ಬೆಳಗಾವಿ
ಸರ್ಕಾರ ಗಡಿಭಾಗದ ಮರಾಠಿ ಭಾಷಿಕರ ವಿರುದ್ಧ ಅನ್ಯಾಯ ಮಾಡುತ್ತಿದೆ ಈ ಅನ್ಯಾಯದ ವಿರುದ್ಧ ಮರಾಠಿ ಭಾಷಿಕ ಮಹಿಳೆಯರು ಕೈಯಲ್ಲಿ ಖಡ್ಗ ಹಿಡಿದು ಹೋರಾಟ ಮಾಡಿದಾಗಲೇ ಕರ್ನಾಟಕ ಸರ್ಕಾರಕ್ಕೆ ಬುದ್ಧಿ ಬರುತ್ತದೆ ಎಂದು ಎಂಈಎಸ್ ಜಿಲ್ಲಾ ಪಂಚಾಯ್ತಿ ಸದಸ್ಯೆ ಸರಸ್ವತಿ ಪಾಟೀಲ ಪುಂಡಾಟಿಕೆಯ ಮಾತುಗಳನ್ನಾಡಿ ಮುಗ್ಧ ಮರಾಠಿ ಭಾಷಿಕರನ್ನು ಕರ್ನಾಟಕ ಸರ್ಕಾರದ ವಿರುದ್ಧ ಎತ್ತಿ ಕಟ್ಟುವ ಪುಂಡಾಟಿಕೆಯನ್ನು ಪ್ರದರ್ಶನ ಮಾಡಿದ್ದಾರೆ
ಗುರುವಾರ ಬೆಳಿಗ್ಗೆ ಹಿಂಡಲಗಾ ಗ್ರಾಮದಲ್ಲಿ ಹುತಾತ್ಮ ಸ್ಮಾರಕದಲ್ಲಿ ಹುತಾತ್ಮರಿಗೆ ಶೃದ್ಧಾಂಜಲಿ ಅರ್ಪಿಸಿ ಮಾತನಾಡಿದ ಸರಸ್ವತಿ ಪಾಟೀಲ ಕರ್ನಾಟಕ ಸರ್ಕಾರದ ವಿರುದ್ಧ ಪುಂಡಾಟಿಕೆಯ ಮಾತುಗಳನ್ನಾಡಿ ಉದ್ಧಟತನವನ್ನು ತೋರಿದಿದ್ದಾರೆ
ಎಂಈಎಸ್ ನಾಯಕ ಟಿಕೆ ಪಾಟೀಲ ಮತ್ತು ಶಾಸಕ ಅರವಿಂದ ಪಾಟೀಲ ಮಾತನಾಡಿ ಕರ್ನಾಟಕ ಸರ್ಕಾರ ಮಹಾರಾಷ್ಟ್ರದ ಮಂತ್ರಿಗಳನ್ನು ಬೆಳಗಾವಿಗೆ ಬಾರದಂತೆ ನಿರ್ಭಂಧ ಹೇರುತ್ತದೆ ಆದರೆ ಬೆಂಗಳೂರಿನ ನಾಯಕರು ಬೆಳಗಾವಿಗೆ ಬಂದು ಪ್ರಚೋದನಕಾರಿ ಭಾಷಣ ಮಾಡಲು ಅವಕಾಶ ಕೊಡುತ್ತಿದೆ ವಾಟಾಳ್ ನಾಗರಾಜ್ ಅವರನ್ನು ಬೆಳಗಾವಿಗೆ ಬರಲು ಅನುಮತಿ ಕೊಟ್ಟಿದ್ದಾರೆ ಇದು ಅನ್ಯಾಯ ಅಲ್ಲವೇ ಎಂದು ಎಂಈಎಸ್ ನಾಯಕರು ಆರೋಪಿಸಿದ್ದಾರೆ ಶಾಸಕ ಅರವಿಂದ ಪಾಟೀಲ ತಮ್ಮ ಭಾಷಣದ ಕೊನೆಯಲ್ಲಿ ಬೆಳಗಾವಿ ಬೀದರ ಬಾಲ್ಕಿ ಖಾನಾಪೂರ ಸಹಿತ ಸಂಯುಕ್ತ ಮಹಾರಾಷ್ಟ್ರ ಝಾಲಾಚ್ ಪಾಯಿಜೆ ಎಂದು ಘೋಷಣೆ ಕೂಗಿದ್ದಾರೆ