Breaking News

ಬೆಳಗಾವಿಯ ಜೈನ್ ಹೆರಿಟೇಜ್ ಶಾಲೆಗೆ ಕೆಂಬ್ರಿಡ್ಜ್ ವಿವಿಯಿಂದ ಅನುಮೋದನೆ

ಬೆಳಗಾವಿ-

ನಗರದ ಜೈನ್ ಹೆರಿಟೇಜ್ ಶಾಲೆಗೆ ಯುಕೆನ ಕೆಂಬ್ರಿಡ್ಜ್ ವಿಶ್ವವಿದ್ಯಾಲಯ ಅನುಮೋದನೆ ನೀಡಿದೆ

2021-22ರಲ್ಲಿ 1ರಿಂದ 8ನೇ ತರಗತಿಗಳನ್ನು ಪ್ರಾರಂಭಿಸಲು ಅನುಮತಿ ಪಡೆದ ನಗರದ ಪ್ರಥಮ ಶಾಲೆ ಇದಾಗಿದೆ. ಕೆಂಬ್ರಿಡ್ಜ್ ಅಂತಾರಾಷ್ಟ್ರೀಯ ಶಿಕ್ಷಣ ಮೌಲ್ಯಮಾಪನದ ಮಾರ್ಗಸೂಚಿಗಳ ಪ್ರಕಾರ
ನಡೆಯಲಿದೆ. ಚೆಕ್ ಪಾಯಿಂಟ್ ಪರೀಕೆಗಳಿಗೆ ವಿದ್ಯಾರ್ಥಿಗಳು ಬೇರೆ ನಗರಕ್ಕೆ
ಹೋಗಬೇಕಾಗಿಲ್ಲ ಎಂದು ಧಾರವಾಡಕರ ಹೇಳಿದರು.

ಈ ಶಾಲೆಯಲ್ಲಿ ಮೊದಲಿನಂತೆ ಸಿಬಿಎಸ್‌ಇ ವಿಭಾಗಗಳು ಮುಂದುವರೆಯಲಿವೆ. ಜತೆಗೆ ಕೆಂಬ್ರಿಡ್ ತರಗತಿಗಳು ಹೊಸ ಕ್ಯಾಂಪಸ್ ನಲ್ಲಿ ಪ್ರಾರಂಭವಾಗುವವು. ಕೆಂಬ್ರಿಡ್ಜ್ ವಿಭಾಗವು ಜಾಗತಿಕ ಮತ್ತು ಡಿಜಿಟಲ್ ಶಿಕ್ಷಣಕ್ಕೆ ಹೆಚ್ಚ ಮಹತ್ವ ನೀಡಲಿದೆ. ತರಗತಿ ನಡೆಸಲು ಐಜಿಸಿಎಸ್ಇ ಮತ್ತು ಕೆಂಬ್ರಿಡ್ಜ್ ಶಿಕ್ಷಕರನ್ನು ಹೊಸದಾಗಿ ನೇಮಿಸಲಾಗುವುದು ಎಂದರು.

ಕೆಂಬ್ರಿಡ್ಜ್ ಶಾಲೆ ಪ್ರಯೋಜನಗಳು ಎಂಐಟಿ, ಆಕ್ಸ್‌ಫರ್ಡ್, ಹಾರ್ವಡ್್ರ ಮತ್ತು ಕೆಂಬ್ರಿಡ್ ಸೇರಿದಂತೆ ವಿಶ್ವದ ಪ್ರಸಿದ್ದ ವಿಶ್ವವಿದ್ಯಾಲಯಗಳು ಇಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಮಾನ್ಯತೆ ನೀಡಲಿವೆ. ಇಲ್ಲಿ ಕಲಿತ
ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಾನ್ಯತೆ ದೊರೆಯಲಿದೆ. ವಿಶ್ವದ 166 ದೇಶಗಳಲ್ಲಿ ಸುಮಾರು 10 ಸಾವಿರ ಕೆಂಬ್ರಿಡ್ಜ್ ಶಾಲೆಗಳಿವೆ. ಭಾರತದಲ್ಲಿ
ಅವುಗಳ ಸಂಖ್ಯೆ 503 ಆಗಿದೆ. ವಿದ್ಯಾರ್ಥಿಗಳು ತಮಗಿಷ್ಟವಾದ ವಿಷಯಗಳನ್ನು ಆಯ್ಕೆ
ಮಾಡಿಕೊಳ್ಳಬಹುದು ಎಂದರು.

ಉನ್ನತ ಸಾಧನೆ ತೋರುವ ವಿದ್ಯಾರ್ಥಿಗಳಿಗೆ ವಿದೇಶಿ
ವಿಶ್ವವಿದ್ಯಾಲಯಗಳಲ್ಲಿ ನೇರ ಪ್ರವೇಶ ದೊರೆಯಲಿದೆ. ಅಂತಾರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕಾರ್ಯಕ್ರಮದ ಸೌಲಭ್ಯ ದೊರೆಯಲಿದೆ ಎಂದು ಹೇಳಿದರು.

ಭಾರತದಲ್ಲಿ ಕೆಂಬ್ರಿಡ್ಜ್ ಮತ್ತು ಐಜಿಸಿಇ ಗುರುತಿಸುವಿಕೆ,
ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ, ಭಾರತೀಯ ವಿಶ್ವವಿದ್ಯಾಲಯಗಳ ಸಂಘ
(ಎಐಯು) ಸಿಬಿಎಸ್‌, ಐಸಿಎಸ್‌ಇ ಮೊದಲಾದವುಗಳಿಗೆ ಸಮಾನವಾಗಿ ಇದನ್ನು ಗುರುತಿಸಿದೆ.ಎಸ್‌ಎಸ್ಸಿ, ಐಸಿಎಸ್‌ಇ, ಸಿಬಿಎಸ್‌ಇ 10ನೇ ತರಗತಿ ಪರೀಕ್ಷೆಗಳಂತೆಯೇ ಜಾಗತಿಕವಾಗಿ
ಅರ್ಹತೆಯಾಗಿದೆ ಎಂದರು.

ಡಾ.ಮನಜೀತ ಜೈನ್, ಶೃದ್ದಾ ಕಾಟವಾಡೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Check Also

ಬೆಳಗಾವಿಯ ಮಾಸ್ಟರ್ ಮೈಂಡ್..ಲಕ್ಕೀ ಸಿಎಂ…ಆಗಬಹುದಾ…??

ಬೆಳಗಾವಿ-ಬೆಳಗಾವಿ ಜಿಲ್ಲೆಯ ರಾಜಕೀಯ ವಲಯದಲ್ಲಿ ಕೇವಲ ಒಂದೇ ಚರ್ಚೆ ನಡೆಯುತ್ತಿದೆ ಅದೇನಂದ್ರೆ ಸಿದ್ರಾಮಯ್ಯ ಬದಲಾದ್ರೆ ಸತೀಶ್ ಸಾಹುಕಾರ್ ಸಿಎಂ ಆಗ್ತಾರೆ …

Leave a Reply

Your email address will not be published. Required fields are marked *

Sahifa Theme License is not validated, Go to the theme options page to validate the license, You need a single license for each domain name.