ಬೆಳಗಾವಿ-ಬೆಳಗಾವಿ ಮಹಾನಗರ ಪಾಲಿಕೆಯ ನಾಲ್ಕೂ ಸ್ಥಾಯಿ ಸಮಿತಿಗಳು ನಾಡವಿರೋಧಿ ಎಂಇಎಸ್ ಪಾಲಾಗಿವೆ. ಎಲ್ಲ ಸಮಿತಿಗಳಿಗೆ ಅಧ್ಯಕ್ಷರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಸೋಮವಾರ ಬೆಳಿಗ್ಗೆ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯದೇ ಎಲ್ಲ ಅಧ್ಯಕ್ಷರುಗಳು ಅವಿರೋಧವಾಗಿ ಆಯ್ಕೆಯಾದರು ಎಂಇಎಸ್ ನಾಯಕರು ಕೊಟ್ಟ ಮಾತಿನಂತೆ ನಡೆಯಲಿಲ್ಲ ಸಮಝೋಥಾ ಎಕ್ಸಪ್ರೆಸ್ ಇರುವದು ಕೇವಲ ನಾಮ ಕೆ ವಾಸ್ತೆ ಎನ್ನುವದು ಸಾಭಿತಾಯಿತು.
ತೆರಿಗೆ ಮತ್ತು ಹಣಕಾಸು ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ರತಣ ಮಾಸೇಕರ,ಆರೋಗ್ಯ ಮತ್ತು ಸಾಮಾಜಿಕ ನ್ಯಾಯ ಸಮಿತಿಯ ಅದ್ಯಕ್ಷರಾಗಿ ರೂಪಾ ಶಿವಾಜಿ ನೇಸರಕರ.ನಗರ ಯೋಜನಾ ಸಮಿತಿಯ ಅಧ್ಯಕ್ಷರಾಗಿ ವಿನಾಯಕ ಗುಂಜಟಕರ,ಲೆಕ್ಕಪತ್ರಗಳ ಸ್ಥಾಯಿ ಸಮಿತಿಯ ಅಧ್ಯಕ್ಷರಾಗಿ ದಿನೇಶ ಪ್ರಕಾಶ ರಾವಳ ಅವರು ಅವಿರೋಧವಾಗಿ ಆಯ್ಕೆಯಾದರು.
ಸೂತ್ರದಾರರಾಗಿ ಶಾಸಕ ಸಂಬಾಜಿ ಪಾಟೀಲ ಮಾಜಿ ಮಹಾಪೌರ ಕಿರಣ ಸೈನಾಯಿಕ್ ಸೇರಿದಂತೆ ಹಲವರು ಊಪಸ್ಥಿತರಿದ್ದರು
ಬೆಳಗಾವಿ ಸುದ್ದಿ | Belagavi Suddi | Belagavi News ಸಮಸ್ಯಗೆ ಸ್ಪಂದನೆ