ಬೆಳಗಾವಿ- ಬೆಳಗಾವಿ ನಗರದಲ್ಲಿ ಹತ್ತು ಹಲವು ಅಭಿವೃದ್ಧಿ ಕಾಮಗಾರಿಗಳು ನಡೆದು ಬೆಳಗಾವಿ ಸುಂದರಿ ನಗರಿಯಾಗಿ ಬೆಳೆಯುತ್ತಿರುವದನ್ನು ನೋಡಿ ಸಹಿಸಲಾಗದ ನಾಡ ವಿರೋಧಿ ಎಂಈಎಸ್ ಮತ್ತೆ ಕಾಲು ಕೆದರಿ ಜಗಳ ತೆಗೆಯಲು ಹೊಂಚು ಹಾಕಿದ್ದಾರೆ
ಮರಾಠಿ ಭಾಷೆಯಲ್ಲಿ ಸರ್ಕಾರಿ ಕಾಗದಪತ್ರಗಳನ್ನು ಕೊಡಬೇಕೆನ್ನುವ ಹಳೆಯ ತಗಾದೆಗೆ ಹೊಸ ಮಸಾಲೆ ಸೇರಿಸಿರುವ ಝಾಪಾಗಳು ಹಳೆಯ ಕ್ಯಾತೆಯನ್ನು ಮುಂದಿಟ್ಟುಕೊಂಡು ಹೊಸ ಬೊಗಳೆ ಶುರು ಮಾಡಿಕೊಂಡಿದ್ದಾರೆ
ಗಡಿನಾಡ ಬೆಳಗಾವಿಯ ಬೆಳವಣಿಗೆ ಮತ್ತು ಕನ್ನಡಮಯ ವಾತಾವರಣವನ್ನು ನೋಡಲಿಕ್ಕಾಗದ ಇವರು ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಬೀದಿಗಿಳಿದಿದ್ದಾರೆ ಮಾಜಿ ಶಾಸಕ ಮನೋಹರ ಕಿಣೇಕರ ಅವರು ಅಧಿಕಾರ ಇಲ್ಲದೇ ಕಂಗಾಲಾಗಿದ್ದು ಅಧಿಕಾರ ಪಡೆಯಲು ಗಡಿನಾಡ ಬೆಳಗಾವಿಯಲ್ಲಿ ಭಾಷಾ ವೈಷಮ್ಯದ ವಿಷ ಬೀಜ ಬಿತ್ತಿ ತಮ್ಮ ರಾಕೀಯ ಬೇಳೆ ಬೇಯಿಸಿಕೊಳ್ಳಲು ಪರದಾಡುತ್ತಿದ್ದಾರೆ
ಕೆಲವು ಮುಗ್ದ ಮರಾಠಿ ಭಾಷಿಕರನ್ನು ಸೇರಿಸಿಕೊಂಡು ಜಿಲ್ಲಾಧಿಕಾರಿಗಳ ಕಚೇರಿಗೆ ಆಗಮಿಸಿ ಮರಾಠಿ ಕಾಗದ ಪತ್ರ ಕೊಡಿ ಮರಾಠಿ ನಾಮ ಫಲಕ ಹಾಕಿ ಮರಾಠಿಯಲ್ಲಿ ಮತದಾರರ ಪಟ್ಟಿ ಪ್ರಿಂಟ್ ಮಾಡಿ,ಎನ್ನುವ ಬೇಡಿಕೆ ಇಟ್ಟು ಪುಂಡಾಟಿಕೆ ಪ್ರದರ್ಶನ ಮಾಡಿದ್ದಾರೆ
ಚುನಾವಣೆ ಸಮೀಪ ಆದಂತೆ ಎಂಈಎಸ್ ನಾಯಕರಿಗೆ ಮರಾಠಿ ಭಾಷಾ ಪ್ರೇಮ ಉಕ್ಕುವದು ಸಾಮಾನ್ಯ ಇವರ ಅಸಲಿಯತ್ತು ಸಾಮಾನ್ಯ ಮರಾಠಿಗರಿಗೆ ಗೊತ್ತಾಗಿದೆ ಅಧಿಕಾರ ಪಡೆಯಲು ಇವರು ಭಾಷಾಭಿಮಾನವನ್ನು ದುರ್ಬಳಕೆ ಮಾಡಿಕೊಳ್ಳುತ್ತಾರೆ ಎನ್ನುವದು ಎಲ್ಲರಿಗೂ ಗೊತ್ತಾಗಿರುವದರಿಂದ ನಾಡ ವಿರೋಧಿಗಳ ಆಟ ನಡೆಯುತ್ತಿಲ್ಲ
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ