Breaking News
Home / Breaking News / ಇಂದು ಸಂಜೆ ದೆಹಲಿಯಲ್ಲಿ ಬೆಳಗಾವಿ ಗಡಿವಿವಾದ…!!

ಇಂದು ಸಂಜೆ ದೆಹಲಿಯಲ್ಲಿ ಬೆಳಗಾವಿ ಗಡಿವಿವಾದ…!!

ಬೆಳಗಾವಿ- ಹಲವಾರು ದಶಕಗಳ ನಂತರ ಬೆಳಗಾವಿ ಗಡಿವಿವಾದ ದೇಶದ ರಾಜಧಾನಿಗೆ ತಲುಪಿದ್ದು, ಕೇಂದ್ರ ಗೃಹ ಸಚಿವರ ಸಮ್ಮುಖದಲ್ಲಿ ಇಂದು ಸಂಜೆ ವಿವಾದ ಚರ್ಚೆಗೆ ಬರಲಿದೆ.

ಕೇಂದ್ರ ಗೃಹ ಸಚಿವರಾದ ಅಮೀತ ಶಾ ಅವರು ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಏಕನಾಥ ಶಿಂಧೆ ಅವರನ್ನು ಬೆಳಗಾವಿ ಗಡಿವಿವಾದದ ಕುರಿತು ಚರ್ಚೆ ಮಾಡಲು ದೆಹಲಿಗೆ ಅಹ್ವಾನಿಸಿದ್ದು ಇಂದು ಸಂಜೆ ದೇಶದ ರಾಜಧಾನಿ ದೆಹಲಿಯಲ್ಲಿ ತ್ರೀಮೂರ್ತಿಗಳ ಮತ್ವದ ಸಭೆ ನಡೆಯಲಿದೆ.

ಬೆಳಗಾವಿ ಗಡಿ ಹೋರಾಟದ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಈ ವಿವಾದ ಈಗ ಗೃಹಸಚಿವರ ಅಂಗಳದಲ್ಲಿ ಚರ್ಚೆಯಾಗಲಿದ್ದು ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಮುಖ್ಯಮಂತ್ರಿಗಳು ಮುಖಾಮುಖಿಯಾಗಿ ಮಾತನಾಡಲಿದ್ದಾರೆ.ಈ ವಿಚಾರದಲ್ಲಿ ಕೇಂದ್ರ ಸಚಿವರ ನಿಲುವು ಏನಾಗಿರುತ್ತದೆ. ಬೆಳಗಾವಿ ಗಡಿವಿವಾದ ಇತ್ಯರ್ಥ ಗೊಳಿಸಲು ಅಮೀತ ಶಾ ಅವರು ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎನ್ನುವ ವಿಚಾರ ತೀವ್ರ ಕುತೂಹಲ ಕೆರಳಿಸಿದೆ.

ಬೆಳಗಾವಿ ಗಡಿವಿವಾದ ಇತ್ತೀಚಿಗೆ ರಾಷ್ಟ್ರದ ಗಮನ ಸೆಳೆದಿದೆ. ಈ ವಿವಾದದ ಕುರಿತು ನ್ಯಾಶನಲ್ ಮಿಡಿಯಾ ಸದ್ದು ಮಾಡಿದ ಹಿನ್ನಲೆಯಲ್ಲಿ ಕೇಂದ್ರ ಗೃಹಸಚಿವರು ಈ ವಿಚಾರದಲ್ಲಿ ಮದ್ಯಸ್ಥಿಕೆ ವಹಿಸಿದ್ದು‌ ಕೆಲವೇ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ.ಹೀಗಾಗಿ ಇಂದು ದೆಹಲಿಯಲ್ಲಿ ಆಗುವ ತೀರ್ಮಾನಗಳು, ಆದೇಶಗಳು,ಸೂಚನೆಗಳು ಕರ್ನಾಟಕ ಮತ್ತು ಮಹಾರಾಷ್ಟ್ರ ಎರಡೂ ರಾಜ್ಯಗಳ ರಾಜಕೀಯ ದಿಕ್ಸೂಚಿ ಬದಲಿಸಲಿದೆ.

ಬೆಳಗಾವಿ ಗಡಿವಿವಾದದ ಕುರಿತು ಮಹಾಜನ ವರದಿ ಕೇಂದ್ರದಲ್ಲಿದ್ದು ಕರ್ನಾಟಕದ ಪಾಲಿಗೆ ಮಹಾಜನ್ ವರದಿಯೇ ಅಂತಿಮವಾಗಿದೆ.

Check Also

ಧಾರವಾಡ ಕಾಂಗ್ರೆಸ್ ಅಭ್ಯರ್ಥಿ ಬದಲಾದ್ರೆ ಬೆಳಗಾವಿಗೂ ಎಫೆಕ್ಟ್…?

ಬೆಳಗಾವಿ -ಧಾರವಾಡ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಬದಲಾವಣೆ ಆಗಬೇಕು ಎನ್ನುವ ಬೇಡಿಕೆ ಕಾಂಗ್ರೆಸ್ ನಲ್ಲಿಯೇ ಹೆಚ್ಚಾಗಿದೆ.ಜೊತೆಗೆ ಅಭ್ಯರ್ಥಿ ಬದಲಿಸಿ …

Leave a Reply

Your email address will not be published. Required fields are marked *