ಬೆಳಗಾವಿ-ಶರದ್ ಪವಾರ ಅವರ ಸಹೋದರನ ಪುತ್ರ ಎನ್ಸಿಪಿ ಶಾಸಕ ಇಂದು ಗಪ್ ಚುಪ್ ಬೆಳಗಾವಿಗೆ ಭೇಟಿ ನೀಡಿ ಬೆಳಗಾವಿಯ ಎಂಇಎಸ್ ನಾಯಕ ದೀಪಕ ದಳವಿಗೆ ಭೇಟಿ ಮಾಡಿರುವ ವಿಚಾರ ಈಗ ಚರ್ಚೆಗೆ ಗ್ರಾಸವಾಗಿದೆ.
ಗಡಿವಿವಾದ ಬಗ್ಗೆ ಮಹಾರಾಷ್ಟ್ರ ನಾಯಕರು ಹುಲಿಯಂತೆ ಮಾತನಾಡಿ, ನರಿಯಂತೆ ವರ್ತನೆ ಮಾಡುತ್ತಿದ್ದಾರೆಎನ್‌ಸಿಪಿ ಶಾಸಕ ರೋಹಿತ್ ಪವಾರ್ ಬೆಳಗಾವಿ ಗಪ್‌ಚುಪ್ ಭೇಟಿಗೆ ಅಶೋಕ ಚಂದರಗಿ ಕಿಡಿಕಾರಿದ್ದಾರೆ.ಬೆಳಗಾವಿಯಲ್ಲಿ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿ ಅಧ್ಯಕ್ಷ ಅಶೋಕ ಚಂದರಗಿ ಈ ಕುರಿತು ಹೇಳಿಕೆ ನೀಡಿದ್ದು,ಶರದ್ ಪವಾರ ಸಹೋದರನ ಪುತ್ರ, ಶಾಸಕ ರೋಹಿತ್ ಪವಾರ್ ನಿನ್ನೆ ರಾತ್ರಿ ಕಳ್ಳರಂತೆ ಬೆಳಗಾವಿಗೆ ಬಂದು ಹೋಗಿದ್ದಾರೆ,ಶಾಸಕ ಪವಾರ್ ಕಳ್ಳರಂತೆ ಬೆಳಗಾವಿಗೆ ಭೇಟಿ ನೀಡಿರುವುದು ಸೌಜನ್ಯ ಸಭ್ಯತೆ ಮೀರಿದ ವರ್ತನೆಯಾಗಿದೆ.ರಾಜಕಾರಣದಲ್ಲಿ ಯಾವಾಗಲೂ ನೇರಾ ನೇರ ಇರಬೇಕು.ಮಹಾರಾಷ್ಟ್ರದಿಂದ ಬೆಳಗಾವಿ ಪ್ರವೇಶಕ್ಕೆ 21 ಚೆಕ್ ಪಾಯಿಂಟ್‌ಗಳಿವೆ,ಆದರೆ ಬೆಳಗಾವಿಗೆ ಕಳ್ಳರಂತೆ ಬಂದು ಹೋಗಿದ್ದು ರೋಹಿತ್ ಪವಾರ್ ಮರ್ಯಾದೆ ಹೋಗಿದೆ,ಗಡಿವಿವಾದ ಸಂಬಂಧ ಹುಲಿಗಂತೆ ಮಾತನಾಡಿ, ನರಿಯಂತೆ ವರ್ತಿಸುವುದು ಸರಿಯಲ್ಲ ಎಂದು ಅಶೋಕ ಚಂದರಗಿ ಆರೋಪಿಸಿದ್ದಾರೆ.
ಬೆಳಗಾವಿಗೆ ಬರುವುದಾದ್ರೆ ಹೇಳಿ ಬರಲಿ, ಚೆನ್ನಮ್ಮ ವೃತ್ತದಲ್ಲಿ ನಿಂತು ಮಾತಾಡಲಿ,ಗಡಿವಿವಾದ ಬಗ್ಗೆ ತಮ್ಮ ನಿಲುವು ವ್ಯಕ್ತಪಡಿಸಲಿ, ನಮ್ಮ ನಿಲುವನ್ನೂ ನಾವು ಹೇಳುತ್ತೇವೆ.ಆದರೆ ಕಳ್ಳರ ರೀತಿ ಬೆಳಗಾವಿಗೆ ಬರುವುದು ತಪ್ಪು,ಗಡಿವಿವಾದ ಸಂಬಂಧ ಮಹಾರಾಷ್ಟ್ರ ನಾಯಕರು ವೀರಾವೇಶದ ಹೇಳಿಕೆ ನೀಡುತ್ತಾರೆ.ಆದರೆ ಎನ್‌ಸಿಪಿ ಶಾಸಕ ಕಳ್ಳರಂತೆ ವರ್ತನೆ ತೋರಿರುವುದು ಹಾಸ್ಯಾಸ್ಪದ, ವ್ಯಂಗ್ಯವಾಗಿದೆ ಎಂದು ಚಂದರಗಿ ಕಿಡಿಕಾರಿದ್ದಾರೆ.