ ಕರೆದು ಗಡಿಯಲ್ಲಿ ಪುಂಡಾಟಿಕೆ ನಡೆಸದಂತೆ ಖಡಕ್ ವಾರ್ನಿಂಗ್ ಮಾಡಿದ್ದಾರೆ
ಗಡಿ ವಿವಾದದ ಕುರಿತು ಯಾವುದೇ ಭಾಷಿಕರ ಭಾವನೆಗೆ ಧಕ್ಕೆಯಾಗದಂತೆ ನಡೆದುಕೊಳ್ಳಬೇಕು ಶಾಂತಿ ಕದಡುವ ಪ್ರಯತ್ನ ಮಾಡಿದರೆ ಶಿಸ್ತಿನ ಕ್ರಮ ಜರುಗಿಸಬೇಕಾಗುತ್ತದೆ ಎಂದು ಪೋಲೀಸ್ ಅಧಿಕಾರಿಗಳು ಎಂಈಎಸ್ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಸಭೆಯಲ್ಲಿ ಎಂ ಈಎಸ್ ಮಾಜಿ ಶಾಸಕ ಮನೋಹರ ಕಿಣೇಕರ ಸೇರಿದಂತೆ ಹಲವಾರು ಜನ ಎಂಈಎಸ್ ನಾಯಕರು ಸಭೆಯಲ್ಲಿ ಭಾಗಬಹಿಸಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ