Breaking News

ಮೆಡಿಕಲ್ ವಿದ್ಯಾರ್ಥಿಗಳಿಗೆ ಬ್ಲಾಕ್ ಮೇಲ್ ಮಾಡಿದ ಐವರು ನಕಲಿ ಕ್ರೈಂ ರಿಪೋರ್ಟರ್ ಗಳು ಅಂದರ್..

ಬೆಳಗಾವಿ- ನಗರದ ಕುಮಾರಸ್ವಾಮಿ ಲೇ ಔಟ್ ನ ಮನೆಯೊಂದರಲ್ಲಿ ಅಭ್ಯಾಸ ಮಾಡುತ್ತಿದ್ದ ಫಾರ್ಮಸಿ ಕಾಲೇಜಿನ ವಿಧ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ನಾವು ಮಿಡಿಯಾದವರು ನಮಗೆ 30 ಸಾವಿರ ರೂ ಹಣ ಕೊಡಿ ಇಲ್ಲದಿದ್ದರೆ ಮಿಡಿಯಾದಲ್ಲಿ ಮಾನ ಕಳೆಯುತ್ತೇವೆ ಎಂದು ಧಮಕಿ ಹಾಕಿದ ಬೆಳಗಾವಿಯ ಐದು ಜನ ನಕಲಿ ಕ್ರೈಂ ರಿಪೋರ್ಟರ್ ಗಳನ್ನು ಎಪಿಎಂಸಿ ಪೋಲೀಸರು ಬಂಧಿಸಿದ್ದಾರೆ

ಬೆಳಗಾವಿಯ ಫಾರ್ಮಸಿ ಕಾಲೇಜಿನ ಕೆಲವು ಹುಡುಗರು ಮತ್ತು ಹುಡುಗಿಯರು ಸೋಮನಾಥ ಸುರೇಶ ಮುಲ್ಲಾ ಎಂಬುವವನ ರೂಮಿನಲಿ ಅಭ್ಯಾಸ ಮಾಡುತ್ತಿರುವಾಗ  ಬೆಲ್ ಬಾರಿಸಿ ಮನೆಗೆ ನುಗ್ಗಿದ ಐದು ಜನ ಖದೀಮರು ಹುಡುಗರ ಫಾರ್ಮಸಿ ಕಾಲೇಜಿನ ಹುಡುಗರು ಮತ್ತು ಹುಡಗಿಯರ ಮೇಲೆ ಕೈ ಮಾಡಿದ್ದರೆ ಹುಡುಗರು ಹುಡಗಿಯರು ಒಂದೇ ಮನೆಯಲ್ಲಿ ಇರುವದು ಎಷ್ಟು ಸರಿ ಎಂದು ಈ ಖದಿಮರು ವಿಡಿಯೋ ರಿಕಾರ್ಡಿಂಗ್ ಮಾಡಿಕೊಂಡಿದ್ದಾರೆ

ನಮ್ಮದು ಟಿವ್ಹಿ ಚೇನಲ್ ಇದೆ ಪೇಪರ್ ಇದೆ ನಿಮ್ಮನ್ನೆಲ್ಲ ಅದರಲ್ಲಿ ತೀರಿಸುತ್ತೇವೆ ಇದೆಲ್ಲ ಮುಚ್ಚಿ ಹಾಕಲು ಮೂವತ್ತು ಸಾವರ ದುಡ್ಡು ಕೊಡಿ ಎಂದು ಫಾರ್ಮಸಿ ವಿದ್ಯಾರ್ಥಿಗಳಿಗೆ ಬ್ಲಾಕ್ ಮೇಲ್ ಮಾಡಿದ ಖದೀಮರನ್ನು ಈಗ ಎಪಿಎಂಸಿ ಠಾಣೆಯ ಪೋಲೀಸರು ಬಂಧಿಸಿದ್ದಾರೆ

ಫಾರ್ಮಸಿ ವಿಧ್ಯಾರ್ಥಿಗಳ ಮೇಲೆ ಹಲ್ಲೆ ಮಾಡಿ ಕ್ರೈಂ ರಿಪೋರ್ಟಗಳೆಂದು ಬೆದರಿಸಿದ ಬೆಳಗಾವಿ ಗಾಂಧೀ ನಗರದ ಆರೋಪಿ ಅಸ್ಲಂ ಇಮಾಮಹುಸೇನ ಮುಲ್ಲಾ,(40) ಹೊಸ ವಂಟಮೂರಿ ಕಾಲೋನಿ ಅಂಬೇಡ್ಕರ್ ಗಲ್ಲಿಯ ಮುಕ್ತಾರ ಅಹ್ಮದ ಉರ್ಫ ಬಾಬುಲ್ ಅಬ್ದುಲ್ ಖಾದರ ಬಸ್ಸಾಪೂರ (35) ,ಕೋತ್ವಾಲ ಗಲ್ಲಿಯ ಮಹ್ಮದ ಜಾಕ್ರಿಯಾ ಇಕ್ಬಾಲ್ ಮುಲ್ಲಾ( 35) ಗುಲ್ ಬಾಶಾ ಗಲ್ಲಿಯ ಸಾಧಿಕ ಅಬ್ದುಲ್ ಖಾದರ್ ಡೋಣಿ(42) ಯನುಸ್ ಬಾಬು ಐನಾಪೂರೆ 34  ಎಂಬಾತರನ್ನು ಎಪಿಎಂಸಿ ಪೋಲೀಸರು ಬಂಧಿಸಿಸಿದ್ದಾರೆ

ಬೆಳಗಾವಿಯಲ್ಲಿ ಕೆಲವರು ಪತ್ರಕರ್ತುರು ಎಂದು ಹೇಳಿ ಅಮಾಯಕರನ್ನು ಸುಲಿಗೆ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದ್ದು ನಗರದಲ್ಲಿರುವ ನಕಲಿ ಪತ್ರಕರ್ತರ ಪತ್ತೆಗೆ ವಿಶೇಷ ತಂಡ ರಚಿಸುವುದು ಅತ್ಯಗತ್ಯ

Check Also

ಈಜಲು ಹೋದ ಬಾಲಕ ನೀರು ಪಾಲು

ಬೆಳಗಾವಿ ಕೆರೆಯಲ್ಲಿ ಈಜಲು ಹೋದ ಬಾಲಕನೋರ್ವ ನೀರು ಪಾಲಾದ ಘಟನೆ ಬೆಳಗಾವಿ ತಾಲೂಕಿನ ವಾಘವಡೆ ಗ್ರಾಮದಲ್ಲಿ ನಡೆದಿದೆ.ಬೆಳಗಾವಿ ತಾಲೂಕಿನ ವಾಘವಡೆ …

Leave a Reply

Your email address will not be published. Required fields are marked *