ಮಹಾರಾಷ್ಟ್ರದ ಬಜೆಟ್ ನಲ್ಲಿ ಕರ್ನಾಟಕದ ಮರಾಠಿ ಸಂಘ ಸಂಸ್ಥೆಗಳಿಗೆ 10 ಕೋಟಿ ಅನುದಾನ
ಬೆಳಗಾವಿ- ಮಹಾರಾಷ್ಟ್ರದಲ್ಲಿರುವ ಶಿವಸೇನೆ- ಎನ್ ಸಿ ಪಿ- ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಇಂದು ಚೊಚ್ಚಲ ಬಜೆಟ್ ಮಂಡಿಸಿದ್ದು ಬಜೆಟ್ ನಲ್ಲಿ ಕರ್ನಾಟಕದ ಗಡಿಭಾಗದ ,ಸಂಘ ಸಂಸ್ಥೆಗಳಿಗೆ,ಶಿಕ್ಷಣ ಸಂಸ್ಥೆಗಳಿಗೆ,ಮರಾಠಿ ದಿನಪತ್ರಿಕೆಗಳಿಗೆ ಹತ್ತು ಕೋಟಿ ರೂ ಅನುದಾನ ಸಹಾಯ ಮಾಡುವ ಘೋಷಣೆ ಮಾಡಿದೆ
ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಸಂಘ ಸಂಸ್ಥೆಗಳಿಗೆ ಈ ವರ್ಷ ಹತ್ತು ಕೋಟಿ ರೂ ಅನುದಾನ ನೀಡುವದಾಗಿ ಹಣಕಾಸು ಸಚಿವ ಅಜೀತ ಪವಾರ ಬಜೆಟ್ ನಲ್ಲಿ ಘೋಷಣೆ ಮಾಡಿದ್ದಾರೆ.
ಕರ್ನಾಟಕದ ಗಡಿ ಭಾಗದಲ್ಲಿರುವ ಮರಾಠಿ ಸಂಘ,ಸಂಸ್ಥೆಗಳಿಗೆ ಹತ್ತು ಕೋಟಿ ರೂ ಅನುದಾನ ನೀಡುವ ಮೂಲಕ ಮಹಾರಾಷ್ಟ್ರ ಸರ್ಕಾರ ಮರಾಠಿ ಭಾಷಿಕ ನಾಯಕರನ್ನು ಕರ್ನಾಟಕ ಸರ್ಕಾರದ ವಿರುದ್ಧ,ಕನ್ನಡಿಗರ ವಿರುದ್ಧ ಎತ್ತಿ ಕಟ್ಟುವ ಷಡ್ಯಂತ್ರ ರೂಪಿಸಿದೆ.
ಕರ್ನಾಟಕದಲ್ಲಿರುವ ಮರಾಠಿ ಶಿಕ್ಷಣ ಸಂಸ್ಥೆಗಳಿಗೆ ಕರ್ನಾಟಕ ಸರ್ಕಾರ ಎಲ್ಲ ರೀತಿಯ ಸವಲತ್ತುಗಳನ್ನು ನೀಡುತ್ತಿದೆ ಆದ್ರೆ ಮಹಾರಾಷ್ಟ್ರ ಸರ್ಕಾರ ಕರ್ನಾಟಕದ ಮರಾಠಿ ಸಂಸ್ಥೆಗಳಿಗೆ ಹತ್ತು ಕೋಟಿ ರೂ ಅನುದಾನ ನೀಡುವ ಮೂಲಕ ಕರ್ನಾಟಕ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಪ್ರಯತ್ನ ಮಾಡುತ್ತಿದೆ.